ಮಧುಗಿರಿ: ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಈ ಬಾರಿ ನಡೆಯುತ್ತಿರುವ ಜಿಲ್ಲಾ ಕಾಸಪ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸಿ ಎಂದು ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಬಿ .ಸಿ .ಶೈಲಾ ನಾಗರಾಜ್ ಅಜೀವ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.
ಕಸಾಪ ಸದಸ್ಯರುಗಳ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾಡು- ನುಡಿ ಸೇವೆ ಮಾಡಲು ನನ್ನನ್ನು ಬೆಂಬಲಿಸಿ, ಲೇಖಕಿಯರ ಸಂಘದ ಅಧ್ಯಕ್ಷರಾಗಿ ದಶಕಗಳ ಕಾಲ ಸಮರ್ಥವಾಗಿ ನಡೆಸಿದ್ದೇನೆ. ಸಾಹಿತ್ಯ ಚಟುವಟಿಕೆಯಲ್ಲಿ ನಿರಂತರವಾಗಿ ಇದ್ದೇನೆ ,ನಾನು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ,ಜನಮುಖಿ ಸಾಹಿತ್ಯ ಸಂಘಟನೆ ,ಕರ್ನಾಟಕ ರಾಜ್ಯ ಮಹಿಳಾ ಸಂಘಟನೆಗಳ ಒಕ್ಕೂಟ, ವಚನ ಸಾಹಿತ್ಯ ಸಂಘಟನೆ ,ಕರ್ನಾಟಕ ಸಾಹಿತ್ಯ ಅಕಾಡಮಿ, ಶೈನಾ ಅಧ್ಯಯನ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿರುವುದಾಗಿ ತಿಳಿಸಿದರು.
ರೈತ ಮುಖಂಡ ನಿರಕಲ್ಲ್ ರಾಮಕೃಷ್ಣಪ್ಪ ಮಾತನಾಡಿ ಶೈಲಾ ನಾಗರಾಜ್ ಅವರು ಕನ್ನಡದ ಕಾಳಾಳು ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಆಯ್ಕೆಯಾದರೆ ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಮೆರಗು ಬರುವುದರ ಜೊತೆಗೆ ರಾಜ್ಯಕ್ಕೊಂದು ಸಂದೇಶ ರವಾನೆಯಾಗಲಿದೆ, ಮುಂದಿನ ದಿನಗಳಲ್ಲಿ ತಾಲ್ಲೂಕು ಘಟಕಗಳ ರಚನೆ ವೇಳೆ “ಪ್ರಜಾಪ್ರಭುತ್ವಕ್ಕೆ’ ಬೆಲೆ ನೀಡಿ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಕಾರ್ಯದರ್ಶಿ ರಾಮಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ನಾ.ಮಹಾಲಿಂಗೇಶ್, ನಿವೃತ್ತ ಪ್ರಾಂಶುಪಾಲ ಟಿ. ಗೋವಿಂದರಾಜು, ರೈತ ಮುಖಂಡ ಚಂದ್ರಗೌಡ ,ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರವಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಟಿ. ರಂಗಧಾಮ, ನಿರ್ದೇಶಕ ರಕೀಬ್ ಸಾಬ್, ಲೇಖಕಿ ವಿಜಯಮೋಹನ್, ಕವಿಯತ್ರಿ ವೀಣಾ ಶ್ರೀನಿವಾಸ್, ಶಿಕ್ಷಕ ಶಿವಕುಮಾರ್, ಎಲ್ಐಸಿ ವೆಂಕಟೇಶ್ ಇತರರು ಇದ್ದರು.
ನಾಡು- ನುಡಿ ಸೇವೆ ಮಾಡಲು ಬೆಂಬಲಿಸಿ: ಡಾ.ಬಿ.ಸಿ. ಶೈಲಾ
Get real time updates directly on you device, subscribe now.
Prev Post
Next Post
Comments are closed.