ಇಂದಿನಿಂದ ಸಂವಿಧಾನ ಜಾಗೃತಿ ಜಾಥಾ ಅಭಿಯಾನ

29

Get real time updates directly on you device, subscribe now.


ತುಮಕೂರು: ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಇಂದಿನಿಂದ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.
ನೋಡಲ್ ಅಧಿಕಾರಿಗಳ ನೇಮಕ
ಸಂವಿಧಾನ ಜಾಗೃತಿ ಜಾಥಾ ಅಭಿಯಾನ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಹಾಗೂ ಎಲ್ಲಾ ತಾಲೂಕುಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿ 2 ಸ್ತಬ್ದಚಿತ್ರ ವಾಹನದ ಮೂಲಕ ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುವುದು ನಿಗದಿತ ದಿನಾಂಕದಂದು ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಜನ ಸಾಮಾನ್ಯರಿಗೆ ಸಂವಿಧಾನದ ಮಹತ್ವದ ಬಗ್ಗೆ ಜನ ಜಾಗೃತಿ ಮೂಡಿಸಲಿದೆ, ಸಂವಿಧಾನದ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಅಖಂಡತೆ, ಏಕತೆ, ಸಾಮಾಜಿಕ ನ್ಯಾಯ ತತ್ವಗಳ ಬಗ್ಗೆ ಪ್ರಚಾರ ಮಾಡಲಿದೆ.
ಸ್ತಬ್ದ ಚಿತ್ರ 2 ವಾಹನಗಳಿಗೂ ಪ್ರತ್ಯೇಕ ಮಾರ್ಗ ನಕ್ಷೆ ಸಿದ್ಧಪಡಿಸಿ ದಿನಾಂಕ ನಿಗದಿಪಡಿಸಲಾಗಿದೆ ಮಾರ್ಗ ನಕ್ಷೆ ಪ್ರಕಾರ 1ನೇ ಸ್ತಬ್ದಚಿತ್ರ ವಾಹನ ಜನವರಿ 26 ರಿಂದ 31ರ ವರೆಗೆ ತುಮಕೂರು ತಾಲೂಕು, ಫೆಬ್ರವರಿ 1 ರಿಂದ 7ರ ವರೆಗೆ ಕುಣಿಗಲ್, ಫೆ.8 ರಿಂದ 12ರ ವರೆಗೆ ಗುಬ್ಬಿ, ಫೆ.13 ರಿಂದ 18ರ ವರೆಗೆ ತುರುವೇಕೆರೆ, ಫೆ.19 ರಿಂದ 23ರ ವರೆಗೆ ತಿಪಟೂರು ತಾಲೂಕಿನಲ್ಲಿ ಹಾಗೂ 2ನೇ ಸ್ತಬ್ದಚಿತ್ರ ವಾಹನವು ಜನವರಿ 26 ರಿಂದ 30ರ ವರೆಗೆ ಚಿಕ್ಕನಾಯಕನ ಹಳ್ಳಿ, ಜನವರಿ 31 ರಿಂದ ಫೆ.6ರ ವರೆಗೆ ಶಿರಾ, ಫೆ.7 ರಿಂದ 10ರ ವರೆಗೆ ಕೊರಟಗೆರೆ, ಫೆ.11 ರಿಂದ 16ರ ವರೆಗೆ ಮಧುಗಿರಿ, ಫೆ.17 ರಿಂದ 23ರ ವರೆಗೆ ಪಾವಗಡ ತಾಲೂಕು ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಸಂವಿಧಾನ ಮಹತ್ವದ ಬಗ್ಗೆ ಅರಿವು ಮೂಡಿಸಲಿದೆ.

ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಕಲಾವಿದರು, ಸಂಘ- ಸಂಸ್ಥೆಗಳು, ಸಾರ್ವಜನಿಕರು ಒಟ್ಟಾಗಿ ಈ ಅಭಿಯಾನದಲ್ಲಿ ಪಾಲ್ಗೊಂಡು ವಿಶ್ವ ಶ್ರೇಷ್ಠ ಭಾರತ ಸಂವಿಧಾನದ ಆಶಯದಂತೆ ಭಾರತದ ಏಕತೆ, ಅಖಂಡತೆ ಬಗ್ಗೆ ಎಲ್ಲರಿಗೂ ಅರಿವು ಮೂಡಿಸೋಣ ಎಂದು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!