ಸರ್ವಜ್ಞನ ವಿಚಾರಧಾರೆ ಅಳವಡಿಸಿಕೊಳ್ಳಿ

48

Get real time updates directly on you device, subscribe now.


ಮಧುಗಿರಿ: ಸರ್ವಜ್ಞನ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ವಜ್ಞನ ಮಾನವೀಯ ಗುಣಗಳು ಪ್ರತಿಯೊಬ್ಬರ ಜೀವನದಲ್ಲಿ ಹಾಸು ಹೊಕ್ಕಾಗಿದೆ, ಅವರ ಆದರ್ಶಗಳನ್ನು ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದಾರ್ಶನಿಕರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.

ತಾಪಂ ಇಓ ಲಕ್ಷ್ಮಣ್ ಮಾತನಾಡಿ, ತಳ ಸಮುದಾಯದ ಕುಲ ಕಸುಬುದಾರರಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು 2900 ಮನೆಗಳನ್ನು ಮಂಜೂರು ಮಾಡಿಸಲಿದ್ದು, ಅದೇ ರೀತಿ ಗುಡಿಸಲು ಮುಕ್ತ ಕ್ಷೇತ್ರ ಮಾಡುವ ಉದ್ದೇಶದಿಂದ ಕ್ಷೇತ್ರ ವ್ಯಾಪ್ತಿಯಲ್ಲಿ 5000 ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ, ಕುಲಕಸುಬುದಾರರು ಅರ್ಜಿಗಳನ್ನು ಗ್ರಾಪಂ ಕಚೇರಿಗೆ ಸಲ್ಲಿಸಬೇಕೆಂದು ತಿಳಿಸಿದ ಅವರು ತಳ ಸಮುದಾಯಗಳಿಗೆ ಸರ್ಕಾರದ ಸವಲತ್ತು ತಲುಪಿಸುವ ಕೆಲಸ ಆಗಬೇಕಾಗಿದೆ ಎಂದರು.

ತಹಶೀಲ್ದಾರ್ ಸಿಗ್ಬತ್ ವುಲ್ಲಾ ಮಾತನಾಡಿ ಸಮಾಜದ ಅಂಕು ಡೊಂಕು ತಿದ್ದಿ ಸಮಾಜಕ್ಕೆ ಮಾರ್ಗದರ್ಶನ ನೀಡಿದವರು ಸರ್ವಜ್ಞರು ಎಂದರು.
ಸರ್ವಜ್ಞ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟರಮಣಪ್ಪ ಮಾತನಾಡಿ, 2013- 18ರ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ತಳ ಸಮುದಾಯ ಸಮುದಾಯಕ್ಕೆ ಸೇರಿದ 33 ಮಹನೀಯರ ಜಯಂತಿಗಳನ್ನು ಸರ್ಕಾರದಿಂದ ಆಚರಿಸಲು ತೀರ್ಮಾನ ತೆಗೆದುಕೊಂಡದ್ದು ಶ್ಲಾಘನೀಯ, ತಳ ಸಮುದಾಯದ ಸುಧಾರಣೆ ಆಗಬೇಕಾಗಿದೆ, ಅವರಲ್ಲಿ ಒಗ್ಗಟ್ಟು ಮೂಡಬೇಕಾಗಿದೆ, ಜಾತಿ ಸಮೀಕ್ಷೆ ವರದಿಯನ್ನು ಸರ್ಕಾರ ಸ್ವೀಕರಿಸಿ ಜಾರಿಗೊಳಿಸಬೇಕು, ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು, ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗಬೇಕು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಮಶಾನಗಳ ನಿರ್ಮಿಸಬೇಕು, ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜಯರಾಮಯ್ಯ, ಖಜಾಂಚಿ ಚಿಕ್ಕರಂಗಯ್ಯ, ವಲಯ ಅರಣ್ಯಾಧಿಕಾರಿ ಸುರೇಶ್, ರೇಷ್ಮೆ ಇಲಾಖೆಯ ಲಕ್ಷ್ಮೀನರಸಯ್ಯ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಲೋಕೇಶಪ್ಪ, ಬಿಸಿಎಂ ಇಲಾಖೆಯ ಜಯರಾಂ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ, ಮಾಜಿ ಪುರಸಭಾ ಸದಸ್ಯ ಎಂ.ಜಿ.ರಾಮು, ಕವಯತ್ರಿ ವೀಣಾ ಶ್ರೆನಿವಾಸ್, ಮೂಡ್ಲ ಗಿರೀಶ್, ಎನ್.ಮಹಾಲಿಂಗೇಶ್, ಕಸಾಪ ಅಧ್ಯಕ್ಷೆ ಸಹನ ನಾಗೇಶ್ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!