ಶ್ರೀ. ರಾಮಾನುಜಾಚಾರ್ಯ ಸದ್ಭಾವನಾ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಹನುಮೇಶ್ ಕೆ. ಯಾವಗಲ್ ಆಯ್ಕೆ

38

Get real time updates directly on you device, subscribe now.


ಬೆಂಗಳೂರು: ಜಗದ್ಗುರು ಶ್ರೀ ರಾಮಾನುಜಾಚಾರ್ಯ ಸದ್ಭಾವನಾ ಪ್ರಶಸ್ತಿಗೆ ಈ ಬಾರಿ ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಶ್ರೀಮಠ ಪ್ರಶಸ್ತಿ ನೀಡಿ ಗೌರವಿಸಲಿದೆ.
ಉದಯ ಸುದ್ದಿ ವಾಹಿನಿ ಸೇರಿದಂತೆ ಒಟ್ಟಾರೆ ಮಾಧ್ಯಮ ಕ್ಷೇತ್ರದಲ್ಲಿ ಮೂರು ದಶಕಗಳ ಸೇವೆ ಪರಿಗಣಿಸಿ ಈ ಬಾರಿಯ ಪ್ರಶಸ್ತಿಗೆ ಹನುಮೇಶ್ ಕೆ ಯಾವಗಲ್ ಅವರನ್ನು ಈ ಪ್ರಶಸ್ತಿಗೆ ಗುರುತಿಸಲಾಗಿದೆ.
ಇದೇ ತಿಂಗಳು, ಶನಿವಾರ ಸಂಜೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಮೇಲುಕೋಟೆ ಯದುಗಿರಿ ಯತಿರಾಜ ಶಾಖಾ ಮಠದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀ. ಯತಿರಾಜ ಜೀಯರ್ ಸ್ವಾಮೀಜಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಆಧ್ಯಾತ್ಮಿಕ ಹಾಗೂ ಜೀವನ ಕಲೆಯ ಶಿಕ್ಷಣದ ಮೂಲಕ ಸಾಮಾಜಿಕ ಮೌಲ್ಯಗಳನ್ನು ಸಂರಕ್ಷಣೆ ಮಾಡುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಟ್ರಸ್ಟಿ ರಂಗನಾಥ್ ಪ್ರಸಾದ್ ಮತ್ತು ಶಿಕ್ಷಣ, ಸಮಾಜ ಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಧರ್ ಐಯ್ಯಂಗಾರ್ ಅವರಿಗೆ ಶ್ರೀಮದ್. ರಾಮಾನುಜಾಚಾರ್ಯ ಸದ್ಭಾವನಾ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತಿದೆ.
ಇದೇ ವೇಳೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಗುವುದು.

ವಧು-ವರ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಲಾಗುವುದು ಎಂದು ಸಪ್ತಪದಿ ಫೌಂಡೇಶನ್ ಮುಖ್ಯಸ್ಥ ಶ್ರೀನಿವಾಸ ಭಾರದ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಖಿಲ ಕರ್ನಾಟಕ ಶ್ರೀವೈಷ್ಣವ ಮಹಾಸಭಾ, ಗ್ಲೋಬಲ್ ಬ್ರಾಹ್ಮಿನ್ಸ್ ಅಸೋಸಿಯೇಷನ್, ವಿಪ್ರ ಬಿಸಿನೆಸ್ ಫೋರಂ, ಮಂಗಳಸೂತ್ರ ಪತ್ರಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!