ಕ್ರೆಡಾಂಗಣವಾದ ಉದ್ಯಾನವನ- ಅಧಿಕಾರಿಗಳ ಮೌನ

58

Get real time updates directly on you device, subscribe now.


ಕುಣಿಗಲ್: ಪಟ್ಟಣದ 18ನೇ ವಾರ್ಡ್ ಪ್ರದೇಶದ ಹೌಸಿಂಗ್ ಬೋರ್ಡ್ ಪ್ರದೇಶದ ಮಧ್ಯ ಭಾಗದಲ್ಲಿರುವ ಉದ್ಯಾನವನ ಕ್ರೆಡಾಂಗಣವಾಗಿ ಮಾರ್ಪಾಟಾಗುತ್ತಿದ್ದರೂ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಪರಿಸರ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

1985ರಲ್ಲಿ ಮಾಜಿ ಸಚಿವ ವೈ.ಕೆ.ರಾಮಯ್ಯ ಅವರ ಸತತ ಪರಿಶ್ರಮದಿಂದಾಗಿ ಹೌಸಿಂಗ್ಬೋರ್ಡ್ ಅಸ್ತಿತ್ವಕ್ಕೆ ಬಂದು ಸದರಿ ಪ್ರದೇಶದಲ್ಲಿ 200 ಚದುರ ಅಡಿ ವಿಸ್ತೀರ್ಣದಲ್ಲಿ ಸುಸಜ್ಜಿತ ಉದ್ಯಾನವನ ನಿರ್ಮಿಸುವುದರ ಜೊತೆಯಲ್ಲಿ ದೊಡ್ಡಕೆರೆಗೆ ಹೊಂದಿಕೊಂಡ ಕಾರಣ ಕೆರೆ ಬಫರ್ಝೋನ್ ರಕ್ಷಣೆ ನಿಟ್ಟಿನಲ್ಲಿ ಕೆರೆ ಮಗ್ಗುಲಿನಲ್ಲೂ ಸಾವಿರಾರು ಅಡಿ ಜಾಗವನ್ನು ಉದ್ಯಾನವನಕ್ಕೆ ಮೀಸಲಿಡಲಾಗಿದೆ, ಹೌಸಿಂಗ್ ಬೋರ್ಡ್ ಪ್ರದೇಶದ ಮಧ್ಯ ಭಾಗದ ಉದ್ಯಾನವನದಲ್ಲಿ 2018ರಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಉದ್ಯಾನವನ ಜಾಗದಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಿದ್ದು ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದೆ, ದಿನಾಲೂ ಶುದ್ಧೀಕರಿಸಿದ ನಂತರ ಬರುವ ಸಾವಿರಾರು ಲೀಟರ್ ಗಡಸು ನೀರು ಚರಂಡಿ ಪಾಲಾಗುತ್ತಿದೆ, ದುರಂತ ಎಂದರೆ ಉದ್ಯಾನ ವನದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಬಿದ್ದು ಎರಡು ದೇವಾಲಯ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಯಾಗದೆ ಪಾಳು ಬಿದ್ದು ಉದ್ಯಾನವನದ ಕೆಲ ಜಾಗ ಅತಿಕ್ರಮಿಸಿದರೆ, ಅಂಗನವಾಡಿ ಕಟ್ಟಡ, ನೀರು ಪೂರೈಕೆಯ ಪಂಪ್ಹೌಸ್ ಸಹ ಉದ್ಯಾನವನದ ಜಾಗದಲ್ಲಿ ನಿರ್ಮಿಸಲಾಗಿದೆ, ಬಾಕಿ ಉದ್ಯಾನವನದ ಜಾಗ ಬಹುತೇಕ ಉಳಿದ್ದಿದರೂ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ, ಬದ್ಧತೆಯ ಕೊರತೆಯಿಂದಾಗಿ ನೀರಿದ್ದರೂ ಉದ್ಯಾನವನ ನಿರ್ವಹಣೆಯಾಗದೆ ನೆನೆಗುದಿಗೆ ಬಿದ್ದಿದೆ, ಕೆಲವರು ಉದ್ಯಾನವನದಲ್ಲಿ ವಾಲಿಬಾಲ್, ಷಟಲ್ಕಾಕ್ ಕೋರ್ಟ್ ನಿರ್ಮಿಸಿಕೊಂಡು ಹಿಂದೆ ಅಭಿವೃದ್ಧಿ ಪಡಿಸಲಾಗಿದ್ದ ವಾಕಿಂಗ್ ಪಾಥ್ ಮುಚ್ಚಿದ್ದರಿಂದ ಉದ್ಯಾನವನವನ್ನು ಕ್ರೆಡಾಂಗಣವನ್ನಾಗಿಸಿ ಉದ್ಯಾನವನದ ಮೂಲ ಅಸ್ತಿತವ್ವನ್ನು ಪ್ರಶ್ನಿಸುವಂತೆ ಮಾಡಿದ್ದಾರೆ.

