ವೃದ್ಧೆಗೆ ನಂಬಿಸಿ ಸರ ದೋಚಿದ ಖದೀಮ

64

Get real time updates directly on you device, subscribe now.


ಮಧುಗಿರಿ: ಅಪರಿಚಿತ ವ್ಯಕ್ತಿಯೊಬ್ಬ ಪೋಸ್ಟ್ ಮ್ಯಾನ್ ಎಂದು ಮಹಿಳೆಯೊಬ್ಬರನ್ನು ನಂಬಿಸಿ ಬಂಗಾರದ ಸರ ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ.
ಪಟ್ಟಣದ ದೊಡ್ಡಪೇಟೆ ಬೀದಿಯ ವಾಸಿ ಗೀತಾ ಎಂಬುವರಿಗೆ ಸೇರಿದ 40 ಗ್ರಾಂ ಚಿನ್ನದ ಸರವಾಗಿದ್ದು, ನಾನು ಪೋಸ್ಟ್ ಮ್ಯಾನ್ ಆಗಿದ್ದು ನಿಮಗೆ ವೃದ್ಧಾಪ್ಯ ವೇತನ ಬರುವಂತೆ ಮಾಡುವುದಾಗಿ ವೃದ್ಧ ಮಹಿಳೆಯನ್ನು ನಂಬಿಸಿದ್ದಾನೆ.
ನಿಮ್ಮ ಕೊರಳಿನಲ್ಲಿ ಚಿನ್ನದ ಸರ ಇದ್ದರೆ ಆ ವೇತನವು ಬರುವುದಿಲ್ಲ ಎಂದು ಹೇಳಿ ಕೊರಳಿನಿಂದ ಚಿನ್ನದ ಸರ ತೆಗೆಸಿದ್ದಾನೆ, ನಂತರ ದಾಖಲೆ ತರುವಂತೆ ವೃದ್ಧೆ ಮಹಿಳೆಗೆ ಹೇಳಿದ್ದು ಮಹಿಳೆ ದಾಖಲೆ ತರಲು ಒಳಗೆ ಹೋಗುವಾಗ ಸಮೀಪದಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಸರ ಕದ್ದು ಪರಾರಿಯಾಗಿದ್ದು ವೃದ್ಧ ಮಹಿಳೆ ನೀಡಿದ ದೂರಿನ ಅನ್ವಯ ಮಧುಗಿರಿ ಪೋಲಿಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!