ಕೊರಟಗೆರೆ: ಇತಿಹಾಸ ಪ್ರಸಿದ್ದ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿತು, ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕಮನೀಯ ಕ್ಷೇತ್ರದಲ್ಲಿ ನೆಲೆಸಿರುವ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ರಾಮ, ಲಕ್ಷ್ಮಣ, ಸೀತಾದೇವಿ ಮತ್ತು ಆಂಜನೇಯ ವಿಗ್ರಹ ಕೂರಿಸಿದ ಕ್ಷಣಾರ್ಧದಲ್ಲೇ ಆಕಾಶದಲ್ಲಿ ಗರುಡ ಪಕ್ಷಿ ಕಾಣಿಸಿಕೊಂಡಿತು, ಗರುಡ ಪಕ್ಷಿ ನೋಡಿದ ಭಕ್ತರು ಜೈ ಶ್ರೀರಾಮ್ ಎಂದು ಕೂಗಿದರು.
ತಹಸೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ತಾಲ್ಲೂಕು ಆಡಳಿತ, ದೇವಾಲಯ ಕಮಿಟಿ ಹಾಗೂ ವಿವಿಧ ಭಕ್ತಾದಿಗಳಿಂದ ಬೆಳಗ್ಗೆಯಿಂದ ಸ್ವಾಮಿಗೆ ಹೋಮ, ಹೂವಿನ ಅಲಂಕಾರ, ವಿಶೇಷ ಪೂಜೆ, ಪ್ರಸಾದ ವ್ಯವಸ್ಥೆಯನ್ನ ಗ್ರಾಮಸ್ಥರು ಭಕ್ತರು ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಧಾನ ಆರ್ಚಕ ರಾಮಾಚಾರ್ ಮಾತನಾಡಿ, ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಇತಿಹಾಸ ಪ್ರಸಿದ್ದವಾದ ಪುಣ್ಯಕ್ಷೇತ್ರದಲ್ಲಿ ಹಲವಾರು ಪವಾಡ ನಡೆಯುತ್ತಿದ್ದು, ಪ್ರತಿನಿತ್ಯ ಸಾಕಷ್ಟು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ, ಬ್ರಹ್ಮ ರಥೋತ್ಸವದ ಅಂಗವಾಗಿ ಸ್ವಾಮಿಗೆ ಬೆಳಗ್ಗೆಯಿಂದ ಹೋಮ ಅಭಿಷೇಕ ಮಾಡಲಾಗಿತ್ತು, ಬರುವ ಭಕ್ತರು ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿಸಿಪಿಐ ಅನಿಲ್, ಪಿ ಎಸ್ ಐ ಮಂಜುನಾಥ್, ಇಒ ಅಪೂರ್ವ, ಮುಖಂಡರಾದ ಅಶ್ವಥ್ ನಾರಾಯಣ್, ಪಿ.ಎನ್.ಕೃಷ್ಣಮೂರ್ತಿ, ಜಯರಾಮ್, ಕವಿತಮ್ಮ, ಕಂದಾಯ ಅಧಿಕಾರಿಗಳಾದ ಗ್ರೇಟ್ 2 ತಹಸೀಲ್ದಾರ್ ನರಸಿಂಹಮೂರ್ತಿ, ಉಪ ತಹಸೀಲ್ದಾರ್ ಜಯಪ್ರಕಾಶ್, ಸಲ್ಮಾನ್, ಸತ್ಯನಾರಾಯಣ್, ಬಾಲರಾಜು ಇತರರು ಇದ್ದರು.
ತಪ್ಪಿಸಿಕೊಂಡಿ ಮಗು ಮತ್ತೆ ಪೋಷಕರ ತೆಕ್ಕೆಗೆ: ಸಾವಿರಾರು ಜನರಿಂದ ತುಂಬಿದ್ದ ಜಾತ್ರೆಯಲ್ಲಿ 2 ವರ್ಷದ ಗಂಡು ಮಗು ಪೃಥ್ವಿ ತಪ್ಪಿಸಿಕೊಂಡು ಆಳುತ್ತಾ ತಿರುಗಾಡುವಾಗ ಕ್ಯಾಮೇನಹಳ್ಳಿ ಗ್ರಾಮದ ವಾಸಿ ದೊಡ್ಡ ಆಂಜಿನೇಯ ಎಂಬ ವೃದ್ಧರು ನೋಡಿ ದೇವಾಲಯದ ಸಮುದಾಯ ಭವನದ ಧ್ವನಿ ವರ್ಧಕದ ಬಳಿ ಕರೆತಂದಿದ್ದರು, ಸ್ಥಳದಲ್ಲೆ ಇದ್ದ ತಹಶೀಲ್ದಾರ್ ಮಂಜುನಾಥ್, ಸಿಪಿಐ ಅನಿಲ್ ಹಲವು ಬಾರಿ ಧ್ವನಿ ವರ್ದಕದ ಮೂಲಕ ಕೂಗಿಸಿ ಪೋಷಕರನ್ನು ಪತ್ತೆ ಮಾಡಿ ಮಗುವನ್ನು ಒಪ್ಪಿಸಿದ ಘಟನೆ ನಡೆಯಿತು, ಮಗು ಪಕ್ಕದ ಗ್ರಾಮ ಬಿ.ಡಿ.ಪುರ ಗ್ರಾಮದಾಗಿತ್ತು, ತಾತನ ಜೊತೆಯಲ್ಲಿ ಬಂದು ತಪ್ಪಿಸಿಕೊಂಡಿತ್ತು, ಅಧಿಕಾರಿಗಳು ಮಗುವನ್ನು ಸುರಕ್ಷಿತವಾಗಿ ಕಾಪಾಡಿ ಪೋಷಕರಿಗೆ ಒಪ್ಪಿಸಿದರು.
Comments are closed.