ಛಾಯಾಗ್ರಾಹಕನಿಗೆ 3ನೇ ಕಣ್ಣಿರಲಿ: ಟಿ.ಕೆಂಪಣ್ಣ

24

Get real time updates directly on you device, subscribe now.


ತುಮಕೂರು: ಭಾವನೆಗಳನ್ನುಹುಟ್ಟಿಸುವ ಕಲಾತ್ಮಕ ಚಿತ್ರಗಳನ್ನು ಸೆರೆ ಹಿಡಿಯಲು ಛಾಯಾಗ್ರಾಹಕನಿಗೆ ಮೂರನೇ ಕಣ್ಣಿರಬೇಕು,ಆಗ ಮಾತ್ರ ಚಿತ್ರಗಳಿಗೆ ಜೀವ ಬರುವುದುಎಂದು ಬೆಂಗಳೂರಿನ ಹಿರಿಯ ಛಾಯಾಗ್ರಹಣ ಕಲಾವಿದ ಹಾಗೂ ಸಾಕ್ಷ್ಯ ಚಿತ್ರಕಾರ ಟಿ.ಕೆಂಪಣ್ಣ ಹೇಳಿದರು.
ತುಮಕೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ ಹಾಗೂ ಛಾಯಾಗ್ರಹಣ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಸೆರೆ ಹಿಡಿದ ಚಿತ್ರಗಳನ್ನು ಕಲಾತ್ಮಕ ಗೊಳಿಸುವುದೂ ಕೂಡ ಛಾಯಾ ಚಿತ್ರಕಾರನ ಜವಾಬ್ದಾರಿ, ಚಿತ್ರಕ್ಕೆ ಜೀವತುಂಬುವುದು ಬೆಳಕು, ವಿಷಯದ ಮೇಲೆ ಆಸಕ್ತಿ ಹಾಗೂ ಒಳಗೊಳ್ಳುವಿಕೆ ಮುಖ್ಯವಾಗಿರಬೇಕು, ಛಾಯಾಗ್ರಹಣವೆಂದರೆ ಬೆಳಕು, ಬೆಳಕು ಚಿತ್ರದ ಮಾಧ್ಯಮವಾಗಿರುತ್ತದೆ, ಹಾಗಾಗಿ, ಛಾಯಾಚಿತ್ರ ಸೆರೆ ಹಿಡಿಯಲು, ಸುಂದರವಾಗಿಸಲು ಬೆಳಕು ಬೇಕು ಎಂದು ತಿಳಿಸಿದರು.

ಪ್ರಕೃತಿಯ ಸೊಬಗನ್ನು ಅನುಭವಿಸುವವನು ಛಾಯಾ ಚಿತ್ರಕಾರನಾಗುತ್ತಾನೆ, ಕ್ಲಿಕ್ಕಿಸಿದ್ದೆಲ್ಲವೂ ಚಿತ್ರವಾಗುವುದಿಲ್ಲ, ಛಾಯಾಚಿತ್ರಗಳು ಐತಿಹಾಸಿಕ ಪುರಾವೆಗಳಾಗಿ ಉಳಿಯುತ್ತವೆ, ಛಾಯಾಚಿತ್ರ ಸತ್ಯವನ್ನು ಅನಾವರಣಗೊಳಿಸುವ, ವಾಸ್ತವತೆ ನಿರೂಪಿಸುವ ಮಾಧ್ಯಮವಾಗಿದೆ, ಬೌದ್ಧಿಕವಾಗಿ ಎಲ್ಲವೂ ಬದಲಾಗಬಹುದು, ಆದರೆ ಛಾಯಾಚಿತ್ರದಲ್ಲಿರುವುದು ಎಂದಿಗೂ ಬದಲಾಗದ ಸತ್ಯಎಂದರು.
ಬೆಂಗಳೂರಿನ ದಿ ಹಿಂದೂ ಪತ್ರಿಕೆಯ ಫೋಟೋ ಜರ್ನಲಿಸ್ಟ್ ಸುಧಾಕರ ಜೈನ್ ಹೊಸಬೆಟ್ಟು ಗುತ್ತು ಮಾತನಾಡಿ, ಫೋಟೋ ಜರ್ನಲಿಸ್ಟ್ ಇರುವುದನ್ನು ಸೆರೆ ಹಿಡಿದರೆ, ಛಾಯಾ ಚಿತ್ರಕಾರ ಕಣ್ಣು ಮುಚ್ಚಿದಾಗ, ಕಣ್ಣು ತೆರೆದಾಗ ಗ್ರಹಿಸುವ ಚಿತ್ರಗಳಿಗೆ ವಿಭಿನ್ನ ಕಲ್ಪನಾ ಆಯಾಮ ಕೊಟ್ಟು, ಭಾವದಿಂದ ಜೀವಕ್ಕೆ ಚಿತ್ರವನ್ನು ಇಳಿಸುತ್ತಾನೆ ಎಂದು ತಿಳಿಸಿದರು.

