ಮನೆಗೆ ಬೆಂಕಿ- ಅಪಾರ ನಷ್ಟ

34

Get real time updates directly on you device, subscribe now.


ಗುಬ್ಬಿ: ಪಟ್ಟಣದ ಮಹಮದ್ ಅಶ್ರಫ್ ಸಾಧಿಕ್ ಅವರ ಮನೆಗೆ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದು ಅಪಾರ ನಷ್ಟ ಉಂಟಾಗಿದೆ.
ಮನೆಯಲ್ಲಿನ ಸೋಫಾ, ಬಟ್ಟೆಗಳು, ದಿನಸಿ, ಪಾತ್ರೆಗಳು ಸುಟ್ಟು ಅಪಾರ ನಷ್ಟ ಉಂಟಾಗಿ ಕುಟುಂಬ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಬೇಸಿಗೆ ಸಮೀಪಿಸುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಿದೆ ಹಾಗೂ ಮನೆಯಲ್ಲಿನ ವಿದ್ಯುತ್ ಪರಿಕರಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!