ಭರವಸೆಯ ಬಜೆಟ್ ಮಂಡನೆ: ಡಾ.ಪರಮೇಶ್

22

Get real time updates directly on you device, subscribe now.


ತುಮಕೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದುಡಿಯುವ ವರ್ಗಗಳಿಗೆ ಭರವಸೆ ನೀಡುವಂತಹ ಬಜೆಟ್ ಮಂಡಿಸಿದ್ದು, ಐದು ಟ್ರಿಲಿಯನ್ ಗೆ ಭಾರತದ ಆರ್ಥಿಕತೆ ಉನ್ನತೀಕರಿಸಿ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಸಾಕಷ್ಟು ಮಹತ್ವದ ಯೋಜನೆ ಘೋಷಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಖಜಾಂಚಿ ಡಾ.ಎಸ್.ಪರಮೇಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸತತ ಆರನೇ ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಎಲ್ಲಾ ವರ್ಗದ ಜನರನ್ನೂ ಅಭಿವೃದ್ಧಿ ಕಡೆಗೆ ಕರೆದೊಯ್ಯುವ ದೂರದೃಷ್ಟಿ ಬಜೆಟ್ ಮಂಡಿಸಿದ್ದಾರೆ, ಆದಾಯ ತೆರಿಗೆ ಮಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಿರುವುದು, ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ಸೌರ ವಿದ್ಯುತ್ ನೀಡಿರುವುದು, ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳ ನಿರ್ಮಾಣದಂತಹ ಯೋಜನೆ ರೂಪಿಸಿರುವುದು ಬಡವರ ಪಾಲಿಗೆ ಆಸರೆಯಾಗಿದೆ.

ಇನ್ನು ಗ್ರಾಮೀಣ ಜನರ ಆರೋಗ್ಯ ಹಾಗೂ ಶಿಶುಗಳ ಶಿಕ್ಷಣದ ಜವಾಬ್ದಾರಿ ಹೊತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ ಆಯುಷ್ಮಾನ್ ಭಾರತದ ಅಡಿಯಲ್ಲಿ ಆರೋಗ್ಯ ರಕ್ಷೆ ನೀಡಿರುವುದು ಮಹತ್ವದ ಘೋಷಣೆ, ಗರ್ಭಕೋಶ ಕ್ಯಾನ್ಸರ್ ತಡೆಗೆ ಉಚಿತ ಲಸಿಕೆ ನೀಡಿರುವುದು ಮಹಿಳೆಯರ ಪಾಲಿನ ಸಂಜೀವಿನಿಯಾಗಲಿದೆ, ರೈಲ್ವೆ, ವಿಮಾನಯಾನ, ಕೃಷಿ, ಕೈಗಾರಿಕೆ, ಸಾರಿಗೆ, ಧಾರ್ಮಿಕತೆ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಹಣ ಹೊಂದಿಸಿಕೊಂಡು ಮಂಡಿಸಿರುವ ಬಜೆಟ್ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಭಾರತಕ್ಕೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!