ಮಧುಗಿರಿ: ಸೊಸೆಯ ಮೇಲೆ ಮಾವನೇ ಲೈಂಗಿಕ ಕಿರುಕುಳ ನೀಡುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಮಧುಗಿರಿ ಅಧಿಕ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ ಒಟ್ಟು 45 ಸಾವಿರ ರೂ. ದಂಡ ಹಾಗೂ ಆರೂವರೆ ವರ್ಷ ಸಜೆಯ ತೀರ್ಪು ನೀಡಿ ಆದೇಶಿಸಿದ್ದಾರೆ.
ಮಾವನೇ ತನ್ನ ಸೊಸೆ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದನ್ನು ಸಹಿಸಲಾರದೆ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೋಟಗುಡ್ಡ ಗ್ರಾಮದಲ್ಲಿ ಮೃತ ನೊಂದ ಮಹಿಳೆಯ ಮಾವ ಆರೋಪಿ ಹನುಮಂತರಾಯಪ್ಪ ತನ್ನ ಸೊಸೆಯನ್ನು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನನ್ನ ಕಡೆ ಇರು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಊಟ ಇಡಲು ಹೋದಾಗ ಕೈಯಿಂದ ಎಳೆಯುವುದು ತಬ್ಬಿಕೊಳ್ಳಲು ಹೋಗುವುದು, ಸಹಕರಿಸದಿದ್ದರೆ ಸಾಯಿಸುತ್ತೇನೆ ಎಂದು ಬೆದರಿಕೆಯೊಡ್ಡಿ ಲೈಂಗಿಕ ಕಿರುಕುಳ, ಹಿಂಸೆ ನೀಡುತ್ತಿದ್ದ.
ಇದರಿಂದ ಮನನೊಂದ ಮೃತಳು 2021 ರ ಆಗಸ್ಟ್ 07 ರಂದು ಕೋಟಗುಡ್ಡ ಗ್ರಾಮದ ತನ್ನಗಂಡನ ಮನೆಯಲ್ಲಿ ಮಧ್ಯಾಹ್ನ 1 ಗಂಟೆಯಲ್ಲಿ ಮನೆಯ ತೀರಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಯಾದವ ಕರಕೇರ ಅವರು ಫೆ.12 ರಂದು ಆರೋಪಿಗೆ ಕಲಂ ಭಾರತೀಯ ದಂಡ ಸಂಹಿತೆಯ 354(ಎ) ಅಡಿಯಲ್ಲಿ 2 ವರ್ಷ ಶಿಕ್ಷೆ ಮತ್ತು ರೂ. 20,000 ದಂಡ ವಿಧಿಸಿರುತ್ತಾರೆ, ದಂಡ ಪಾವತಿಸದಿದ್ದರೆ 6 ತಿಂಗಳ ಸಜೆ ಮತ್ತು 306 ಐಪಿಸಿ ಅಡಿಯಲ್ಲಿ 5 ವರ್ಷ ಸಾದಾ ಶಿಕ್ಷೆ ಮತ್ತು ರೂ. 25,000 ದಂಡ ವಿಧಿಸಿರುತ್ತಾರೆ, ದಂಡ ಪಾವತಿಸದಿದ್ದರೆ 1 ವರ್ಷ ಸಜೆ ವಿಧಿಸಿದ್ದಾರೆ, ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು.
Comments are closed.