ಕುಣಿಗಲ್: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದನ್ನು ಖಂಡಿಸಿದ ತಾಲೂಕು ಬಿಜೆಪಿ ಪದಾಧಿಕಾರಿಗಳು ತಪ್ಪಿತಸ್ಥರನ್ನು ಬಂಧಿಸಿ, ದೇಶ ವಿರೋಧಿಗಳಿಗೆ ಕುಮ್ಮಕ್ಕು ನೀಡಿರುವ ರಾಜಸಭೆಗೆ ರಾಜ್ಯದಿಂದ ಆಯ್ಕೆಯಾಗಿರುವ ನಾಸೀರ್ ಹುಸೇನ್ ಸದಸ್ಯತ್ವ ರದ್ದು ಪಡಿಸುವಂತೆ ರಾಜ್ಯಪಾಲರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಬುಧವಾರ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜ್ ನೇತೃತ್ವದಲ್ಲಿ ಘಟನೆಗೆ ಖಂಡನೆ ವ್ಯಕ್ತಪಡಿಸಿದ ಬಿಜೆಪಿ ವಿವಿಧ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಗ್ರೇಡ್-2 ತಹಶೀಲ್ದಾರ್ ಯೋಗೇಶ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿದ ನಂತರ ಮಾತನಾಡಿದ ದೇವರಾಜ್, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಧೋರಣೆಗಳೆ ದೇಶ ವಿರೋಧಿಯಾಗಿವೆ, ಒಬ್ಬ ಲೋಕಸಭೆ ಸಂಸದರು ದೇಶ ವಿಭಜನೆ ಮಾತನಾಡಿದರೆ, ಇನ್ನೊಬ್ಬ ರಾಜ್ಯಸಭೆ ಸಂಸದರ ಬೆಂಬಲಿಗರು ವಿಧಾನ ಸೌಧದಲ್ಲೆ ಪಾಕ್ ಪರ ಘೋಷಣೆ ಕೂಗುತ್ತಿದ್ದಾರೆ, ಇದರಿಂದ ಇವರು ಜನತೆಗೆ ಯಾವ ಸಂದೇಶ ನೀಡುತ್ತಿದ್ದಾರೆ ಎಂಬುದು ಅರಿಯಬೇಕಿದೆ, ವಿಧಾನ ಸೌಧದಲ್ಲೆ ದೇಶ ವಿರೋಧಿ ಘೋಷಣೆ ಕೂಗಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು, ಕಾಂಗ್ರೆಸ್ ಸರ್ಕಾರ ವಿಷಯವನ್ನು ರಾಜಕೀಯಗೊಳಿಸದೆ ದೇಶದ ಅಖಂಡತೆ ನಿಟ್ಟಿನಲ್ಲಿ ಇಂತಹ ದ್ರೋಹಿಗಳನ್ನು ಚಿವುಟಿ ಹಾಕಬೇಕು, ಇಂದು ದೇಶ ದ್ರೋಹದ ಕೃತ್ಯ ಎಸಗಿದವರು ವಿಧಾನ ಸೌಧದೊಳಗೆ ಪ್ರವೇಶಿಸಿ ಘೋಷಣೆ ಕೂಗಿದವರು ನಾಳೆ ಯಾವ ಕೃತ್ಯ ಎಸಗಲು ಹಿಂಜರಿಯಲಾರರು ಎಂಬುದನ್ನು ಸರ್ಕಾರ ಅರಿಯಬೇಕು ಎಂದರು.
ಎಸ್ಸಿ ಮೋರ್ಚಾದ ಅಧ್ಯಕ್ಷ ಶಿವರಾಮ್, ಬಿಸಿಎಂ ಮೊರ್ಚಾದ ಅಧ್ಯಕ್ಷ ಸುರೇಶ್, ಪ್ರಮುಖರಾದ ರೇಣುಕಪ್ಪ, ಲೋಕೇಶ್, ದೀಪಕ್, ಜಿಮ್ ಕುಮಾರ ಇತರರು ಇದ್ದರು.
Comments are closed.