ತುಮಕೂರು: ವಿದ್ಯಾರ್ಥಿಗಳಲ್ಲಿ ಪರಿಶ್ರಮದಿಂದ ಹಲವಾರು ರೀತಿಯ ಸಾಧನೆ ಮೆಟ್ಟಿಲು ಪಡೆಯಲು ಸಾಧ್ಯ, ಆದರೆ ವಿವಿಧ ರೀತಿ ಆಲೋಚನೆ ಮಾಡಿದಾಗ ಹೊಸ ಹೊಸ ಕ್ರಿಯಾತ್ಮಕ ಕೆಲಸ ಮಾಡಬಹುದು ಎಂದು ಎಫ್ ಕೆಸಿಸಿಐ ಉಪಾಧ್ಯಕ್ಷರಾದ ಉಮಾ ರೆಡ್ಡಿ ಹೇಳಿದರು.
ನಗರದ ಶ್ರೀಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಲ್ಲಿ ಎಂಬಿಎ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಶ್ರಮದಿಂದ ಹಲವಾರು ರೀತಿಯ ಸಾಧನೆ ಮೆಟ್ಟಿಲು ಪಡೆಯಲು ಸಾಧ್ಯ ಎಂದರು.
ಎಸ್ ಎಸ್ ಐ ಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಮಾತನಾಡಿ, ಪದವಿ ಮುಗಿಸಿದ ನಂತರ ದೇಶಕ್ಕೆ ಒಳ್ಳೆಯ ಕೊಡುಗೆ ಕೊಡಬೇಕು, ಆತ್ಮ ವಿಶ್ವಾಸದಿಂದ ನನ್ನ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು, ಧನಾತ್ಮಕ ವಿಚಾರ ಬಗ್ಗೆ ಹೆಚ್ಚು ಒಲವು ನೀಡಬೇಕು ಎಂದು ವ್ಯಕ್ತಪಡಿಸಿದರು.
ಎಂಬಿಎ ಪ್ರಾಂಶುಪಾಲ ಡಾ.ಅಜ್ಮತ್ ವುಲ್ಲಾ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಎಂಬಿಎ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉನ್ನತ ಕೆಲಸದಲ್ಲಿ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ, ವಿದ್ಯಾರ್ಥಿಗಳು ಸೃಜನಶೀಲರಾದಾಗ ಯಾವುದೇ ಕೆಲಸಗಳಿಗೆ ಸ್ಪೂರ್ತಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝಡ್.ಕುರಿಯನ್, ಬೆಂಗಳೂರಿನ ಎನ್ನಿರೋ ಸಿಸ್ಟಮ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ಕ್ರಾಸ್ಟಾ, ಕೋಲ್ಡ್ ಇನ್ಪ್ರಾ ಕಂಪನಿಯ ಹಿರಿಯ ನಿರ್ದೇಶಕ ಆಲ್ವಿನ್ ರಾಜ್, ಕೆಎಸ್ ಒಯು ಕಾರ್ಮಸ್ ಮ್ಯಾನೇಜ್ ಮೆಂಟ್ ವಿಭಾಗದ ಡೀನ್ ಡಾ.ಜಗದೀಶ, ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಬಿ.ನಂಜುಂಡಪ್ಪ, ಸಹ ಆಡಳಿತಾಧಿಕಾರಿ ಕಲಂದರ್ ಪಾಷಾ ಇತರರು ಇದ್ದರು.
ಘಟಿಕೋತ್ಸವದಲ್ಲಿ 2018- 20ನೇ ಸಾಲಿನಲ್ಲಿ ತುಮಕೂರು ವಿಶ್ವ ವಿದ್ಯಾಲಯಕ್ಕೆ ಎಂಬಿಎ ಕೋರ್ಸ್ನಲ್ಲಿ 5ನೇ ರ್ಯಾಂಕ್ ಪಡೆದ ಯಶಸ್ವಿನಿ ಆರ್, 2019-21 ಸಾಲಿನಲ್ಲಿ 3ನೇ ರ್ಯಾಕ್ ಪಡೆದ ಶಿಫಾ ಫರೀನ್.ಬಿ, 4ನೇ ರ್ಯಾಂಕ್ ಪಡೆದ ರಮೇಶ್.ಎಸ್, 5ನೇ ರ್ಯಾಕ್ ಗಳಿಸಿದ ನೂರ್ ಜೈಭಾ ತೆರನಮ್ ಮತ್ತು ಎಸ್ಎಸ್ ಐಎಂಎಸ್ ಕಾಲೇಜಿನ ಅಂಗ್ರ ಶ್ರೇಯಾಂಕಿತರಾದವರಿಗೆ ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು, ಅಲ್ಲದೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
Comments are closed.