ಛಾಯಾಚಿತ್ರ ಪ್ರದರ್ಶನಕ್ಕೆ ಭೇಟಿ ನೀಡಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಜಿಲ್ಲಾವಾರು ಪ್ರಾಚೀನ ಸ್ಮಾರಕಗಳ ಛಾಯಾಚಿತ್ರಗಳನ್ನು ತೆಗೆಸಿ, ಸಂರಕ್ಷಿಸುವ ಕಾರ್ಯ ನಡೆಯಬೇಕಿದೆ, ಈ ನಿಟ್ಟಿನಲ್ಲಿ ತುಮಕೂರು ವಿವಿ ಜಿಲ್ಲೆಯಲ್ಲಿರುವ ಪ್ರಾಚೀನ ಸ್ಥಳಗಳ ಚಿತ್ರಗಳನ್ನು ಸೆರೆ ಹಿಡಿಸಿ ಅದರ ಮಹತ್ವ ತಿಳಿಸುವ ಗ್ಯಾಲರಿ ಆರಂಭಿಸುವ ಬಗ್ಗೆ ಚಿಂತಿಸಲಾಗುವುದು ಎಂದರು.
ಕೆಂಪಣ್ಣ ಅವರು ಸೆರೆ ಹಿಡಿದಿರುವ ಕದಂಬರ, ರಾಷ್ಟ್ರಕೂಟರ, ತಲಕಾಡಿನ ಗಂಗರ, ಬಾದಾಮಿ- ಕಲ್ಯಾಣ ಚಾಲುಕ್ಯರ, ಹೊಯ್ಸಳರ, ಚಿತ್ರದುರ್ಗದ ಪಾಳೆಯಗಾರರ ದೇವಾಲಯಗಳು, ಸ್ಮಾರಕಗಳು, ಶಿಲ್ಪ ಕಲೆಗಳನ್ನೊಳಗೊಂಡಿರುವ ಅನೇಕ ಛಾಯಾಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು.

ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳೊಂದಿಗೆ ಛಾಯಾಗ್ರಹಣ ಕುರಿತು ಸಂವಾದ ನಡೆಸಿ, ಛಾಯಾಗ್ರಹಣದ ತಾಂತ್ರಿಕ ವಿಷಯಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕಡಾ.ಕೆ.ವಿ, ಸಿಬಂತಿ ಪದ್ಮನಾಭ, ಉಪನ್ಯಾಸಕರಾದ ಡಾ.ಟಿ.ಪೃಥ್ವಿರಾಜ, ಎಸ್.ಎಸ್.ವಿನಯ್ ಕುಮಾರ್, ಎಂ.ಎಸ್.ಕೋಕಿಲ,ಬಿ.ಸಿ.ಹರೀಶ್ ಕುಮಾರ್, ತಾಂತ್ರಿಕ ಸಹಾಯಕ ಎಂ.ವಿ.ಅಭಿಷೇಕ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!