ಸಿಎಂ ಸಿದ್ದರಾಮಯ್ಯ ಸುಳ್ಳುರಾಮಯ್ಯ

ರಾಜ್ಯದ ಜನರೇ ಈ ಬಿರುದು ಕೊಟ್ಟಿದ್ದಾರೆ: ಸಿ.ಟಿ.ರವಿ

39

Get real time updates directly on you device, subscribe now.


ಕುಣಿಗಲ್: ಸುಳ್ಳುಗಳನ್ನೆ ಹೇಳಿ ಅಧಿಕಾರ ಹಿಡಿದಿರುವ ರಾಜ್ಯ ಕಾಂಗ್ರೆಸ್ ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಳ್ಳುರಾಮಯ್ಯ ಹೆಸರು ಜನ ಕೊಟ್ಟ ಬಿರುದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಗುರುವಾರ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಪ್ರವಾಸಿ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯನ್ನು ಸಮರ್ಥವಾಗಿ ಎದುಸಿದಲಾಗದೆ, ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ನೀಡಿದರೂ ಸುಳ್ಳನ್ನೇ ಹೇಳುತ್ತಾ ರಾಜ್ಯದ ಜನರ ತೆರಿಗೆ ಹಣದಲ್ಲಿ ದಿಲ್ಲಿಯಲ್ಲಿ ಬಂದು ಸುಳ್ಳಿನ ನಾಟಕವಾಡಿ ರಾಜ್ಯದ ಜನರನ್ನು ವಂಚಿಸಲು ಹೊರಟಿದ್ದಾರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ವಿಷಯದಲ್ಲಿ ವಾಯ್ಸ್ಲೆಸ್ ಆಗಿದ್ದ ಕಾಂಗ್ರೆಸ್ಸಿಗರು ಇದೀಗ ಪ್ರಧಾನಿ ಮೋದಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆಂದು ಸುಳ್ಳಿನ ಲೆಕ್ಕ ಹೇಳುತ್ತಿದ್ದಾರೆ, ಸುಳ್ಳಿನ ಅಸ್ತ್ರಕ್ಕೆ ಬಿಜೆಪಿ ಸತ್ಯದ ಅಸ್ತ್ರ ಪ್ರಯೋಗಿಸಬೇಕಿದೆ, ಯುಪಿಎ ಸರ್ಕಾರದ ಅವಧಿಯಲ್ಲಿ ಹತ್ತು ವರ್ಷಕ್ಕೆ 81,795 ಕೋಟಿ ತೆರಿಗೆ ಪಾಲು ನೀಡಿದ್ದಾರೆ, ಒಂಭತ್ತು ಮುಕ್ಕಾಲು ವರ್ಷದ ಪ್ರಧಾ ನಿಮೋದಿ ಸರ್ಕಾರ 2,82,791 ಕೋಟಿ ನೀಡಿದೆ, ಅನುದಾನದಲ್ಲೂ ಯುಪಿಎ 60,779 ಕೋಟಿ ರೂ. ನೀಡಿದರೆ ಮೋದಿಜಿ ನೇತೃತ್ವದ ಸರ್ಕಾರ 2,08,832 ಕೋಟಿ ರೂ. ನೀಡಿದೆ, ರಾಜ್ಯ ಕಾಂಗ್ರೆಸ್ ಸರ್ಕಾರ ಶ್ವೇತಪತ್ರ ಹೊರಡಿಸಲು ಕೇಳಿದರೆ ಹೊರಡಿಸುತ್ತಿಲ್ಲ, ಬರೀ ಸುಳ್ಳಿನ ಸರಮಾಲೆಯನ್ನೆ ಜನರ ಮುಂದಿಟ್ಟು ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲಾಗದೆ ಪರಿಶಿಷ್ಟ ಜಾತಿ, ಪಂಗಡದ ಮಕ್ಕಳ ಹಣ ಕಬಳಿಸಿದ್ದಲ್ಲದೆ, ಒಂದು ಜನಾಂಗವನ್ನು ಓಲೈಸಲು ಪ.ಜಾತಿ, ಪ.ಪಂಗಡದ ಕಲ್ಯಾಣಕ್ಕೆ ಇಟ್ಟಿದ್ದ 11000ಕೋಟಿ ಹಣದ ಪೈಕಿ ಹತ್ತು ಸಾವಿರ ಕೋಟಿ ತೆಗೆದು ಪ.ಜಾತಿ, ಪ.ಪಂಗಡದವರಿಗೆ ಅನ್ಯಾಯ ಮಾಡಿದ್ದಾರೆ.

