ಮತ್ತೆ ಅಸ್ವಸ್ಥರಾದ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

21

Get real time updates directly on you device, subscribe now.


ಕುಣಿಗಲ್: ಗುರುವಾರ ಸೀನಪ್ಪನಹಳ್ಳಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳಿಗೆ ಚಿಕಿತ್ಸೆ ನೀಡಿ ಗ್ರಾಮಕ್ಕೆ ಕಳಿಸಲಾಗಿದ್ದು, ತಡರಾತ್ರಿ ಕೆಲಮಕ್ಕಳ ಅರೋಗ್ಯ ವ್ಯತ್ಯಯವಾದ ಹಿನ್ನೆಲೆಯಲ್ಲಿ 16 ಮಕ್ಕಳನ್ನು ರಾತ್ರಿಯೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಕೊಂಡು ಚಿಕಿತ್ಸೆ ಆರಂಭಿಸಲಾಯಿತು.
ತಾಲೂಕಿನ ಹುತ್ರಿದುರ್ಗ ಹೋಬಳಿಯ ಸೀನಪ್ಪನಹಳ್ಳಿಯ ಅಂಬಾಭವಾನಿ ಅನುದಾನಿತ ಪ್ರೌಢಶಾಲೆಯಲ್ಲಿ ಬುಧವಾರ ಮೊಸರು ಸಾಂಬಾರು ಸೇವಿಸಿ ಗುರುವಾರ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು, ಅವರಿಗೆ ಗುರುವಾರ ಸಂಜೆವರೆಗೂ ಚಿಕಿತ್ಸೆ ನೀಡಿ ಗುರುವಾರ ಸಂಜೆ ಸ್ವಗ್ರಾಮಕ್ಕೆ ಕಳಿಸಿಕೊಡಲಾಗಿತ್ತು, ಆದರೆ ಗುರುವಾರ ತಡರಾತ್ರಿ ಚಿಕಿತ್ಸೆ ಪಡೆದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯವಾದ ಮೇರೆಗೆ ತಾಲೂಕು ಆರೋಗ್ಯಾಧಿಕಾರಿ ಮರಿಯಪ್ಪ ನೇತೃತ್ವದಲ್ಲಿ 16 ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಿದರು.

ವೈದ್ಯರ, ಶಿಕ್ಷಕರ ನಡೆಗೆ ತಹಶೀಲ್ದಾರ ಅಸಮಾಧಾನ: ಶುಕ್ರವಾರ ಬೆಳ್ಳಂಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ತಹಶೀಲ್ದಾರ್ ವಿಶ್ವನಾಥ್, ಮಕ್ಕಳ ಆರೋಗ್ಯ ನೋಡಿಕೊಂಡು ಗ್ರಾಮಕ್ಕೆ ಕಳಿಸಬೇಕಿತ್ತು, ಆದರೆ ಸಂಜೆಯೆ ಗ್ರಾಮಕ್ಕೆ ಕಳಿಸಿದ ಸಾರ್ವಜನಿಕ ಆಸ್ಪತ್ರೆ ವೈದ್ಯರ ನಡೆಗೆ ಅಸಮಾಧಾನ ವ್ಯಕ್ತಪಡಿಸಿ, ಶಾಲೆಯಲ್ಲಿ ಬಿಸಿಯೂಟಕ್ಕೆ ಮಜ್ಜಿಗೆ ಹುಳಿ ಮಾಡಿ ಬಡಿಸಿದ ಬಗ್ಗೆ ಶಾಲಾ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸ್ಥಳದಲ್ಲಿದ್ದ ಬಿಇಒ ಬೋರೇಗೌಡರಿಗೆ ಘಟನೆಗೆ ಸಂಬಂಧಿಸಿದಂತೆ 24 ಗಂಟೆಯೊಳಗೆ ವರದಿ ನೀಡುವಂತೆ, ತಪ್ಪಿತಸ್ಥ ಮುಖ್ಯ ಶಿಕ್ಷಕರು, ಅಡುಗೆ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿ, ಮಕ್ಕಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯತುಂಬಿದರು.
ಪೋಷಕರು, ಸಾರ್ವಜನಿಕ ಆಸ್ಪತ್ರೆ ವೈದ್ಯರು ಗುರುವಾರ ಸಂಜೆ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದರಿಂದಲೆ ಕರೆದೊಯ್ದೆವು, ಆದರೆ ರಾತ್ರಿ ಮಕ್ಕಳಿಗೆ ತೊಂದರೆಯಾಗಿ ಪುನಹ ಕರೆ ತರುವಂತಾಗಿ ರಾತ್ರಿ ಪೂರ್ತಾ ಪರದಾಡುವಂತಾಯಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ರಾಮೇಗೌಡ, ರಾತ್ರಿ ಮಕ್ಕಳನ್ನು ಗ್ರಾಮಕ್ಕೆ ಕಳಿಸಿದ ಬಗ್ಗೆ ಕಾರ್ಯನಿರತ ವೈದ್ಯರನ್ನು ತರಾಟೆ ಗೆತೆಗೆದುಕೊಂಡರು, ಮಕ್ಕಳ ಆರೋಗ್ಯ ಸುಧಾರಣೆಯಾಗುವವರೆಗೂ ಚಿಕಿತ್ಸೆ ಮುಂದುವರೆಸುವಂತೆ ಸೂಚಿಸಿ, ಘಟನೆಗೆ ಪ್ರಮುಖವಾಗಿ ಮಜ್ಜಿಗೆಹುಳಿ ಸಾಂಬಾರ್ ಪ್ರಮುಖ ಕಾರಣವಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಮರಿಯಪ್ಪ ನೇತೃತ್ವದಲ್ಲಿ ಸೀನಪ್ಪನಹಳ್ಳಿ ಗ್ರಾಮದಲ್ಲಿ ಚಿಕಿತ್ಸೆ ಪಡೆಯದೆ ಹೊರಗುಳುದಿದ್ದ ಏಳು ಶಾಲ ಮಕ್ಕಳನ್ನು ಗುರುತಿಸಿ ಅವರನ್ನು ಚಿಕಿತ್ಸೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಧ್ಯಾಹ್ನ ದಾಖಲಿಸಿದರು, ಆರೋಗ್ಯ ಇಲಾಖೆಯ ಹಿರಿಯಾಧಿಕಾರಿಗಳು, ಬಿಇಒ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಿದಾನಂದಮೂರ್ತಿ, ತಾಪಂ ಇಒ ಜೋಸೆಫ್ ಸೀನಪ್ಪನಹಳ್ಳಿ ಶಾಲೆಗೆ ಭೇಟಿ ನೀಡಿ ಅಲ್ಲಿ ಅಡುಗೆ ಮನೆ ಪರಿಶೀಲಿಸಿ, ಅಡುಗೆ ಸಿಬ್ಬಂದಿ, ಶಿಕ್ಷಕರಿಂದ ಹೇಳಿಕೆ ದಾಖಲಿಸಿ ಹಾಲಿನ ಪುಡಿಯ ಪಾಕೆಟ್ ಸೇರಿದಂತೆ ಇತರೆ ವಸ್ತುಗಳ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದರು.
ಒಟ್ಟು 23 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

Get real time updates directly on you device, subscribe now.

Comments are closed.

error: Content is protected !!