ಬೋನಿಗೆ ಬಿದ್ದ ಕರಡಿ

51

Get real time updates directly on you device, subscribe now.


ಮಧುಗಿರಿ: ತಾಲ್ಲೂಕು ಕಸಬಾ ವ್ಯಾಪ್ತಿಯ ಗ್ರಾಮಗಳಲ್ಲಿ ಆಗಾಗ್ಗೆ ಕರಡಿ ಕಾಣಿಸಿಕೊಂಡು ಜನರಲ್ಲಿ ಭಯ ಮೂಡಿಸಿದ್ದ 8 ವರ್ಷದ ಗಂಡು ಕರಡಿಯೊಂದು ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.

ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ಅವರ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ, ಆಗಾಗ್ಗೆ ಕರಡಿ ಕಾಣಿಸಿಕೊಳ್ಳುತ್ತಿದ್ದರಿಂದ ಭಯ ಭೀತರಾಗಿದ್ದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರಡಿ ನಿಯಂತ್ರಣ ಮಾಡುವಂತೆ ಮನವಿ ಮಾಡಿದ್ದರು, ಕರಡಿ ಹಿಡಿಯಲು ಬೋನ್ ಇಟ್ಟಿದ್ದರು, ಮಂಗಳವಾರ ರಾತ್ರಿ ಕರಡಿ ಬೋನಿಗೆ ಬಿದ್ದಿದೆ, ಜನರು ಸರದಿ ಸಾಲಿನಲ್ಲಿ ನಿಂತು ಕುತೂಹಲದಿಂದ ಕರಡಿ ವೀಕ್ಷಿಸಿದರು.

ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜು, ಪ್ರದೀಪ್, ಶ್ರೀಧರ್, ಶಿವರಾಜು, ಕೃಷ್ಣಮೂರ್ತಿ, ರಘು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!