ರೇಡಿಯೋ ಕಾರ್ಯಕ್ರಮ ನಿರ್ಮಾಣದ ಕಾರ್ಯಗಾರ

31

Get real time updates directly on you device, subscribe now.


ತುಮಕೂರು: ನಗರದ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ರೇಡಿಯೋ ಕಾರ್ಯಕ್ರಮಗಳ ನಿರ್ಮಾಣದ ಕುರಿತು ಎರಡು ದಿನಗಳ ಕಾರ್ಯಗಾರವನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿತ್ತು.
ಕಾರ್ಯಾಗಾರಕ್ಕೆ ಬೆಂಗಳೂರಿನ ಆಕಾಶವಾಣಿಯ ಹಿರಿಯ ಉದ್ಘೋಷಕರಾದ ಬಿ.ಕೆ.ಸುಮತಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಎರಡು ದಿನಗಳ ಕಾರ್ಯಾಗಾರದಲ್ಲಿ ರೇಡಿಯೋಗಳ ಅಳಿವು ಉಳಿವು ಜೊತೆಗೆ ಪತ್ರಿಕೋದ್ಯಮದ ಪ್ರಸ್ತುತ ಸ್ಥಿತಿಗತಿ ಕುರಿತು ತಿಳಿಸಿದರು.

ರೇಡಿಯೋ ಕೌಶಲ್ಯ ವೃದ್ಧಿ ಪಡಿಸಿಕೊಳ್ಳುವಂತಹ ತಂತ್ರಗಳ ಬಗ್ಗೆ ಮತ್ತು ರೇಡಿಯೋ ಕಾರ್ಯಕ್ರಮಗಳ ವಿಧಗಳು, ಜೊತೆಗೆ ರೇಡಿಯೋ ಕಾರ್ಯಕ್ರಮಗಳ ಪ್ರಸ್ತುತ ಪಡಿಸುವಾಗ ಮುಖ್ಯವಾಗಿ ಬೇಕಾಗಿರುವ ಧ್ವನಿಯ ಏರಿಳಿತಗಳ ಬಗ್ಗೆ, ರೇಡಿಯೋ ಹುಟ್ಟು ಬೆಳವಣಿಗೆ ಬಗೆಗೆ ಹಾಗೂ ಖಾಸಗಿ ರೇಡಿಯೋ, ಸರ್ಕಾರಿ ರೇಡಿಯೋಗಳ ಕಾರ್ಯಕ್ರಮಗಳ ವ್ಯತ್ಯಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ವಿವರಿಸಿದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲೇ ತಮ್ಮಲ್ಲಿರುವಂತಹ ಕೌಶಲ್ಯ ವೃದ್ಧಿಸಿಕೊಳ್ಳಬೇಕು ಹಾಗೂ ಪತ್ರಿಕೋದ್ಯಮ ಕ್ಷೇತ್ರವು ಎಲ್ಲಾ ವಿಷಯಗಳಿಗಿಂತ ವಿಶೇಷವಾಗಿದ್ದು, ಎಲ್ಲಾ ರೀತಿಯ ಅಂಶಗಳನ್ನು ಒಳಗೊಂಡಿದೆ ತಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಹೆಚ್ಚು ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಪತ್ರಿಕೋದ್ಯಮ ಕ್ಷೇತ್ರವು ಸೃಜನಶೀಲವಾದ ಮಾಧ್ಯಮ, ಕೇಳುಗರ ಆಸಕ್ತಿಯ ಮೇರೆಗೆ ಉತ್ತಮ ಗುಣಮಟ್ಟದ ಪರಿಕಲ್ಪನೆಗಳ ಮೂಲಕ ಕಾರ್ಯಕ್ರಮ ನೀಡಿದಾಗ ಎಂದಿಗೂ ರೇಡಿಯೋ ಅದರ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ, ಇಂದಿನ ಜಗತ್ತು ಗುಣಮಟ್ಟವಾದ ವಿಷಯಗಳನ್ನು ನಿರೀಕ್ಷಿಸುತ್ತದೆ, ಅಂತಹ ವಿಷಯಗಳ ಕುರಿತಾಗಿ ರೇಡಿಯೋ ಕಾರ್ಯಕ್ರಮ ನೀಡಿದಾಗ ಜನರು ಕೂಡ ಕೇಳಿಸಿಕೊಳ್ಳುತ್ತಾರೆ, ಹಾಗಾಗಿ ರೇಡಿಯೋ ಕಾಲಕ್ಕೆ ತಕ್ಕಂತೆ ಅದರ ರೂಪ ಬದಲಾಗಿಸಿ ಕೊಳ್ಳುತ್ತದೆಯೇ ವಿನಹ ಅದು ತನ್ನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ ಎಂದರು.

ಕಾರ್ಯಗಾರದಲ್ಲಿ ವಿದ್ಯಾರ್ಥಿಗಳನ್ನು ಮೂರು ತಂಡಗಳಾಗಿ ವಿಭಾಗಿಸಿ ಒಂದೊಂದು ತಂಡಕ್ಕೂ ರೇಡಿಯೋ ಕಾರ್ಯಕ್ರಮಗಳ ಪರಿಕಲ್ಪನೆ ಹಾಗೂ ಪ್ರತಿ ಬರವಣಿಗೆಯನ್ನು ವಿದ್ಯಾರ್ಥಿಗಳಿಂದಲೇ ಸಿದ್ಧಪಡಿಸಿ ರೇಡಿಯೋದಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಸಹಾಯಕ ಪ್ರಾಧ್ಯಾಪಕಿ ಜ್ಯೋತಿ.ಸಿ, ಶ್ವೇತಾ.ಎಂ.ಪಿ, ಶರತ್ ಜೈರಾಮ್ ಹಾಗೂ ವಿದ್ಯಾರ್ಥಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!