ಸಿದ್ಧಾರ್ಥ ಸಂಪದ ವಿಶೇಷ ಸಂಚಿಕೆ ಬಿಡುಗಡೆ

20

Get real time updates directly on you device, subscribe now.


ತುಮಕೂರು: ನಗರದ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಮಾಧ್ಯಮದಲ್ಲಿ ಉದ್ಯೋಗಾವಕಾಶಗಳು ಹಾಗೂ ಇತ್ತೀಚಿನ ಪ್ರವೃತ್ತಿಗಳ ಕುರಿತು ಒಂದು ದಿನ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ಹಾಸನದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾಗಿರುವ ಮಂಜುಳಾ.ಸಿ.ಎಸ್. ಒಂದು ದಿನದ ಉಪನ್ಯಾಸದಲ್ಲಿ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿರುವ ಹಲವಾರು ಉದ್ಯೋಗಾವಕಾಶಗಳು ಮತ್ತು ಅದಕ್ಕೆ ಅಗತ್ಯವಿರುವ ಕೌಶಲ್ಯ ತಂತ್ರಗಳು ಕುರಿತು ಹಂತ ಹಂತವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.

ಮಾಧ್ಯಮದಲ್ಲಿ ಕ್ಷೇತ್ರದಲ್ಲಿ ಹೊಸದಾಗಿ ಅಳವಡಿಸಿಕೊಂಡಿರುವ ತಂತ್ರಜ್ಞಾನದ ಪ್ರವೃತ್ತಿಗಳು, ಜೊತೆಗೆ ಅವುಗಳನ್ನು ಹೇಗೆ ಪ್ರಚುರ ಪಡಿಸುತ್ತವೆ, ಎಐ ತಂತ್ರಜ್ಞಾನ, ವರ್ಚುಲ್ ರಿಯಾಲಿಟಿ ಮತ್ತು ಬೇರೆ ದೇಶಗಳಲ್ಲಿ ಮಾಧ್ಯಮಗಳು ಅಳವಡಿಸಿ ಕೊಳ್ಳುತ್ತಿರುವ ಇತ್ತೀಚಿನ ಪ್ರವೃತ್ತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು. ಹಾಗೆಯೇ ರೇಡಿಯೋ, ಮುದ್ರಣ, ಟೆಲಿವಿಷನ್ ಮತ್ತು ನವ ಮಾಧ್ಯಮಗಳ ಜೊತೆಗೆ ಪ್ರಾಧ್ಯಾಪಕ ವೃತ್ತಿ ಒಳಗೊಂಡಂತೆ ಅನೇಕ ಅವಕಾಶಗಳ ಕುರಿತಾಗಿ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿರುವ ಉದ್ಯೋಗಾವಕಾಶಗಳು ಹಾಗೂ ಇತ್ತೀಚಿನ ಪ್ರವೃತ್ತಿಗಳ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಸಿದ್ಧಪಡಿಸಿ ಹೊರ ತಂದಿರುವ ಸಿದ್ಧಾರ್ಥ ಸಂಪದ ವಿಶೇಷ ಸಂಚಿಕೆ ಬಿಡುಗಡೆ ಗೊಳಿಸಿದರು, ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಜ್ಯೋತಿ.ಸಿ, ಶ್ವೇತಾ.ಎಂ.ಪಿ, ಡಾ.ನಾಗೇಂದ್ರ, ಶಿವಕುಮಾರ್, ನವೀನ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!