ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಅನಿವಾರ್ಯ

36

Get real time updates directly on you device, subscribe now.


ತುಮಕೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳು ಸೂಕ್ತವಾಗಿ ಸಿದ್ಧರಾಗಬೇಕೆಂದರೆ ಅದಕ್ಕೆ ಪೂರಕವಾದ ವಾತಾವರಣ, ಅವಕಾಶ ಒದಗಿಸಿಕೊಡುವುದು ಇಂದಿನ ಶಿಕ್ಷಣ ಕ್ಷೇತ್ರದ ಅಗತ್ಯತೆ, ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಬಾರದು ಎಂಬುದುನಮ್ಮ ಉದ್ದೇಶ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದರು.
ವಿದ್ಯಾನಿಧಿ ವಿ-ಟೆಕ್ನೋ ಎಸ್ ವಿ ಪಿ ಕಾಲೇಜು ತಿಪಟೂರಿನಲ್ಲಿ ಆಯೋಜಿಸಲಾಗಿದ್ದ ವಿ- ಇನ್ಸ್ಪಯರ್ಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಎಸ್ ವಿ ಪಿ ಸಂಸ್ಥಾಪಕ ಎಸ್.ಕೆ.ರಾಜಶೇಖರ್ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಸ್ಥಾಪಿಸಿದ್ದೆವು, ಇದೀಗ ಒಂದು ಹೆಜ್ಜೆ ಮುಂದಿಟ್ಟು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ ವೇಗಕ್ಕೆ ಹೊಂದಿಕೊಂಡಂತಹ ಕಾರ್ಯ ದಕ್ಷತೆಯುಳ್ಳ ವಿದ್ಯಾನಿಧಿ ವಿ-ಟೆಕ್ನೋ ಸಹಯೋಗದಲ್ಲಿ ಇಲ್ಲಿನ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಲಿದೆ, ಪೋಷಕರೂ ವಿದ್ಯಾರ್ಥಿಗಳೂ ನಿಮಗೆ ಒದಗಿ ಬಂದಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಎಸ್. ಬಿ.ಜಗದೀಶ್ ಮತ್ತುಕೆ.ಎನ್.ರೇಣುಕಯ್ಯ, ಕಾಲೇಜು ಉಪನ್ಯಾಸಕ ವೃಂದ, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾದರು, ಅನೇಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

Get real time updates directly on you device, subscribe now.

Comments are closed.

error: Content is protected !!