ಗ್ರಾಹಕರೇ.. ಔಷಧ ಕಂಪೆನಿಗಳ ಬಗ್ಗೆ ಎಚ್ಚರ

23

Get real time updates directly on you device, subscribe now.


ತುಮಕೂರು: ದೇಹದಲ್ಲಿ ಇನ್ನಷ್ಟು ಹೊಸ ಸಮಸ್ಯೆ ಹುಟ್ಟಿಕೊಳ್ಳುವಂತಹ ಲಸಿಕೆಗಳನ್ನು ಔಷಧ ಕಂಪೆನಿಗಳು ನೀಡುತ್ತಿರುವುದು ಆತಂಕಕಾರಿ ಎಂದು ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಲ್.ಗೋಮತಿದೇವಿ ವಿಷಾದ ವ್ಯಕ್ತಪಡಿಸಿದರು.

ತುಮಕೂರು ವಿವಿ ಸಾವಯವ ರಸಾಯನ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ ಸೋಮವಾರ ಆಯೋಜಿಸಿದ್ದ ರಾಸಾಯನಿಕ ವಿಜ್ಞಾನದಲ್ಲಿ ಹೊಸ ಸಾಧ್ಯತೆಗಳು ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿ, ತಂಪು ಪಾನಿಯಗಳಲ್ಲಿ ಕೀಟ ನಾಶಕಗಳ ಅಂಶ ಪಿಪಿಎಂ ನಲ್ಲಿ ಕಂಡು ಬರುತ್ತಿದೆ, ಒಂದು ಲೋಟ ತಂಪು ಪಾನಿಯದಲ್ಲಿ 8 ಚಮಚದಷ್ಟು ಆರೋಗ್ಯಕ್ಕೆ ಹಾನಿಯುಂಟಾಗುವ ಸಕ್ಕರೆ ಅಂಶವಿದೆ, ಇದನ್ನು ಸೇವಿಸುವವರು, ಮುಖ್ಯವಾಗಿ ಮಕ್ಕಳಲ್ಲಿ ಹಾರ್ಮೋನ್ ಸಮಸ್ಯೆಯುಂಟಾಗಿ, ದೇಹದ ತೂಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

1980ರಲ್ಲಿ ಜಪಾನ್ ದೇಶದ ಫುಜಿಶಿಮಾ ಮತ್ತು ಹೋಂಡಾ ವಿಜ್ಞಾನಿಗಳು ಸೇರಿ ಜಲಜನಕ ಹೈಡ್ರೋಜನ್ ಅನ್ನು ಆಮ್ಲಜನಕದಿಂದ ವಿಭಜಿಸಿ ಹೈಡ್ರೋ ಇಂಧನ ತಯಾರಿಸಲು ಮುಂದಾಗಿದ್ದರು, ಪ್ರಯೋಗಾಲಯದಲ್ಲಿಯೇ ಈ ಸಂಶೋಧನೆ ಕೊನೆಗಂಡಿತು, ಸಮಾಜಕ್ಕೆ ಪ್ರಯೋಜನವಾಗುವಂತಹ ಪ್ರಯೋಗಗಳನ್ನು ಪ್ರಯೋಗಾಲಯದ ಬಾಗಿಲಿನಿಂದ ದಾಟಿಸಿ, ದೊಡ್ಡ ಮಟ್ಟದಲ್ಲಿ ಯಾವುದಾದರೂ ಸಂಸ್ಥೆಯೊಂದಿಗೆ ಅದನ್ನು ಕಾರ್ಯ ರೂಪಕ್ಕೆ ತರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಕೊರೊನಾ ವೈರಸ್ ವಿರುದ್ಧ ಲಸಿಕೆ ಕಂಡು ಹಿಡಿಯಲು ರಸಾಯನ ಶಾಸ್ತ್ರವೇ ಕಾರಣ, ಸಂಶೋಧನೆಗಳಿಂದ ಮಾತ್ರ ಬದಲಾವಣೆ ಸಾಧ್ಯ, ಐನ್ಸ್ಟೈನ್ ಹೇಳುವಂತೆ ಉತ್ತರಕ್ಕಿಂತ ಪ್ರಶ್ನೆ ಮುಖ್ಯ, ಪರಿಹಾರಕ್ಕಿಂತ ಸಮಸ್ಯೆ ಮುಖ್ಯ, ಆಗ ಸಂಶೋಧನೆಗಳು ಯಾವ ದಿಕ್ಕಿನಲ್ಲಿ ಸಾಗಬೇಕೆಂದು ನಮಗೆ ತಿಳಿಯುತ್ತದೆ ಎಂದರು.
ರಾಯಲ್ ಸೊಸೈಟಿಆಫ್ ಕೆಮಿಸ್ಟ್ರಿ ಸಂಸ್ಥೆಯು ರಾಸಾಯನಿಕ ವಿಜ್ಞಾನದ ಬಹು ಹಂತದ ಲಕ್ಷಣಗಳ ಹಾಗೂ ರಾಸಾಯನಿಕದಲ್ಲಿ ಆಧುನಿಕ ಯುಗವು ಒಳಗಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುತ್ತಿದೆ, ರಸಾಯನಶಾಸ್ತ್ರದ ಹಲವು ಮಾದರಿಗಳನ್ನು ಬದಲಾಯಿಸಿ, ತಂತ್ರಜ್ಞಾನ ಆಧಾರಿತ ಮಾದರಿಗಳನ್ನು ತರಲು ಮುಂದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕ ಡಾ.ಡಿ.ಸುರೇಶ್, ವಿಜ್ಞಾನ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಶ್ರೀನಿವಾಸ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!