ನಾರಾಯಣ ಸ್ವಾಮಿ ರಥೋತ್ಸವ ವೈಭವ

44

Get real time updates directly on you device, subscribe now.


ಶಿರಾ: ಶತಮಾನಗಳ ಇತಿಹಾಸ ಹೊಂದಿರುವ ಇಲ್ಲಿನ ಸುಪ್ರಸಿದ್ಧ ಶ್ರೀಲಕ್ಷ್ಮೀನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ನಗರದ ಏಕೈಕ ರಥೋತ್ಸವಕ್ಕೆ ಗುರುವಾರ ಅಂಕುರಾರ್ಪಣೆ ನಡೆಸಲಾಗಿತ್ತು, ಶುಕ್ರವಾರ ಸಂಜೆ ದೇವಾಲಯದ ಆವರಣದಲ್ಲಿ ಭೂ- ನೀಲಾ ಸಹಿತ ನಾರಾಯಣರ ಕಲ್ಯಾಣೋತ್ಸವ ವಿಜೃಂಭಣೆಯಿಂದ ಜರುಗಿತು, ಕಲ್ಯಾಣೋತ್ಸವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ನಗರಸಭಾ ಅಧ್ಯಕ್ಷೆ ಪೂಜಾ ಪೆದ್ದರಾಜು ಪಾಲ್ಗೊಂಡಿದ್ದರು, ರಥೋತ್ಸವಕ್ಕೂ ಮುನ್ನ ಸಾಂಪ್ರದಾಯಿಕ ಆಚರಣೆ, ಹೋಮ, ಪೂರ್ಣಾಹುತಿ ನಂತರ ದೇವರ ಉತ್ಸವ ವಿಗ್ರಹ ರಥದಲ್ಲಿ ಪ್ರತಿಷ್ಠಾಪಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು, ದಾರಿಯುದ್ದಕ್ಕೂ ಹಲವು ಭಕ್ತರು ಪೂಜೆ ಸಲ್ಲಿಸಿ ಸಂಭ್ರಮಿಸಿದರು.

ನೂತನ ರಥ ಲೋಕಾರ್ಪಣೆ: ಹಿಂದೆ ಬಳಸುತ್ತಿದ್ದ ರಥವು ಶಿಥಿಲಗೊಂಡಿದ್ದು, ಈಗ್ಗೆ ಏಳೆಂಟು ವರ್ಷಗಳಿಂದ ಬಾಡಿಗೆ ವಾಹನದಲ್ಲಿ ರಥೋತ್ಸವ ನಡೆಸಲಾಗುತ್ತಿತ್ತು, ಹಿಂದೆ ಶಾಸಕರಾಗಿದ್ದ ಸಿ.ಎಂ.ರಾಜೇಶ್ ಗೌಡ ವೈಯಕ್ತಿಯ ಅನುದಾನ ಮತ್ತು ಶಾಸಕರ ನಿಧಿಯಿಂದ ನೂತನ ರಥದ ನಿರ್ಮಾಣಕ್ಕೆ ನೆರವಾಗಿದ್ದರು, ಈ ಹಣವೂ ಸಾಲದೇ ಬಂದಾಗ ಭಕ್ತಾದಿಗಳು, ದಾನಿಗಳು ಮುಂದೆ ಬಂದು ರಥ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದರು, ಪ್ರಸ್ತುತ ವರ್ಷದ ರಥೊತ್ಸವಕ್ಕೆ ನೂತನ ರಥ ಸಿದ್ಧಗೊಂಡಿದ್ದು, ಸಂಪ್ರೋಕ್ಷಣೆ ನಂತರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ, ರಥೋತ್ಸವ ನಡೆಸಲಾಯಿತು, ರಥೋತ್ಸವದ ವೇಳೆ ಶಿಲ್ಪಿ ರವಿ ಗುಡಿಗಾರ್ ಮತ್ತು ರಥದ ನಿರ್ಮಾಣಕ್ಕೆ ಸಹಾಯ ಮಾಡಿದವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಮಧುಗಿರಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ದತ್ತಾತ್ರೇಯ ಜೆ.ಗಾದಾ, ಪೌರಾಯುಕ್ತ ರುದ್ರೇಶ್, ಆರ್ ಐ ಸುದರ್ಶನ್, ನಗರಸಭಾ ಸದಸ್ಯ ಆರ್.ರಾಮು, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಎನ್.ಅಚ್ಚುತರಾವ್, ಅರ್ಚಕ ಸತ್ಯನಾರಾಯಣ ಶರ್ಮ, ಸುರೇಶ್ ಶಾಸ್ತ್ರಿ, ಜಯಕೃಷ್ಣ, ವೆಂಕಟರಂಗಪ್ಪ, ಮುರಳಿಧರ, ಡಿ.ಎಸ್.ದತ್ತಾತ್ರೇಯ, ಗುರುಪ್ರಸಾದ್, ಪ್ರಕಾಶ್ ಮುದ್ದುರಾಜ್, ರೂಪೇಶ್ ಕೃಷ್ಣಯ್ಯ, ಶಾರದ ಮಹಿಳಾ ಮಂಡಳಿ ಸದಸ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!