ಕೊಡಿಗೇನಹಳ್ಳಿ: ಕಳೆದ ಹತ್ತು ಹದಿನೈದು ವರ್ಷಗಳಿಂದ ರುಧ್ರಭೂಮಿಯಲ್ಲಿ ಗಿಡಗಂಟೆಗಳು ಬೆಳೆದು ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿತ್ತು, ಈ ಬಗ್ಗೆ ಸಾರ್ವಜನಿಕರು ಗ್ರಾಪಂ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕೂಲಿಯಾಳುಗಳನ್ನು ಕರೆಸಿ ಗ್ರಾಪಂ ಅಧ್ಯಕ್ಷೆ ಮಂಜುಳ ಶ್ರೀನಿವಾಸ್ ಖುದ್ದು ಸ್ಥಳಕ್ಕೆ ಆಗಮಿಸಿ ಸ್ವಚ್ಚತೆಗೆ ಕ್ರಮ ಕೈಗೊಂಡರು.
ಸ್ಮಶಾನದ ತುಂಬಾ ಸೀಮೆ ಜಾಲಿ ಗಿಡಿಗಳು ಬೆಳೆದಿದ್ದರಿಂದ ತ್ಯಾಜ್ಯ ತುಂಬಿ ತುಳುಕುತ್ತಿತ್ತು, ವಿಷಪೂರಿತ ಪ್ರಾಣಿ ಮತ್ತು ಕೀಟಗಳ ವಾಸಸ್ಥಾನವಾಗಿತ್ತು, ಇದೀಗ ಸೂಕ್ತ ಅನುಕೂಲಕರ ವಾತವರಣ ನಿರ್ಮಾಣವಾಗಿದ್ದು, ಹಬ್ಬ ಹರಿದಿನಗಳಿಗೆ ಬರುವವರು, ಮೃತಪಟ್ಟ ಪೋಷಕರು ಅಥವಾ ಸಂಬಂಧಿಕರ ಸಮಾದಿಗೆ ಪೂಜೆ ಸಲ್ಲಿಸಲು ಸೂಕ್ತ ಅನುಕೂಲ ಕಲ್ಪಿಸಿದಂತಾಗಿದೆ ಎಂದು ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಕೃಷ್ಣ, ವಿಎಸ್ಸೆಸ್ಸೆಎನ್ ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಮುಖಂಡರು ಹಾಜರಿದ್ದರು.
ಸಾರ್ವಜನಿಕರ ರುಧ್ರಭೂಮಿ ಸ್ವಚ್ಛತೆಗೆ ಕ್ರಮ
Get real time updates directly on you device, subscribe now.
Prev Post
Comments are closed.