ಎಟಿಎಂಗೆ ನುಗ್ಗಿದ ಬೊಲೆರೋ.. ಎಟಿಎಂ ಡೋರ್ ಪೀಸ್ ಪೀಸ್!

ಮಹಿಳೆ ಸ್ಥಿತಿ ಏನು ಗೊತ್ತಾ?

451

Get real time updates directly on you device, subscribe now.


ತುರುವೇಕೆರೆ: ಎಟಿಎಂಗೆ ವಾಹನ ನುಗ್ಗಿಸಿದ ವಿಚಿತ್ರ ಅಪಘಾತವೊಂದು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿರುವ ಎಟಿಎಂಗೆ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ನುಗ್ಗಿದ ಪರಿಣಾಮ ಎಟಿಎಂ ನೊಳಗೆ ಹಣ ಏಣಿಸುತ್ತಿದ್ದ ಮಹಿಳೆ ತೀವ್ರತರ ಗಾಯಗೊಂಡು ಅಸ್ಪತ್ರೆ ಸೇರಿದ ಘಟನೆ ಶನಿವಾರ ಸಂಜೆ ನಡೆದಿದೆ.
ಕರ್ನಾಟಕ ಬ್ಯಾಂಕ್ ಎಟಿಎಂ ನಲ್ಲಿ ನಗದು ಬಿಡಿಸಲು ಹೋದ ಮಹಿಳೆ ತೀವ್ರತರ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ ಆಕೆ ಶಾಕ್ ಗೆ ಒಳಗಾಗಿ, ಮಹಿಳೆ ಅಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೊಲೆರೋ ವಾಹನದ ಬ್ರೇಕ್ ಫೇಲ್ ಆಗಿದ್ದೇ ಇಷ್ಟೆಲ್ಲಾ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕರ್ನಾಟಕ ಬ್ಯಾಂಕ್ ನ ಎಟಿಎಂ ನ ಗಾಜಿನ ಬಾಗಿಲು ಸಂಪೂರ್ಣ ಕಳಚಿ ಬಿದ್ದಿದೆ. ಮುಂದೆ ನಿಲ್ಲಿಸಲಾಗಿದ್ದ ಎರಡು ಬೈಕ್ ಗಳು ಸಹ ಜಖಂಗೊಂಡಿವೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿಗಾಗಿ ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!