ಲಂಡನ್ ನಿಂದ ಅಂಡಮಾನ್

ಆಗುಂಬೆ ಎಸ್.ನಟರಾಜ್ ಅವರ ಕೃತಿ

714

Get real time updates directly on you device, subscribe now.


ಕನ್ನಡ ನಾಡುಕಂಡ ಶ್ರೇಷ್ಠ ಇತಿಹಾಸದ ಅನ್ವೇಷಕರು ಮತ್ತು ಹಿರಿಯ ಸಾಹಿತಿಗಳಾದ ಆಗುಂಬೆ ಎಸ್.ನಟರಾಜ್ ಅವರ ಕೃತಿ ಲಂಡನ್ ನಿಂದ ಅಂಡಮಾನ್ ಗೆ ಎಂಬ ಪ್ರವಾಸ ಕಥನ ಓದಿ ನನಗೆ ರೋಮಾಂಚನವಾಯಿತು, ಪ್ರವಾಸ ಕಥನವೆಂದರೆ ಇಷ್ಟೇಲ್ಲಾ ಮಾಹಿತಿ ,ಅನ್ವೇಷಣೆ ಇರುತ್ತದೆ ಎಂದು ಅಂದುಕೊಂಡಿರಲ್ಲಿಲ್ಲ.
ಈ ಕೃತಿ ಪ್ರವಾಸ ಕಥನದ ಮೇರು ಕೃತಿ ಎಂದರೆ ತಪ್ಪಾಗಲಾರದು ಅಥವಾ ಅತಿಶಯೋಕ್ತಿ ಎಂದು ಅನಿಸದು. ಈ ಕೃತಿ ತುಂಬಾ ಸ್ವಾರಸ್ಯಭರಿತವಾಗಿದೆ , ಇತಿಹಾಸದ ಪುಸ್ತಕಗಳಲ್ಲಿ ಸಿಗದ ಅನೇಕ ಸೋಜಿಗದ ಸಂಗತಿಗಳನ್ನು ಒಳಗೊಂಡಿದೆ ಈ ಕೃತಿ. ಈ ಕೃತಿಯಲ್ಲಿ ಒಟ್ಟು ಹನ್ನೊಂದು ಅಧ್ಯಾಯಗಳಿದ್ದು ಪ್ರತಿಯೊಂದು ಅಧ್ಯಾಯ ಓದುಗರನ್ನು ಹಿಡಿದಿಟ್ಟು ಕೊಳ್ಳುತ್ತದೆ. ಪೂರ್ವದಲ್ಲಿ ಇಂಗ್ಲೆಂಡ್ ನ್ನು ಫ್ರೆಂಚ್ ರು ಆಕ್ರಮಿಸಿ ಆಳಿದ ವಿಷಯ ಜನಜನಿತ.ತಂದನಂತರ ಲಂಡನ್ ಬೆಳೆದು ಬಂದ ರೀತಿ ಲೇಖಕರು ಸೊಗಸಾಗಿ ವಿವರಿಸಿ
ಲಂಡನ್ನಿನ ಇಂಚು ಇಂಚು ಸಂಚರಿಸಿ ತುಂಬಾ ಸೂಕ್ಷ್ಮವಾದ ವಿಷಯಗಳನ್ನು ಹೆಕ್ಕಿ ತಗೆದು ಬರವಣಿಗೆ ಮೂಲಕ ಹಂಚಿಕೊಂಡಿದ್ದಾರೆ. ಲೇಖಕರು ಲಂಡನ್ನಿನ ಅಂಡರ್ಗ್ರೌಂಡ್ ರೈಲು, ವೈಸ್ಟಮಿನಿಸ್ಟರ್ ಪ್ಯಾಲೇಸ್, ಬಿಗ್ ಬೆನ್ ಗಡಿಯಾರ ಗೋಪುರ, ವೆಸ್ಟ್ ಮಿನಿಸ್ಟರ್ ಚರ್ಚ್, ಲಂಡನ್ ಟವರ್, ವಸ್ತು ಸಂಗ್ರಹಾಲಯ, ಆಕ್ಸಫರ್ಡ್ ವಿಶ್ವವಿದ್ಯಾಲಯ, ಶೇಕ್ಸಫಿಯರ್ ಜನ್ಮ ಸ್ಥಳ ಸ್ಟಾರ್ಟಫೋರ್ಟ – ಅನ್- ಆವನ್ ಬಗ್ಗೆ ಕೃತಿಯಲ್ಲಿ ಸಂಪೂರ್ಣ ಮಾಹಿತಿ ನೀಡುತ ಇವುಗಳ ಇತಿಹಾಸವನ್ನೂ ತಿಳಿಸಿದ್ದಾರೆ ಮತ್ತು ಪ್ರತಿ ಸ್ಥಳದ ಛಾಯಾಚಿತ್ರ ಸೆರೆ ಹಿಡಿದು ಓದುಗರಿಗೆ ಅವುಗಳ ಕಡೆಗೆ ಗಮನ ಸೆಳೆಯುವಂತೆ ಮಾಡಿದ್ದಾರೆ . ಪ್ರವಾಸದ ಅನುಭವಕ್ಕೆ ಬಂದ ಮತ್ತು ಒಡನಾಟ ಸಿಕ್ಕ ಲಂಡನ್ನಿನ ನಾಗರಿಕರ ಸಮಯ ಪ್ರಜ್ಞೆ, ಔದಾರ್ಯ ಬಗ್ಗೆ ಎಳೆ ಎಳೆಯಾಗಿ ತಿಳಿಸಿದ್ದಾರೆ.
ಭಾರತದ ಟಿಪ್ಪು ಸುಲ್ತಾನ್ ನ ವಂಶಸ್ಥರು ಇಂಗ್ಲೆಂಡ್ ನಲ್ಲಿ ನಡೆಸಿರುವ ಕುರಿತು ಉಲ್ಲೇಖಿಸಿದ್ದಾರೆ. ಟಿಪ್ಪು ಸುಲ್ತಾನ್ ಮರಿಮಗಳಾದ ನೂರ್ ಇನಾಯತ್ ಖಾನ್ ಪ್ರತಿಮೆ ಬ್ರಿಟಿಷ್ ಅಧಿಕಾರಿಗಳು ಸ್ಥಾಪಿಸಿ ಸರಕಾರ ಮರಣೋತ್ತರವಾಗಿ ಅವಳಿಗೆ ನೀಡಿದ ಜಾರ್ಜ್ ಕ್ರಾಸ್ ಪದಕ ಬಗ್ಗೆ ಉಲ್ಲೇಖಿಸಿದ್ದಾರೆ. ಇಂಗ್ಲೆಂಡಿನಿಂದ ಫ್ರಾನ್ಸ್ ಸಂಚರಿಸಿ ಲೇಖಕರು ಸೀನ್ ನದಿಯ ದಡದಲ್ಲಿ ಪ್ಯಾರಿಸನ ಈಫೆಲ್ ಟವರ್, ಆರ್ಕ್ ಡಿ ಟ್ರಾಯಂಫ್, ನಾಟ್ರ ಡೇಮ್ ಕ್ಯಾಥಡಿಲ್, ಗಿಲೋಟಿನ್ ಯಂತ್ರ ಬಗ್ಗೆ ಮನಮುಟ್ಟುವಂತೆ ಬರೆಯುತ್ತಾ ಇತಿಹಾಸದ ಸಹಿತವಾಗಿ ವಿವರಿಸಿದ್ದಾರೆ. ಲೌವ್ರೆ ವಸ್ತು ಸಂಗ್ರಹಾಲಯ, ವರ್ ಸೈಲ್ಸ್ ಅರಮನೆ, ವಾಲ್ಟೇರನ್ ಪುತ್ಥಳಿ, ಪ್ಯಾರಿಸ್ ನ ಸುಗಂಧ ದ್ರವ್ಯ Eau-de-cologne ಬಗ್ಗೆ ಬೆಳಕು ಚಲ್ಲಿದ್ದಾರೆ. ಪ್ಯಾರಿಸ್ ಪ್ರವಾಸದಲ್ಲಿ ನಡುವೆ ರೋಚಕ ಸನ್ನಿವೇಶಗಳನ್ನೂ ಹಂಚಿಕೊಂಡಿದ್ದಾರೆ. ಪ್ರವಾಸ ಮುಂದುವರಿಸುತ್ತಾ ಜರ್ಮನಿಯ ಬರ್ಲಿನ್ ನಗರಕ್ಕೆ ಬಂದು ಅಲ್ಲಿನ ಬ್ರಾಂಡನ್ ಬಗ್ ಗೇಟ್ ಬಗ್ಗೆ ಸವಿಸ್ತಾರವಾಗಿ ಬರೆಯುತ್ತಾ ಸಹ ಪ್ರವಾಸಿಗರ ಜೊತೆ ನಡೆದ ಸಂಭಾಷಣೆ ಕೌತುಕ ಹುಟ್ಟಿಸುವ ಸನ್ನಿವೇಶಗಳನ್ನೂ ವಿವರಿಸಿದ್ದಾರೆ.