ಉದ್ಯಾನವನವನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಈಗಾಗಲೆ ಉಚ್ಛ, ಸರ್ವೋಚ್ಛ ನ್ಯಾಯಾಲಯಗಳು ಸೇರಿದಂತೆ ಇಲಾಖೆಯ ಸ್ಪಷ್ಟ ಆದೇಶ, ನಿಯಮಾವಳಿ ಇದ್ದರೂ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಯಾನವನ ಕ್ರೆಡಾಂಗಣವಾಗಿದೆ, ವಾರ್ಷಿಕ ಉದ್ಯಾನವನ ನಿರ್ವಹಣೆ ಎಂದು ಲಕ್ಷಾಂತರ ರೂ. ವ್ಯಯ ಮಾಡುವ ಪುರಸಭೆಯ ಪರಿಸರ ವಿಭಾಗದ ಅಧಿಕಾರಿಗಳು ಉದ್ಯಾನವನ ಕ್ರೆಡಾಂಗಣವಾಗುತ್ತಿದ್ದರೂ ಕ್ರಮ ವಹಿಸದೆ ಜಾಣ ಕುರುಡು ಪ್ರದರ್ಶಿಸಿದ್ದಾರೆ, ದಿನಾಲೂ ವಾರ್ಡ್ ಭೇಟಿ ನೀಡುವ ಪುರಸಭೆ ಅರೋಗ್ಯಾಧಿಕಾರಿಗಳು ಉದ್ಯಾನವನ ಅತಿಕ್ರಮಣ, ಅನ್ಯ ಉದ್ದೇಶದ ಬಗ್ಗೆ ವರದಿ ನೀಡಿ ಕ್ರಮ ಕೈಗೊಳ್ಳಬೇಕಿದ್ದು ಅವರು ಸಹ ಈ ನಿಟ್ಟಿನಲ್ಲಿ ಕರ್ತವ್ಯ ಲೋಪ ಎಸಗಿರುವ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 18ನೇ ವಾರ್ಡ್ನಲ್ಲಿ ಸಾಕಷ್ಟು ಮಂದಿ ಹಿರಿಯ ನಾಗರಿಕರಿದ್ದು ಬೆಳಗ್ಗೆ, ಸಂಜೆ ವಾಯು ವಿಹಾರಕ್ಕೆ, ವಿಶ್ರಮಿಸಲು ಉದ್ಯಾನವನ ಇದ್ದರೂ ಅಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ರಸ್ತೆಯಲ್ಲೆ ವಾಯು ವಿಹಾರ ಮಾಡುವಂತಾಗಿದೆ, ಇನ್ನಾದರೂ ಪುರಸಭೆಯ ಪರಿಸರ ವಿಭಾಗದ ಅಧಿಕಾರಿಗಳು ಉದ್ಯಾನವನವನ್ನು ಅದರ ಮೂಲ ಉದ್ದೇಶಕ್ಕೆ ಸಂರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!