ಭಾರತ ಅಭಿವೃದ್ಧಿಶೀಲ ಮಾದರಿ ರಾಷ್ಟ್ರ

31

Get real time updates directly on you device, subscribe now.


ಮಧುಗಿರಿ: ಇಂದು ಭಾರತ ದೇಶವು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದು, ಮಾದರಿ ರಾಷ್ಟ್ರವಾಗಿದೆ ಎಂದು ಪ್ರಭಾರ ಉಪ ವಿಭಾಗಾಧಿಕಾರಿ ಕುಮಾರ್ ಗೌರವ್ ಶೆಟ್ಟಿ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 75ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದೆ, ಭಾರತದ ಆಡಳಿತ ವ್ಯವಸ್ಥೆಯಲ್ಲಿ ಜಾರಿಯಲ್ಲಿದ್ದ ರಾಜಪ್ರಭುತ್ವ ಮತ್ತು ಸಾಮ್ರಾಜ್ಯ ಶಾಹಿ ಪ್ರಭುತ್ವ ಈ ಎರಡು ಆಡಳಿತ ವಿಧಾನಗಳನ್ನು ನಿರ್ಮೂಲನೆ ಮಾಡಿ ಪ್ರಜಾಪ್ರಭುತ್ವ ಎಂಬ ಹೆಚ್ಚು ಜನಪರವಾದ ವ್ಯವಸ್ಥೆ ಅಳವಡಿಸಿಕೊಂಡ ಮತ್ತು ರೂಪಿಸಿಕೊಂಡ ದಿನವೇ ಗಣರಾಜ್ಯ, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವಾಗಿದೆ ಎಂದರು.

ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿರುವ ಭಾರತವು ಮುಂಚೂಣಿಯಲ್ಲಿದೆ, ಭಾರತ ಮಾದರಿ ರಾಷ್ಟ್ರವಾಗಿದ್ದು, ನಮ್ಮ ದೇಶದ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಸಮಗ್ರತೆ ನೈತಿಕತೆ ಮೌಲ್ಯ ಅಳವಡಿಸಿಕೊಂಡು ಬಲಿಷ್ಠ ಅಭಿವೃದ್ಧಿಶೀಲ ಪಥದತ್ತ ನಮ್ಮ ದೇಶವನ್ನು ಕೊಂಡೊಯ್ಯಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಏರ್ಪಡಿಸಲಾಗಿತ್ತು, ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡಗಳಿಂದ ಪಾರಾಗುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಗಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಪಂ ಇಓ ಲಕ್ಷ್ಮಣ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಬಿಇಓ ಹನುಮಂತರಾಯಪ್ಪ, ಕೃಷಿ ಇಲಾಖೆಯ ಉಪ ನಿರ್ದೇಶಕಿ ದೀಪಶ್ರೀ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮಿ ನರಸಯ್ಯ, ಎಡಿಓ ಮಧುಸೂದನ್, ಲೋಕೋಪಯೋಗಿ ಇಲಾಖೆಯ ಇಇ ಸುರೇಶ್ ರೆಡ್ಡಿ, ಜಿಲ್ಲಾ ಪಂಚಾಯತ್ ಎಇಇ ದಯಾನಂದ್ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!