ಅರಿವು ಹೊಂದಿ ಕ್ಯಾನ್ಸರ್ ತಡೆಗೆ ಮುಂದಾಗಿ

10

Get real time updates directly on you device, subscribe now.


ತುಮಕೂರು: ಜಾಗತಿಕವಾಗಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿರುವ ಕ್ಯಾನ್ಸರ್ ಅನ್ನು ಮುಂಜಾಗ್ರತೆಯ ತಪಾಸಣೆ ಹಾಗೂ ಚಿಕಿತ್ಸೆಯಿಂದ ನಿವಾರಿಸಬಹುದು, ಆದರೆ ಜನರಲ್ಲಿ ಅರಿವಿನ ಕೊರತೆಯೇ ಕ್ಯಾನ್ಸರ್ ನಿಂದ ಸಾವಿನ ಪ್ರಕರಣ ಹೆಚ್ಚಾಗುತ್ತಿವೆ, ಈ ಬಗ್ಗೆ ಜನರಲ್ಲಿ ಅರಿವು ಮೂಡಬೇಕು ಎಂದು ಬೆಂಗಳೂರು ಯಶವಂತಪುರದ ಮಣಿಪಾಲ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ವೈದ್ಯರು ಹೇಳಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ತಜ್ಞ ವೈದ್ಯ ಡಾ.ಎ.ಸತೀಶ್ ಕುಮಾರ್, ಆರಂಭದ ಹಂತದಲ್ಲೇ ತಪಾಸಣೆ ಮಾಡಿಸಿಕೊಂಡರೆ ಮೊದಲ ಹಂತದ ಕ್ಯಾನ್ಸರ್ ಅನ್ನು ಗುಣಪಡಿಸಬಹುದು, ಲ್ಯುಕೇಮಿಯಾ, ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾದಂತಹ ರಕ್ತ ಮತ್ತು ಮೂಳೆ ಕ್ಯಾನ್ಸರ್ ತಮ್ಮ ಸೆಲ್ಯೂಲಾರ್ ಹೇಗೆ ಕೆಲಸ ಮಡುತ್ತವೆ ಎಂಬುದರ ಮೇಲೆ ವಿವಿಧ ಕ್ಯಾನ್ಸರ್ ಭಿನ್ನವಾಗಿರುತ್ತವೆ ಎಂದರು.

ಮಲ್ಟಿಮೋಡಲ್ ಚಿಕಿತ್ಸೆಯೊಂದಿಗೆ ಹೆಚ್ಚಿನ ರಕ್ತದ ಕ್ಯಾನ್ಸರ್ ಗುಣಪಡಿಸಬಹುದು, ಸಮಗ್ರ ರೀತಿಯಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸಾ ಸೌಲಭ್ಯವಿದೆ ಎಂದರು.
ಆಂಕೋಲಾಜಿಸ್ಟ್ ಡಾ.ರಹುಲ್ ಎಸ್.ಕನಕ ಮಾತನಾಡಿ, ಕ್ಯಾನ್ಸರ್ ರೋಗ ಲಕ್ಷಣಗಳು ಆರಂಭಿಕ ಹಂತದ ಪತ್ತೆ ಮತ್ತು ಅವುಗಳನ್ನು ಸಂಬಂಧಪಟ್ಟ ತಜ್ಞರಿಗೆ ವರದಿ ಮಾಡುವುದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರ್ಣಾಯಕವಾಗಿದೆ, ಆರಂಭಿಕ ಚಿಕಿತ್ಸೆಗಳು ಪಾಸಿಟಿವ್ ಫಲಿತಾಂಶಗಳ ಸಾಧ್ಯತೆ ಹೆಚ್ಚಿಸುತ್ತವೆ, ಮೂರು ವಾರಗಳಿಗೆ ಮೀರಿದ ಯಾವುದೇ ವಿವರಿಸಲಾಗದ ಅಸ್ಪಷ್ಟ ರೋಗ ಲಕ್ಷಣಗಳಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ಎಂದು ಹೇಳಿದರು.

ಹತ್ತು ಕೆಜಿ ಅಥವಾ ಅದಕ್ಕಿಂಥಾ ಹೆಚ್ಚಿನ ಹಠಾತ್ ಅಥವಾ ಉದ್ದೇಶಪೂರ್ವಕವಲ್ಲದ ತೂಕ ನಷ್ಟ, ಆಹಾರ ನುಂಗಲು ತೊಂದರೆ, ಹೊಟ್ಟೆ ಅಸ್ವಸ್ಥತೆ, ಅಜೀರ್ಣದಿಂದಾಗಿ ಹಸಿವಿನಲ್ಲಿ ಬದಲಾವಣೆ, ಮಲದಲ್ಲಿ ರಕ್ತದಂತಹ ಜೀರ್ಣಾಂಗ ವ್ಯೂಹದ ಲಕ್ಷಣಗಳು, ವಾಸಿಯಾಗದೇ ಇರುವ ಹುಣ್ಣು ಮುಂತಾದವು ಕ್ಯಾನ್ಸರ್ ಲಕ್ಷಣಗಳು ಎಂದರು.

ಮತ್ತೊಬ್ಬ ತಜ್ಞ ವೈದ್ಯ ಡಾ.ವಿನಯ್ ಮುನಿಕೋಟಿ ವೆಂಕಟೇಶ್ ಅವರು ಮಣಿಪಾಲ್ ಆಸ್ಪತ್ರೆಯ ಬಿಎಂಟಿ ಘಟಕದಲ್ಲಿನ ಸೌಲಭ್ಯಗಳ ಬಗ್ಗೆ ಮಾತನಾಡಿ, ಆಫ್ ಮ್ಯಾಚ್ ಆಗಿರುವ ಅಲೋಜೆನಿಕ್ ಸ್ಟೆಮ್ ಸೆಲ್ ಟ್ರಾನ್ಸಪಾಂಟೇಶನ್ ಸೇರಿದಂತೆ ಎಲ್ಲಾ ರೀತಿಯ ಸ್ಟೆಮ್ ಸೆಲ್ ಟ್ರಾನ್ಸ್ಪಟೇಶನ್ ಮಾಡಲಾಗುತ್ತದೆ, ಬೋನ್ ಮ್ಯಾರೋ ಟ್ರಾನ್ಟ್ಪಾಟೇಶನ್ಗೆ ಒಳಗಾಗುವ ರೋಗಿಗಳಿಗೆ ಉತ್ತಮ ಅರೈಕೆ ಮಾಡಲಾಗುತ್ತದೆ. ಇದರ ಜೊತೆಗೆ ಅತ್ಯಾಧುನಿಕ ಸೌಲಭ್ಯ, ಸುಧಾರಿತ ತಂತ್ರಜ್ಞಾನಗಳನ್ನು ಆಸ್ಪತ್ರೆ ಹೊಂದಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!