ಮಧುಗಿರಿ: ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು, ತಮ್ಮ ಮಕ್ಕಳು ಇದೇ ವೃತ್ತಿಯಲ್ಲಿ ಮುಂದುವರೆಸ ಬಾರದೆಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಿವಿ ಮಾತು ಹೇಳಿದರು.
ಪಟ್ಟಣದ ಎಲ್ ಐ ಸಿ ಕಚೇರಿಯ ಸಮೀಪದ ಕಟ್ಟಡದಲ್ಲಿ ತಾಲ್ಲೂಕು ಮಸ್ಯ ಮಾರಾಟಗಾರ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ಸಂಘ ಸಂಸ್ಥೆಗಳ ಮೂಲಕ ಪದಾಧಿಕಾರಿಗಳು ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ಮಾಡಬೇಕು, ನಿಮ್ಮ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಹಾಗೂ ಅಧಿಕಾರಿಗಳು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ, ನೀವುಗಳು ಅಧಿಕಾರಿಗಳಿಗೆ ಗೌರವದಿಂದ ಕಂಡರೆ ಅವರು ಸಹ ಅದೇ ರೀತಿ ನಿಮಗೆ ಗೌರವದಿಂದ ಕಾಣುತ್ತಾರೆ, ಆಗ ಮಾತ್ರ ಯಾವುದೇ ರೀತಿಯ ಸಮಸ್ಯೆ ಉದ್ಭವಿಸುವುದಿಲ್ಲ, ಸಂಸ್ಥೆಗಳಲ್ಲಿನ ಪದಾಧಿಕಾರಿಗಳು ಪ್ರೀತಿ ವಿಶ್ವಾಸದಿಂದ ಇರಬೇಕು, ನಾನು, ನನ್ನದು ಎಂಬ ಅಹಂ ತೊರೆದಾಗ ಸಂಘ ಅಭಿವೃದ್ಧಿಯಾಗಲು ಸಾಧ್ಯ, ಸಂಘವನ್ನು ಉತ್ತಮ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು, ಈ ಸಂಘ ಯಾರ ವಿರುದ್ಧವೋ ಅಲ್ಲ ಯಾರ ಪರವೂ ಅಲ್ಲ, ಮಾರಾಟಗಾರರ ಒಳಿತಿಗಾಗಿ ಎಂದರು.
ಡಿವೈಎಸ್ ಪಿ ರಾಮಚಂದ್ರಪ್ಪ, ಅಬಕಾರಿ ನೀರೀಕ್ಷ ರಾಮಮೂರ್ತಿ, ಗೌರವಾಧ್ಯಕ್ಷ ಹೆಚ್.ಮಹಾದೇವ್, ತಾಲ್ಲೂಕು ಅಧ್ಯಕ್ಷ ಜೆ.ಪಿ.ಶಿವಣ್ಣ ಮಲ್ಲಸಂದ್ರ, ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ರಾಘವೇಂದ್ರ, ಜಿಲ್ಲಾಧ್ಯಕ್ಷ ಡಿ.ಎಸ್.ಕುಮಾರ್, ಮುಖ್ಯ ಸಲಹೆಗಾರ ಎಂ.ಜಿ.ಶ್ರೀನಿವಾಸಮೂರ್ತಿ, ಸನ್ನದುದಾರರಾದ ಲಕ್ಷ್ಮೀ ನರಸಿಂಹಯ್ಯ, ಚಿಕ್ಕಣ್ಣ , ಹಾಲಪ್ಪ, ಬಿ.ಎ.ರಮೇಶ್, ಸೀನಪ್ಪ, ಜಯರಾಂ, ರಾಮಣ್ಣ, ಸುರೇಶ್, ಆನಂದ್, ನಾಗರಾಜು ಮತ್ತಿತರರು ಇದ್ದರು.
Comments are closed.