ರೇಷ್ಮೆ ಬೆಳೆಗಾರರೊಂದಿಗೆ ವಿಜ್ಞಾನಿಗಳ ಸಂವಾದ

26

Get real time updates directly on you device, subscribe now.


ತುಮಕೂರು: ಇತ್ತೀಚಿನ ದಿನಗಳಲ್ಲಿ ದ್ವಿತಳಿ ರೇಷ್ಮೆ ಉತ್ಪಾದನೆಯಲ್ಲಿ ಹಲವಾರು ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ರೇಷ್ಮೆ ಚಾಕಿ ಹುಳು ಸಾಕಾಣಿಕೆದಾರರು, ರೇಷ್ಮೆ ಬೆಳೆಗಾರರು ಮತ್ತು ವಿಜ್ಞಾನಿಗಳು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೈವೊಲ್ಟಿನ್ ರೇಷ್ಮೆ ಗೂಡು ಉತ್ಪಾದನೆಯಲ್ಲಿ ರೈತರು ಮತ್ತು ಚಾಕಿ ಸಾಕಾಣಿಕಾ ಕೇಂದ್ರಗಳ ಮಾಲೀಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ, ಹಮಾವಾನ ವೈಪರಿತ್ಯದ ಪರಿಣಾಮ ಹಲವು ಸಮಸ್ಯೆ ತಲೆದೋರಿವೆ, ಇದರಿಂದ ಹೊರ ಬರಲು ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ಇಲಾಖೆಯ ಇಬ್ಬರು ಹಿರಿಯ ವಿಜ್ಞಾನಿಗಳು ರೈತರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ ಆಲಿಸಿ ಕೈಗೊಳ್ಳಬೇಕಾದ ಕ್ರಮ, ಕೀಟನಾಶಕ ಸಿಂಪಡಣೆ, ರೇಷ್ಮೆ ಗೂಡು ನಿರ್ವಹಣೆ ಕುರಿತಂತೆ ರೈತರ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಎಂದರು.

ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಮುತ್ತುಲಕ್ಷ್ಮೀ ಅವರು ರೇಷ್ಮೆ ಬೆಳೆಯ ನಿಯಮ ಮತ್ತು ಅವುಗಳನ್ನು ಪಾಲಿಸುವುದರಿಂದ ಚಾಕಿ ಸಾಕಾಣಿಕೆದಾರರಿಗೆ ಆಗುವ ಅನುಕೂಲಗಳ ಬಗ್ಗೆ ತಿಳಿಸಿಕೊಟ್ಟರೆ, ಮತ್ತೊಬ್ಬ ವಿಜ್ಞಾನಿ ಡಾ.ಕುಲಕರ್ಣಿ ಅವರು ಚಾಕಿ ಸಾಕಾಣಿಕಾ ಕೇಂದ್ರಗಳ ಮಾಲೀಕರು ದ್ವಿತಳಿ ರೇಷ್ಮೆ ಸಾಕಾಣಿಕೆಯಲ್ಲಿ ಯಾವೆಲ್ಲಾ ಕ್ರಮ ನುಸರಿಸಿದರೆ ಈಗಿರುವ ಸಮಸ್ಯೆಯಿಂದ ಹೊರಬರಬಹುದು ಎಂಬುದನ್ನು ತಿಳಿಸಿಕೊಟ್ಟರು.
ರೇಷ್ಮೆ ಇಲಾಖೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಚಾಕಿ ಸಾಕಾಣಿಕಾ ಕೇಂದ್ರದ ಮಾಲೀಕರು, ರೇಷ್ಮೆ ಬೆಳೆಗಾರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!