ಅಭಿವೃದ್ಧಿ ಆಧಾರದ ಮೇಲೆ ಜನರನ್ನು ಲೋಕಸಭೆ ಚುನಾವಣೆಯಲ್ಲಿ ಎದುರಿಸಲಾಗದೆ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಲು ಹೊರಟಿದ್ದಾರೆ, ಕಾಂತರಾಜು ಜಾತಿ ಗಣತಿ ವರದಿ ಮಂಡಿಸಿ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿ ಒಡೆದಾಳುವ ನೀತಿಯನ್ನು ರಾಜ್ಯ ಕಾಂಗ್ರೆಸ್ ಮಾಡಲು ಹೊರಟಿದೆ, ಕಾಂಗ್ರೆಸ್ ಪಕ್ಷ ಅಂದಿನಿಂದ ಇಂದಿನವೆರೆಗೂ ದೇಶ ಹೊಡೆದು ಆಳುವ ಸ್ವಾರ್ಥ ಪರ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದು ಅದನ್ನೆ ಮಾಡಲು ಹೊರಟಿದ್ದಾರೆ, ಅದೇ ಬಿಜೆಪಿ ಅಖಂಡ ಭಾರತ ಏಕತೆಗಾಗಿ, ಭಾರತದ ಸಾರ್ವಭೌಮತ್ವಕ್ಕಾಗಿ ಶ್ರಮಿಸುವ ಪಕ್ಷವಾಗಿದೆ, ರಾಮಮಂದಿರ ಮಾಡಿದ್ದಾಗಿದೆ, ಕೃಷ್ಣನ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ, ಅಲ್ಲದೆ ಎಲ್ಲಾ ಭಾರತೀಯರಿಗೂ ಏಕರೂಪ ನಾಗರೀಕ ಸಂಹಿತೆ ತರಲಾಗುವುದು, ಈಗಾಗಲೆ ಉತ್ತರಾಖಂಡ್ ನಲ್ಲಿ ಜಾರಿಗೊಳಿಸಿ ಸರ್ವ ಭಾರತೀಯರು ಸಮಾನರು ಎಂಬುದು ಖಾತ್ರಿಗೊಳಿಸಿದ್ದೇವೆ, ಕಾರ್ಯಕರ್ತರು ಮೋದಿಜಿ ನೇತೃತ್ವದಲ್ಲಿ ಆಗಿರುವ ಅಭಿವೃದ್ಧಿ ಪರ್ವ ಕಾರ್ಯಕ್ರಮಗಳನ್ನು ಜನತೆಗೆ ವಿವರಿಸಿ ಈ ಬಾರಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕು, ಜೆಡಿಎಸ್, ಬಿಜೆಪಿ ಜೊತೆಯಾಗಿ ಚುನಾವಣೆ ಎದುರಿಸುತ್ತಿದ್ದು ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಬದಿಗೊತ್ತಿ ಪಕ್ಷ ಸೂಚಿಸುವ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದರು.

ತಾಲೂಕು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ಕಾಂಗ್ರೆಸ್ ನ ಸಂಸದರು ಸೋಲಿನ ಭೀತಿಯಿಂದ ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಪರ್ಕ ಸಭೆ ನಡೆಸುತ್ತಿದ್ದಾರೆ, ತಾಲೂಕಿನ ಯವುದೇ ಸಮಸ್ಯೆ ಬಗೆಹರಿಸದೆ ಚುನಾವಣೆ ಸಮಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸುತ್ತಾ ಕೇಂದ್ರದ ಅನುದಾನ ತರುವುದರಲ್ಲಿ ವಿಫಲರಾಗಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ತಾಲೂಕು ಅಧ್ಯಕ್ಷ ಬಲರಾಮ್, ಪ್ರಮುಖರಾದ ರುದ್ರೇಶ್, ಸುರೇಶ್, ವೆಂಕಟೇಶ್, ದೇವರಾಜ, ಧನುಶ್ಗೌಡ, ಸಂದೀಪ್, ಅನೂಪ್ ಕುಮಾರ್, ಕೋಟೆ ನಾಗಣ್ಣ, ಆನಂದ್ ಕುಮಾರ್, ಸುರೇಶ್, ಗೋಪಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!