ಪ್ರವಾಸ ಮುಂದುವರಿಸಿ ಪವಿತ್ರ ನಗರಿ ಜೆರುಸಲೆಮ್ ನಗರ ಆಗಮಸಿ ಅದರ ಇತಿಹಾಸವನ್ನು ಅಲ್ಲಿನ ನಾಗರಿಕತೆಯನ್ನು ಕಣ್ಣಿಗೆ ಕಂಡದ್ದನ್ನು ಮಸ್ತಕದಲ್ಲಿ ಉಳಿಯುವಂತೆ
ಬರೆದಿದ್ದಾರೆ. ಇತಿಹಾಸದಲ್ಲಿ ಬರುವ ಆ ದೇಶದ ರಾಜ ಸಲಾದೀನ್ ಕರುಣಾಳು ಎಂದು ಹೊಗಳುತ್ತಾ ಅವನ ಆಳ್ವಿಕೆಯನ್ನು ಅವನು ತೋರದ ಸೌಹಾರ್ದತೆ ಇಂದಿಗೂ ಆದರ್ಶಪ್ರಾಯ
ಎನ್ನುತ್ತಾರೆ ಲೇಖಕರು. ಮೂರುಸಾವಿರ ಇತಿಹಾಸವುಳ್ಳ ಹೈಫಾ ನಗರದ ಮೌಂಟ್ ಕಾರ್ಮೆಲ್ ಬೆಟ್ಟ, ಮೆಡಿಟರೇನಿಯನ್ ಸಮುದ್ರದ ಬಗ್ಗೆ ವರ್ಣನೆ ಅಭೂತಪೂರ್ವ. ಹೈಫಾ ನಗರ ನಿರ್ಮಾಣಗೊಂಡ ರೀತಿ ಈಗಿನ ಪರಿಸ್ಥಿತಿ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.
ಲೇಖಕರು ಈ ಕೃತಿಯಲ್ಲಿ ಗಾಂಧೀಜಿ ಸತ್ಯಾಗ್ರಹಗೈದ ಹಿಂಸಾಚಾರ ಕೊನೆಗೊಳಿಸಿ ಸಾವಿರಾರು ಜನರ ಜೀವನ ಉಳಿಸಿದ ಬಾಂಗ್ಲಾದೇಶದ ನೌಖಾಲಿಗೆ ಪ್ರವಾಸ ಮಾಡಿ ಅಲ್ಲಿಯ
ಇತಿಹಾಸ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ರಸವತ್ತಾಗಿ ಉಲ್ಲೇಖಿಸಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಧಾಕಾ ಕರ್ನಾಟಕ ವಂಶದ ಬಲ್ಲಾಳ ಸೇನ ನಿರ್ಮಿಸಿದ ಎಂದು ಅಲ್ಲಿನ ಧಾಕೇಶ್ವರಿ ದೇವಸ್ಥಾನದಿಂದ ಧಾಕಾ ಎಂಬ ನಗರಕ್ಕೆ ಹೆಸರು ಬಂದಿತೆಂದು ಅನ್ವೇಷಣೆ ನಡೆಸಿದ್ದಾರೆ ಲೇಖಕರು.
