ಕುಣಿಗಲ್: ತಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಮನವಿ ಸಲ್ಲಿಸಲು ಆಗಮಿಸಿದ್ದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಶಾಖೆಯ ಪದಾಧಿಕಾರಿಗಳ ಮನವಿಗೆ ಪೂರಕವಾಗಿ ಜಿಲ್ಲಾಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಸಂಘದ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷೆ ವಿನೋದ ನೇತೃತ್ವದಲ್ಲಿ ಇತರೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗೆ ಆಗಮಿಸಿರುವ ವಿಷಯ ತಿಳಿದು ಮನವಿಯೊಂದಿಗೆ ತಾಲೂಕು ಕಚೇರಿ ಮುಂಭಾಗದ ಮೆಟ್ಟಿಲುಗಳ ಬಳಿ ಕಾದು ಕುಳಿತರು, ಸಭೆ ಮುಗಿಸಿ ಹೊರ ಬಂದ ಜಿಲ್ಲಾಧಿಕಾರಿಗಳ ಭೇಟಿಗೆ ಯತ್ನಿಸಿದರೂ ಅವರು ಪೂರಕವಾಗಿ ಸ್ಪಂದಿಸದೆ ತೆರಳಿದರು ಎಂದು ಬೇಸರ ವ್ಯಕ್ತಪಡಿಸಿದ ಕಾರ್ಯಕರ್ತರು ತಮ್ಮ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿ, ಆಶಾ ಕಾರ್ಯಕರ್ತರು ಇತರೆ ಸಿಬ್ಬಂದಿ ಜೊತೆಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸರ್ವೆ ಮಾಡಲು ಹೇಳಿದ್ದಾರೆ, ಆದರೆ ಕಾರ್ಯಕರ್ತೆಯರಿಗೆ ಮೊಬೈಲ್, ಮೊಬೈಲ್ ಗೆ ಡಾಟಾ ನೀಡದೆ ಕೆಲಸ ಹೇಗೆ ನಿರ್ವಹಿಸುವುದು, ಬಹುತೇಕರಿಗೆ ಮೊಬೈಲ್ ಸರ್ವೆ ಮಾಡಲು ಬರುವುದಿಲ್ಲ, ಇವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು, ಸರ್ವೇ ಕಾರ್ಯಕ್ಕೆ ಪ್ರೋತ್ಸಾಹ ಧನ ಹೆಚ್ಚಿಸಬೇಕು, ಮುಂದಿನ ದಿನಗಳಲ್ಲಿ ಪಲ್ಸ್ ಪೊಲಿಯೋ ಬರುತ್ತಿರುವುದರಿಂದ ಎರಡೂ ಕೆಲಸ ಮಾಡಬೇಕಾದ ಒತ್ತಡದಿಂದಾಗಿ ಪ್ರೋತ್ಸಾಹ ಧನ ಕೈತಪ್ಪಿ ಹೋಗದಂತೆ ನೋಡಿಕೊಳ್ಳಬೇಕು, ಕಾರ್ಯಕರ್ತೆಯರಿಗೆ ನೀಡಿರುವ 100- 120 ಮನೆ ಸರ್ವೇ ಕಾರ್ಯಕ್ಕಿಂತ ಹೆಚ್ಚಿನ ಮನೆಯ ಹೊರೆಯನ್ನು ನೀಡಬಾರದೆಂದು ಹೇಳಿದರು.
ಕಾರ್ಯಕರ್ತೆಯರಾದ ಭಾಗ್ಯಮ್ಮ, ಸೌಭಾಗ್ಯ, ಪುಷ್ಪ, ಗೀತಾ, ಶೃತಿ, ಜಯಮಾಲ, ಮರಿಚನ್ನಮ್ಮ, ಮಂಜುಳಾ, ನಾಗಮ್ಮ ಇತರರು ಇದ್ದರು.
Comments are closed.