ಭಾರತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

20

Get real time updates directly on you device, subscribe now.


ತುಮಕೂರು: ಭಾರತ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ತುಮಕೂರು ತಾಲ್ಲೂಕಿನ ಗಂಗೋನಹಳ್ಳಿ, ಹೆಬ್ಬೂರು, ಅರಿಯೂರು, ಸಿರಿವಾರ, ಬಳ್ಳಗೆರೆ, ಕನಕುಪ್ಪೆ ಮತ್ತು ಗಳಿಗೇನಹಳ್ಳಿ ಗ್ರಾಪಂಗಳಲ್ಲಿ ಹಾಗೂ ಶಿರಾ ತಾಲ್ಲೂಕಿನ ಗೋಪಾಲ ದೇವರಹಳ್ಳಿ, ಯಲಡಬಾಗಿ, ಸೀಬಿ, ಸೀಬಿ ಅಗ್ರಹಾರ, ಕಳಂಬೆಳ್ಳ ಮತ್ತು ಬುವನಹಳ್ಳಿ ಗ್ರಾಮ ಪಂಚಾಯ್ತಿಗಳಲ್ಲಿ ಹಮ್ಮಿಕೊಳ್ಳಲಾಯಿತು.
ಈ ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ನಿಗದಿಪಡಿಸಿರುವ ವೇಳಾ ಪಟ್ಟಿಯಂತೆ ಸ್ಥಳೀಯ ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಭಾರತ ಸಂವಿಧಾನ ಜಾಗೃತಿ ಜಾಥಾಕ್ಕೆ ಕುಂಬ ಕಳಸ, ಆರತಿಗಳೊಂದಿಗೆ ಹೊತ್ತು ತಂದು ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡು ಸಂವಿಧಾನ ಪೀಠಿಕೆ ಓದಿ ಹೇಳಲಾಯಿತು ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು, ಶಿಕ್ಷಕರು ಸಂವಿಧಾನ ಕುರಿತಂತೆ ವಿಷಯ ಮತ್ತು ಮಹತ್ವ ತಿಳಿಸಿಕೊಟ್ಟರು.

ಒಟ್ಟಾರೆ ಭಾರತ ಸಂವಿಧಾನ ಜಾಗೃತಿ ಜಾಥಾ ಈ ಹಿಂದೆಯೇ ನಿಗದಿಪಡಿಸಿರುವ ರೂಟ್ ಮ್ಯಾಪ್ ನಂತೆ ನಿಗದಿತ ಪಂಚಾಯ್ತಿಗಳಿಗೆ ಸಂಚರಿಸಿ ಭಾರತ ಸಂವಿಧಾನ ಕುರಿತು ವಿವಿಧ ಕಾರ್ಯಕ್ರಮಗಳ ಮೂಲಕ ಸಡಗರ ಸಂಭ್ರಮದಿಂದ ಕೂಡಿದ ಕಾರ್ಯಕ್ರಮ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ವಿಶೇಷವಾಗಿ ಭಾರತ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅಭಿಮಾನ, ಆಸಕ್ತಿ, ಅರಿವು ಮೂಡುವಂತಾಗಿದೆ, ಭಾರತ ಸಂವಿಧಾನ ಜಾಗೃತಿ ಕಾರ್ಯಕ್ರಮ ಎಲ್ಲಾ ಪಂಚಾಯ್ತಿಗಳಲ್ಲಿ ನಡೆಯುತ್ತಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ಪಾಲ್ಗೊಳ್ಳುವಿಕೆಯಿಂದಾಗಿ ತುಮಕೂರು ಜಿಲ್ಲೆಯಲ್ಲಿ ಸರ್ವರಲ್ಲಿಯೂ ಸಂಚಲನ ಮತ್ತು ಸಂತೋಷ ಉಂಟು ಮಾಡಿದೆ, ಈ ಹಿಂದೆ ಯಾವ ವರ್ಷದಲ್ಲೂ ಭಾರತ ಸಂವಿಧಾನ ಕುರಿತು ಜಾಗೃತಿ ಮತ್ತು ಅರಿವು ಕಾರ್ಯಕ್ರಮ ನಡೆದಿರುವುದಿಲ್ಲ, ಸಂವಿಧಾನಕ್ಕೆ 75 ವರ್ಷ ತುಂಬಿರುವ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಜಿಲ್ಲೆಯ ಸರ್ವಜನರಲ್ಲಿ ಹೊಸ ಸಂಚಲನ ಮತ್ತು ಸಂತೋಷವನ್ನುಂಟು ಮಾಡಿದೆ.

Get real time updates directly on you device, subscribe now.

Comments are closed.

error: Content is protected !!