ಸ್ವದೇಶದ ಫತೇಪುರ್ ಸಿಕ್ರೀ ಬಾದಶಾಹ ಅಕ್ಬರ್ ಕೋಟೆ ಬಗ್ಗೆ ವಿವರಿಸುತ್ತ ಇನ್ನೂ ಹತ್ತು ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಸಿಂದ್ ಸಾಮ್ರಾಜ್ಯದ ಕೊನೆಯ ರಾಜ ದಾಹಿರನ ರೋಚಕ ಕಥೆ ಓದುಗರಿಗೆ ತನ್ನ ಕಡೆಗೆ ಸೆಳೆಯುತ್ತದೆ. ಬೆಂಗಳೂರಿನ ಮಯೋ ಹಾಲ್ ಎಂಬ ಹೆಸರಿನ ಕೌತುಕ ಅರಿಯಲು ಅಂಡಮಾನಿನ ಕಡೆಗೆ ಸಂಚರಿಸಿ ಅದರ ಕಹಾನಿಯನ್ನು ಎಳೆ ಎಳೆಯಾಗಿ ಬಿಚ್ಚಿಯಿಟ್ಟದ್ದಾರೆ ಲೇಖಕರು.
ಅಂಡಮಾನಿನ ಪೋರ್ಟ ಬ್ಲೇರ್, ರಾಸ್ ಐಲೆಂಡ್, ವೈಪರ್ ಐಲೆಂಡ್ ಬಗ್ಗೆ ಅಲ್ಲಿನ ಹಾಗು ಹೋಗು ಬಗ್ಗೆ ರಸವತ್ತಾಗಿ ಚಿತ್ರಿಸಿದ್ದಾರೆ ಲೇಖಕರು. ಕಾಲಾಪಾನಿಯಲ್ಲಿ ಶಿಕ್ಷೆ ಅನುಭವಿಸಿದ
ಕರ್ನಾಟಕದ ನರಗುಂದದ ಸಿಪಾಯಿಗಳ ಪಟ್ಟಿ ಮಾಡಿ 1857ರ ಸಿಪಾಯಿ ಧಂಗೆ ಸ್ವತಂತ್ರ ಹೋರಾಟದಿಂದ ಅನುಭವಿಸಿದ ಶಿಕ್ಷೆ ಬಗ್ಗೆ ಕಲೆಹಾಕಿ ಅವರ ಪೂರ್ವಾಪರದ ಸಂಪೂರ್ಣ ಚಿತ್ರಣ ಕೃತಿಯಲ್ಲಿ ವಿವರಿಸಿದ್ದು ನಿಜಕ್ಕೂ ಅಭಿನಂದನಾರ್ಹ.
ಒಟ್ಟಿನಲ್ಲಿ ಹೇಳುವುದಾದರೆ ಕನ್ನಡದಲ್ಲಿ ಇಂತಹ ಪ್ರವಾಸ ಕಥನ ಹೊರ ತಂದಿರುವುದು ಅದು ಎಪ್ಪತ್ತರ ವಯಸ್ಸಿನಲ್ಲಿ ನಿಜಕ್ಕೂ ಶ್ಲಾಘನೀಯ. ಈ ಕೃತಿಯೂ ಆಬಾಲವೃದ್ದರಿಗೂ ಬೇಕಾಗುವ ಬಹಳ ದುರ್ಲಾಭದ ಕೃತಿ, ಕನ್ನಡದ ಇತಿಹಾಸ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲಕರ. ರಾಜ್ಯದ ಪ್ರತಿ ಗ್ರಂಥಾಲಯಕ್ಕೆ ಇದರ ಅವಶ್ಯಕತೆ ಇದೆ ಎಂಬುದು ನನ್ನ ಅಭಿಪ್ರಾಯ.

ವಿಜಯಕುಮಾರ್ ಎಚ್. ಕೆ.
ಶ್ರೀ ಸದನ
ನಂ.೩೦
ಸ. ನಂ. ೨೯೧/ಏ/೩
ಹನುಮಾನ್ ಮಂದಿರ ಪಕ್ಕದಲ್ಲಿ
ರಾಘವೇಂದ್ರ ಕಾಲೋನಿ
ಶಕ್ತಿನಗರ-೫೮೪೧೭೦
ರಾಯಚೂರು
ಮೋ:೮೦೫೦೬೮೬೩೬೧

Get real time updates directly on you device, subscribe now.

Comments are closed.

error: Content is protected !!