ಕುಣಿಗಲ್: ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಹೆಜ್ಜೇನು ದಾಳಿಗೆ ಅಸ್ವಸ್ಥಗೊಂಡ ರೈತ ಚಿಕಿತ್ಸೆಗೆ ಸಾಗಿಸುವ ವೇಳೆ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಮೃತ ರೈತನನ್ನು ಕಸಬಾ ಹೋಬಳಿಯ ಮೊದೂರು ಗ್ರಾಮದ ಮೂಗೂರಯ್ಯ(59) ಎಂದು ಗುರುತಿಸಲಾಗಿದ್ದು, ಈತ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿದ್ದರಿಂದ ನಿತ್ರಾಣರಾದರು, ಗ್ರಾಮಸ್ಥರು ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Get real time updates directly on you device, subscribe now.
Comments are closed.