ಜನಪದ ಸಾಹಿತ್ಯ ನೆಲ ಮೂಲದ ಸಂಸ್ಕೃತಿ

ಸಾಹಿತಿ ಬಿದಲೋಟಿ ರಂಗನಾಥ್‍ ಬಣ್ಣನೆ

812

Get real time updates directly on you device, subscribe now.


ಮಧುಗಿರಿ: ಬಾಯಿಂದ ಬಾಯಿಗೆ ತಲೆಮಾರಿಗೆ ಸಾಗುತ್ತಿರುವ ಸಾಹಿತ್ಯದ ತಾಯಿ ಬೇರು ಜನಪದ ಎಂದು ಕನ್ನಡ ಶಿಕ್ಷಕ ಸಚ್ಚಿದಾನಂದ ಮೂರ್ತಿ ನುಡಿದರು. ಅವರು ಪುರವರದ ಅರಳಾಪುರ ಗ್ರಾಮದ ಶ್ರೀಚಾಮುಂಡೇಶ್ವರಿ ಗ್ರಾಮೀಣ ಜನಪದ ಯುವ ಕಲಾವೃಂದ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 17ನೇ ವರ್ಷದ ಜನಪದ ಉತ್ಸವ ಕಾರ್ಯಕ್ರಮವನ್ನು ತಂಬೂರಿ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಬಿದಲೋಟಿ ರಂಗನಾಥ್ ಮಾತನಾಡಿ, ಸಾಹಿತ್ಯ ಜನಪದರ ಮೂಲ ಬೇರು. ಇದು ಅಳಿವಿನಂಚಿನಲ್ಲಿರುವುದು ದುಃಖದ ಸಂಗತಿ. ಜನಪದವನ್ನು ಉಳಿಸಿಕೊಳ್ಳುವಲ್ಲಿ ಯುವ ಜನತೆ ಕಾಳಜಿ ವಹಿಸಬೇಕು, ಮುಂದಿನ ಪೀಳಿಗೆಗೂ ಪರಿಚಯಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಏಕೆಂದರೆ ಮುಗುವಿನ ಅಳುವನ್ನೂ ನಿಲ್ಲಿಸುವ ಶಕ್ತಿ ಜನಪದಕ್ಕಿದೆ, ಜನಪದ ಈ ನೆಲದ ಆಚಾರ, ಪದ್ಧತಿ ಜೊತೆಗೆ ಹಾಸುಹೊಕ್ಕಾಗಿ ಉಳಿಯಲಿ ಎಂದರು.
ತಾಲ್ಲೂಕು ಕಸಾಪ ಕಾರ್ಯದರ್ಶಿ ರಾಮಚಂದ್ರಪ್ಪ ಮಾತನಾಡಿ, ಚಾಮುಂಡೇಶ್ವರಿ ಕಲಾವೃಂದ ಸುಮಾರು ವರ್ಷಗಳಿಂದಲೂ ಜನಪದವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮವಹಿಸಿದೆ. ಇದು ಶ್ಲಾಘನೀಯ ವಿಷಯ ಎಂದರು.
ನಿವೃತ್ತ ಪ್ರಾಂಶುಪಾಲ ಟಿ.ಗೋವಿಂದರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿ, ಇಂತಹ ಕಾರ್ಯಕ್ರಮಗಳು ನಡೆಸುವುದರಿಂದ ಜನಪದ ಜೀವಂತವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಲಿಂಗರಾಜು,ಗಿರಿಧರ್, ಮಾರುತಿ, ಮನೋಹರ ಮುರುಳಿ, ಹನುಮಂತರಾಜು, ಮಂಜುನಾಥ್, ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಸೋಬಾನೆ, ತತ್ವಪದ,ರಾಗಿ ಬೀಸುವ ತಂಡ, ಜನಪದ ಗಾಯನ ತಂಡ, ರಂಗಗೀತೆ ತಂಡ, ಕಲಾಪ್ರದರ್ಶನಗೊಂಡು ಕಾರ್ಯಕ್ರಮದ ಕಳೆ ಹೆಚ್ಚಿಸಿತು.

Get real time updates directly on you device, subscribe now.

Comments are closed.

error: Content is protected !!