ತುಮಕೂರು: ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರು ಅವರ ಗೆಲುವಿಗೆ ಶ್ರಮಿಸುವುದು ಪ್ರತಿಯೊಬ್ಬ ಬಿಜೆಪಿ ಜನಪ್ರತಿನಿಧಿಯ ಕರ್ತವ್ಯವಾಗಿದೆ, ಹಾಗಾಗಿ ನನ್ನ ವೈಯಕ್ತಿಕ ಅಭಿಪ್ರಾಯಕ್ಕೆ ಯಾವುದೇ ಬೆಲೆ ಇಲ್ಲ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ಗೆ ಸಂಬಂಧಿಸಿದಂತೆ ಸೋಮಣ್ಣ ಮತ್ತು ಮಾಧುಸ್ವಾಮಿ ನಡುವಿನ ಪೈಪೋಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಜೆಡಿಎಸ್, ಬಿಜೆಪಿ ಮೊದಲಿನಿಂದಲೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡೇ ಬಂದಿದ್ದೇವೆ, ಎರಡು ಬಾರಿ ನಗರ ಪಾಲಿಕೆಯಲ್ಲಿ ಕಡಿಮೆ ಸದಸ್ಯರಿದ್ದರೂ ಅವರನ್ನು ಮೇಯರ್ ಮಾಡಿದ್ದೇವೆ, ಹಾಗಾಗಿ ಇಬ್ಬರ ನಡುವೆ ಅಂತಹ ಗೊಂದಲ ಇಲ್ಲ, ಜೆಡಿಎಸ್ ಪಕ್ಷ ಯಾರನ್ನೇ ಉಸ್ತುವಾರಿಯಾಗಿ ನೇಮಕ ಮಾಡಿದರೂ ಅವರೊಂದಿಗೆ ಬೆರೆತು ಕೆಲಸ ಮಾಡುತ್ತೇವೆ ಎಂದರು.
ನಾನು ರಾಜಕಾರಣದಲ್ಲಿ ಇದ್ದರೆ ಬಿಜೆಪಿ ಪಕ್ಷದಲ್ಲಿ ಮಾತ್ರ, ಇಲ್ಲದಿದ್ದರೆ ಮನೆಯಲ್ಲಿ ಇರುತ್ತೇನೆ, ಪಕ್ಷಾಂತರ ಮಾಡಲ್ಲ, ಮಂಗಳವಾರ ವಿಧಾನಸಭೆಯಲ್ಲಿ ನಡೆದ ಕೆಲ ವಿದ್ಯಮಾನಗಳಿಗೆ ಉತ್ತರಿಸಿದ ಅವರು ಕೊಬ್ಬರಿ ಬೆಂಬಲ ಬೆಲೆ ಖರೀದಿ ಸಂಬಂಧಿಸಿದಂತೆ ಮಾತನಾಡುವ ವೇಳೆ ಆದ ಗೊಂದಲದಿಂದ ಈ ಊಹಾಪೋಹ ಎದ್ದಿದೆ, ಆ ರೀತಿಯ ಯಾವ ಆಲೋಚನೆಯೂ ಇಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ತುಮಕೂರು, ಆದರೆ ನೋಂದಣಿಯಲ್ಲಿ ಅತಿ ಕಡಿಮೆ ಅವಕಾಶ ನೀಡಲಾಗಿದೆ, ಈ ವಿಚಾರವಾಗಿ ಮಾತನಾಡುವ ವೇಳೆ ಗೊಂದಲ ಉಂಟಾಗಿತ್ತು, ನಿಜಕ್ಕೂ ಕೊಬ್ಬರಿ ಖರೀದಿಯಲ್ಲಿ ಬಹಳಷ್ಟು ಅನ್ಯಾಯ ಜಿಲ್ಲೆಗೆ ಆಗಿದೆ, ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯಲ್ಲಿ ಕಡಿಮೆ ನೋಂದಣಿಗೆ ಅವಕಾಶ ನೀಡಿರುವುದು ಸರಿಯಲ್ಲ, ಹಾಗಾಗಿ ರೈತರು ನೋಂದಣಿಗೆ ಹೆಚ್ಚು ಒತ್ತು ನೀಡಬೇಕು, ಆರಂಭದಲ್ಲಿ 21 ಖರೀದಿ ಕೇಂದ್ರವನ್ನು 44ಕ್ಕೆ ಹೆಚ್ಚಿಸಲಾಗಿದೆ, ಆದರೆ ನೋಂದಣಿ ಕಡಿಮೆಯಾಗಿದೆ, ಇದಕ್ಕಾಗಿ ಎಲ್ಲರೂ ಮಾತನಾಡಿದ್ದೆವು ಎಂದರು.
ಕಾಂಗ್ರೆಸ್ ಗೆ ಬರುವಂತೆ ಇದುವರೆಗೂ ಯಾರು ನನ್ನನ್ನು ಕರೆದಿಲ್ಲ, ಕೆಲವರು ಊಹಾಪೋಹ ಬಿಡುತ್ತಿದ್ದಾರೆ, ನಮ್ಮ ಮುಂದಿರುವುದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ನಮ್ಮ ಗುರಿ, ಸುಮಾರು 400ಕ್ಕಿಂತಲೂ ಹೆಚ್ಚು ಸೀಟು ಬಿಜೆಪಿಗೆ ನೀಡಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಏಕೈಕ ಅಜೆಂಡಾ ಎಂದರು.
Comments are closed.