ಮಧುಗಿರಿ ಸಾರಿಗೆ ಘಟಕಕ್ಕೆ ಐದು ಅಶ್ವಮೇಧ ಬಸ್

76

Get real time updates directly on you device, subscribe now.


ಮಧುಗಿರಿ: ರಾಜ್ಯದಲ್ಲಿ ಕೆ ಎಸ್ ಆರ್ ಟಿ ಸಿ ವತಿಯಿಂದ ನೂತನವಾಗಿ 100 ಅಶ್ವಮೇಧ ಕ್ಲಾಸಿಕ್ ಬಸ್ ಗಳ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಧುಗಿರಿ ಸಾರಿಗೆ ಘಟಕಕ್ಕೆ ಐದು ಬಸ್ ಗಳನ್ನು ನೀಡಲಾಗಿದೆ, ಇದರಿಂದ ನಮ್ಮ ಭಾಗದ ಜನತೆಗೆ ಸಾರಿಗೆ ವ್ಯವಸ್ಥೆ ಇನ್ನಷ್ಟು ಸುಗಮವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನೂತನ ಐದು ಅಶ್ವಮೇಧ ಕ್ಲಾಸಿಕ್ ಬಸ್ ಗಳಿಗೆ ಸ್ವಯಂ ಬಸ್ ಚಾಲನೆ ನೀಡಿ ಮಾತನಾಡಿ, ಗಡಿ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ, ಶಾಲಾ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ಈಗಾಗಲೇ ಕೆ.ಸಿ.ರೊಪ್ಪ, ಹೊಸಕೋಟೆ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಪ್ರಸ್ತುತ ಕಡಗತ್ತೂರು, ಪರ್ತಿಹಳ್ಳಿ, ಮಲ್ಲನಾಯಕನ ಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಅಧಿಕಾರಿಗಳಿಗೆ ಸರ್ವೇ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಗಡಿ ಭಾಗ ಇತರೆ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಮಧುಗಿರಿ ಘಟಕಕ್ಕೆ 5 ನೂತನ ಬಸ್ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ವಿಶೇಷ ಕಾಳಜಿ ವಹಿಸಿ ಸಾರಿಗೆ ವ್ಯವಸ್ಥೆಗಾಗಿ ಕ್ಷೇತ್ರದ ಜನತೆಗೆ 5 ನೂತನ ಬಸ್ ಗಳನ್ನು ಕೊಡುಗೆಯಾಗಿ ನೀಡಿದ ಸಹಕಾರ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ರವರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ನೆಲಮಂಗಲ ಡಿಪೋ ವ್ಯವಸ್ಥಾಪಕ ಮಂಜುನಾಥ್, ಮಧುಗಿರಿ ಡಿಪೋ ವ್ಯವಸ್ಥಾಪಕ ರಾಮಚಂದ್ರಪ್ಪ, ವಿಭಾಗೀಯ ಸಂಚಾರ ಅಧಿಕಾರಿ ಬಸವರಾಜು, ಯಾಂತ್ರಿಕ ಅಭಿಯಂತರ ಆಸಿಫ್ ಉಲ್ಲಾ ಶರೀಫ್, ಲೆಕ್ಕಾಧಿಕಾರಿ ತೇಜಸ್, ಮುಖಂಡರಾದ ಆದಿನಾರಾಯಣ ರೆಡ್ಡಿ, ಎಂ.ಕೆ.ನಂಜುಂಡಯ್ಯ, ಎಂ.ಎಸ್.ಮಲ್ಲಿಕಾರ್ಜುನಯ್ಯ, ಗೋಪಾಲಯ್ಯ, ವಕೀಲ ಹೆಚ್.ಟಿ.ತಿಮ್ಮರಾಜು ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!