ಬಸ್ಸೇ ಬಾರದ ಊರಲ್ಲಿ ಬಸ್ ಸಂಚಾರ

41

Get real time updates directly on you device, subscribe now.


ಮಧುಗಿರಿ: ಇದುವರೆಗೂ ಯಾವುದೇ ಬಸ್ ಸೌಕರ್ಯ ಕಾಣದ ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ವ್ಯಾಪ್ತಿಯ ಪುಟ್ಟ ಕುಗ್ರಾಮಗಳಾದ ಹೊಸಕೋಟೆ, ಹೊಸಗೊಲ್ಲರ ಹಟ್ಟಿ, ಮಾದೇನಹಳ್ಳಿಗೆ ಸ್ವಾತಂತ್ರ್ಯ ಬಂದು ಬರೋಬ್ಬರಿ 77 ವರ್ಷಗಳ ನಂತರ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರ ಸೂಚನೆ ಮೇರೆಗೆ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಬಸ್ ಸೌಕರ್ಯವಿಲ್ಲದೆ ವಂಚಿತವಾಗಿದ್ದ ಹೊಸಕೋಟೆ, ಹೊಸಗೊಲ್ಲರ ಹಟ್ಟಿ, ಮಾದೇನಹಳ್ಳಿ ಗ್ರಾಮಗಳಿಗೆ ಇನ್ನು ಮುಂದೆ ಬಸ್ ಸಂಚರಿಸಲಿದೆ, ಈ ಗ್ರಾಮದಲ್ಲಿನ ಜನರು ಹೆಚ್ಚಾಗಿ ಕೃಷಿಕರಾಗಿದ್ದು, ವ್ಯಾಪಾರ ಹಾಗೂ ಮತ್ತಿತರ ಉದ್ದೇಶಗಳಿಗೆ ಮಧುಗಿರಿ ಮತ್ತು ಹೊಸಕೆರೆ ಪಟ್ಟಣವನ್ನೇ ಅವಲಂಬಿಸಿದ್ದಾರೆ, ಆದರೆ ಈ ಹಿಂದೆ ಈ ಗ್ರಾಮಕ್ಕೆ ತಲುಪಬೇಕಾದರೆ ಜನರು ಬಹಳ ಕಷ್ಟ ಪಡಬೇಕಾದ ವಾತಾವರಣ ಇದ್ದುದರಿಂದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರ ಸೂಚನೆ ಮೇರೆಗೆ ಗರಣಿ ಗ್ರಾಮ ಪಂಚಾಯತಿ ಸದಸ್ಯರಾದ ದೀಪಾರಾಜು, ಹನುಮಂತರಾಯಪ್ಪ.ಬಿ, ರಾಮಾಂಜಿ, ಪೆನ್ನಯ್ಯ, ನಾಗರಾಜು, ಸಿದ್ದಪ್ಪ, ನಾಗೇಶ್, ರಾಮಣ್ಣ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚಾಲನೆ ನೀಡಿದರು.

ಇಲ್ಲಿನ ಜನರ ಬಹುವರ್ಷಗಳ ಬೇಡಿಕೆ ಈಡೇರಿದ್ದು, ಪ್ರತಿನಿತ್ಯ ಸಾರಿಗೆ ಬಸ್ 2 ಬಾರಿ ಗ್ರಾಮಗಳಿಗೆ ಸಂಚರಿಸಲಿದ್ದು ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ, ಈ ಶುಭ ಸಂದರ್ಭದಲ್ಲಿ ಹಳ್ಳಿಗಳ ಜನತೆ ಬಸ್ ಸಂಚಾರವನ್ನು ಸಂಭ್ರಮದಿಂದ ಸ್ವಾಗತಿಸಿದರು.

Get real time updates directly on you device, subscribe now.

Comments are closed.

error: Content is protected !!