ಸಮರ್ಪಕವಾಗಿ ಭೂ ದಾಖಲೆ ನಿರ್ವಹಿಸಿ: ಡೀಸಿ

14

Get real time updates directly on you device, subscribe now.


ಕುಣಿಗಲ್: ಭೂ ದಾಖಲೆಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಸಮರ್ಪಕ ನಿರ್ವಹಣೆ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವಂತೆ ತಹಶೀಲ್ದಾರ್ಗೆ ಸೂಚನೆ ನೀಡಿದರು.

ಮಂಗಳವಾರ ಬೆಳಗ್ಗೆ ಕಚೇರಿ ಆರಂಭದ ಸಮಯಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಯಲ್ಲಿ ಸಮರ್ಪಕ ಸ್ವಚ್ಛತೆ ಇಲ್ಲದೆ ಇರುವ ಬಗ್ಗೆ ತೀವ್ರ ಆಕ್ಷೇಪಡಿಸಿ ಡಿ ಗ್ರೂಪ್ ನೌಕರರಿಲ್ಲವೆ, ಸಮರ್ಪಕ ನೀರು ಇಲ್ಲವೆ ಎಂದು ಪ್ರಶ್ನಿಸಿ ಅಗತ್ಯ ಡಿ ಗ್ರೂಪ್ ನೌಕರರು, ಸಮರ್ಪಕ ನೀರಿನ ವ್ಯವಸ್ಥೆ ಎಲ್ಲಾ ಇದ್ದರೂ ಕಚೇರಿಯಲ್ಲಿ ಶುಚಿತ್ವ ಇಲ್ಲದೆ ಇರುವ ಬಗ್ಗೆ ತಹಶೀಲ್ದಾರ್ಗೆ ತರಾಟೆಗೆ ತೆಗೆದುಕೊಂಡರು.

ತಾಲೂಕು ಕಚೇರಿ ಬಹುತೇಕ ಸಿಬ್ಬಂದಿ ಸರ್ಕಾರಿ ನೌಕರರ ಸಮ್ಮೇಳನಕ್ಕೆ ತೆರಳಿದ್ದರು, ಸಿಬ್ಬಂದಿ ಹಾಜರಾತಿ ಬಗ್ಗೆ ನಿರ್ವಹಿಸಲಾಗಿರುವ ಇ-ಹಾಜರಾತಿ ಬಗ್ಗೆ ವಿಚಾರಿಸಿದರು, ಭೂ ದಾಖಲೆ ನಿರ್ವಹಿಸುವ ರೆಕಾರ್ಡ್ ರೂಂಗೆ ಭೇಟಿ ನೀಡಿದಾಗ ರೆಕಾರ್ಡ್ ರೂಂ ಸಿಬ್ಬಂದಿ ಇಲ್ಲದೆ ಬೀಗ ಹಾಕಲಾಗಿತ್ತು, ರೆಕಾರ್ಡ್ ರೂಂ ಬೀಗದ ಕೈ ಇಲ್ಲದೆ ಸಿಬ್ಬಂದಿ ಪರದಾಡಿದ್ದು ಕೊನೆಗೆ ಬೀಗ ಮುರಿದು ಬಾಗಿಲು ತೆರೆದರು, ರೆಕಾರ್ಡ್ ರೂಂ ನಲ್ಲಿ ದಾಖಲೆಗಳ ಅಮಸರ್ಪಕ ನಿರ್ವಹಣೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಸಂಸದರು, ಶಾಸಕರು ಜನತೆಗೆ ತ್ವರಿತ ಗತಿ ಸೇವೆ ನೀಡಲು ಭೂದಾಖಲೆಗಳ ಗಣಕೀರಣ ಮಾಡಲು ಅಗತ್ಯ ವ್ಯವಸ್ಥೆ ಮಾಡಲು ಸಿದ್ಧರಿದ್ದು, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ದಾಖಲೆ ಸಮರ್ಪಕ ನಿರ್ವಹಣೆ ಮಾಡಬೇಕು, ರೆಕಾರ್ಡ್ ರೂಂನ ಸಿಬ್ಬಂದಿ ಮೂರು ವರ್ಷಕ್ಕೊಮ್ಮೆ ಬದಲಾಗಬೇಕಿದ್ದು ಮೂರು ವರ್ಷಗಳಾಗಿದ್ದರೆ ಬದಲಾವಣೆಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಆಧಾರ್ ಕೇಂದ್ರದಲ್ಲಿ ಬರುವ ನಾಗರಿಕರಿಗೆ ತ್ವರಿತ ಸೇವೆ ನೀಡಬೇಕು, ಅನಗತ್ಯವಾಗಿ ನಾಗರಿಕರನ್ನು ಕಾಯಿಸಬಾರದೆಂದು ಸೂಚಿಸಿ, ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿ, ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಂಸದರು, ಜನಪ್ರತಿನಿಧಿಗಳು ಸಮಾವೇಶ ಹಮ್ಮಿಕೊಳ್ಳಲಿರುವ ಹಿನ್ನೆಲೆಯಲ್ಲಿ ಸಮಾವೇಶದ ಕಾರ್ಯಕ್ರಮದ ಸ್ಥಳವಾದ ಜಿಕೆಬಿಎಂಎಸ್ ಶಾಲಾ ಮೈದಾನದಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಜಿಪಂ ಸಿಇಒ ಪ್ರಭು, ಗ್ಯಾರಂಟಿ ಯೋಜನೆಗಳ ತಾಲೂಕು ಉಸ್ತುವಾರಿ ಅಧಿಕಾರಿ ವಿಶ್ವನಾಥ್, ಉಪ ವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ವಿಶ್ವನಾಥ್, ಸಿಪಿಐ ನವೀನ್ ಗೌಡ, ಪುರಸಭೆ ಮುಖ್ಯಾಧಿಕಾರಿ ಮಂಜುಳಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!