ಚಂದ್ರಮೌಳೀಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

20

Get real time updates directly on you device, subscribe now.


ತುಮಕೂರು: ತುಮಕೂರಿನ ಕ್ಯಾತಸಂದ್ರದ ಹರಿಹರ ಕ್ಷೇತ್ರವೆಂದೇ ಪ್ರಸಿದ್ಧವಾದ ಶ್ರೀಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀ ಚಂದ್ರಮೌಳೀಶ್ವರ ಸ್ವಾಮಿಯ 120 ನೇ ಬ್ರಹ್ಮರಥೋತ್ಸವ ಬನದ ಹುಣ್ಣಿಮೆಯಂದು ಶುಭ ಅಭಿಜನ್ ಮಹೂರ್ತದಲ್ಲಿ ದೇಗುಲದ ಧರ್ಮಕರ್ತ ಕೆ.ವೈ.ಚಂದ್ರಶೇಖರ್ ನೇತೃತ್ವದಲ್ಲಿ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ವೈಭವದಿಂದ ನೆರವೇರಿತು.
ರಥೋತ್ಸವಕ್ಕೆ ಪೂರಕವಾಗಿ ಬೆಳಗ್ಗೆ 7 ಗಂಟೆಯಿಂದ ನವಗ್ರಹ ಪುರಸ್ಸರ ಮೃತ್ಯುಂಜಯ ಹೋಮ, ರಥಾಂಗ ಹೋಮ, ಬಲಿಪ್ರದಾನ ಮತ್ತಿತರ ಧಾರ್ಮಿಕ ಪೂಜಾದಿ ವೈದಿಕ ವಿದ್ವಾಂಸರಾದ ಕೆ.ವೈ.ನರಸಿಂಹ ಮೂರ್ತಿ, ಕೆ.ವೈ.ಲಕ್ಷ್ಮೀನರಸಿಂಹ ಶಾಸ್ತ್ರಿ, ಸುಬ್ರಹ್ಮಣ್ಯಶಾಸ್ತ್ರಿ, ಪ್ರಶಾಂತ್ ಭಟ್, ರವಿಶರ್ಮ ನೇತೃತ್ವದಲ್ಲಿ ನಡೆದವು, ಮಾಜಿ ನಗರಸಭಾ ಸದಸ್ಯ ರಮೇಶಾಚಾರ್, ಮುಖಂಡರಾದ ಜಿ.ಎಲ್.ರವಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು, ಸಂಜೆ 6 ಗಂಟೆಯಿಂದ ಧವಳೋತ್ಸವ, ಶ್ರೀಸತ್ಯ ನಾರಾಯಣ ವ್ರತ ನಡೆಯಿತು, ಜ.26 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ರ ವರೆಗೆ ನಿತ್ಯಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ಶ್ರೀಲಕ್ಷ್ಮೀನರಸಿಂಹ ಕಲ್ಯಾಣೋತ್ಸವ, ಸಂಜೆ 6 ರಿಂದ 9 ರ ವರೆಗೆ ಶಯನೋತ್ಸವ, ಚಂಡಿಕಾ ಪಾರಾಯಣ ನಡೆಯುವುದು, ಜ.27 ರಂದು ಬೆಳಗ್ಗೆ 8.30 ರಿಂದ ಮಧ್ಯಾಹ್ನ 1.30 ರವರೆಗೆ ಶ್ರೀ ಚಂಡಿಕಾ ಹೋಮ, ಕುಮಾರಿ ಪೂಜೆ, ಸುಹಾಸಿನಿ ಪೂಜೆ, ಪೂರ್ಣಾಹುತಿ, ಮಹಾ ಮಂಗಳಾರತಿ ನೆರವೇರಲಿದೆ.

Get real time updates directly on you device, subscribe now.

Comments are closed.

error: Content is protected !!