ತುಮಕೂರು: ಅಖಿಲ ಭಾರತ ಮಾಧ್ವ ಮಹಾ ಮಂಡಲ ತುಮಕೂರು ವತಿಯಿಂದ ಶ್ರೀಮದ್ವ ನವಮಿಯನ್ನು ಕೃಷ್ಣ ಮಂದಿರದಲ್ಲಿ ಆಚರಿಸಲಾಯಿತು.
ಶ್ರೀಮಧ್ವ ನವಮಿ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಬಾಗಲಕೋಟೆಯ ವಿದ್ವಾಂಸ ಡಾ.ರಘೋತ್ತಮಾಚಾರ್ಯ ನಾಗ ಸಂಪಿಗೆ, ಶ್ರೀವೇದ ವ್ಯಾಸರಿಗೆ ಸಮ್ಮತವಾದ ಮತ್ತು ಅತ್ಯಂತ ವೈಜ್ಞಾನಿಕ ಸಿದ್ಧಾಂತ ಪ್ರಚುರ ಪಡಿಸಿದ ಶ್ರೀಮಧ್ವಾಚಾರ್ಯರಿಗೆ ನಾವೆಲ್ಲರೂ ಸದಾ ಋಣಿಯಾಗಿ ಇರಬೇಕಾಗುತ್ತದೆ ಎಂದರು.
ಶ್ರೀಮಧ್ವ ನವಮಿ ಮಹೋತ್ಸವದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀಮಧ್ವರ ಭಾವಚಿತ್ರದ ಮೆರವಣಿಗೆ ಮತ್ತು ಶೋಭಾಯಾತ್ರೆ ನಡೆಯಿತು, ನೂರಾರು ಜನರು ಸಾಮೂಹಿಕ ಭಜನೆಯಲ್ಲಿ ಪಾಲ್ಗೊಂಡಿದ್ದರು, ಸಂಜೆ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ನಗರದ ವಿವಿಧ ಮಠಗಳಲ್ಲಿ ಮತ್ತು ಮಂದಿರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ಶ್ರೀಕೃಷ್ಣ ಮಾಧ್ಯಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಮಾಧ್ವ ಮಹಾ ಮಂಡಲದ ತುಮಕೂರು ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್ ವಹಿಸಿದ್ದರು, ಈ ವೇಳೆ ಮಾತನಾಡಿದ ಅವರು, ಮಾಧ್ವ ಸಮಾಜ ಇನ್ನು ಹೆಚ್ಚಿನ ಸಂಘಟನೆ ಹೊಂದಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ಶ್ರೀಮಾಧ್ವ ಮಹಾ ಮಂಡಲದ ಗೌರವಾಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ರಾಯರು ಶ್ರೀಮಾಧ್ವ ಮುನಿಗಳ ಉಪಕಾರ ಸ್ಮರಣೆ ನಮ್ಮ ದೈನಂದಿನ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಅಖಿಲ ಭಾರತ ಮಾದ್ವ ಮಹಾ ಮಂಡಲದ ಪದಾಧಿಕಾರಿಗಳು, ಶ್ರೀಕೃಷ್ಣ ಮಂದಿರದ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.
Comments are closed.