ಗುಬ್ಬಿ: ಕೇಂದ್ರ ಸರ್ಕಾರ ನಾಡ ಕಚೇರಿಯ ಸೇವೆಗಳ ಡಿಜಿಟಲ್ ಡೆಲಿವರಿ ಕುರಿತು ಅಧ್ಯಯನ ನಡೆಸಲು ಕಪಿಲ್ ಕುಮಾರ್ ಮತ್ತು ಸುದೀಪ್ ದತ್ ನಾಮ ನಿರ್ದೇಶನ ಮಾಡಿದ ಹಿನ್ನೆಲೆ ಗುಬ್ಬಿ ತಾಲೂಕಿಗೆ ಆಗಮಿಸಿದ ತಂಡವು ನಿಟ್ಟೂರು ನಾಡ ಕಚೇರಿಗೆ ಭೇಟಿ ನೀಡಿ ಡಿಜಿಟಲೀಕರಣ ಕುರಿತು ರೈತರೊಂದಿಗೆ ಚರ್ಚಿಸಲಾಯಿತು.
ಕೇಂದ್ರ ಸರ್ಕಾರ ಪ್ರತಿಯೊಂದನ್ನೂ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಬೇಕಾದ ದಾಖಲೆಗಳನ್ನು ಪಡೆಯಲು ಡಿಜಿಟಲೀಕರಣ ಮಾಡಿದ್ದು, ಅದರಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದ ಹಿನ್ನೆಲೆ ಸೆಂಟರ್ ಫಾರ್ ಇ ಗವರ್ನೆನ್ಸ್ ದೆಹಲಿ ತಂಡವು ಗುಬ್ಬಿ ತಾಲೂಕಿಗೆ ಭೇಟಿ ತಾಲೂಕಿನ ನಿಟ್ಟೂರು ನಾಡ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ತಂಡವನ್ನು ಸ್ವಾಗತಿಸಿದ ತಹಶೀಲ್ದಾರ್ ಆರತಿ.ಬಿ. ನಾಡ ಕಚೇರಿಯ ನ್ಯೂನತೆಯನ್ನು ವಿವರಣೆ ನೀಡಿ ಡಿಜಿಟಲೀಕರಣ ದಿಂದ ಉತ್ತಮ ಕೆಲಸವಾಗುತ್ತ ಇದ್ದು, ಕೆಲವು ವೇಳೆ ಕೈ ಪಾಣಿ, ಹಳೆಯ ಪತ್ರ ತೆಗೆದುಕೊಳ್ಳಲು ತಾಲೂಕು ಕಚೇರಿ, ನಾಡ ಕಚೇರಿಗೆ ರೈತರು ಬರಬೇಕಾಗುತ್ತದೆ ಎಂದು ವಿವರಣೆ ನೀಡಿದರು.
ಮ್ಯಾನುಯಲ್ ನಲ್ಲಿ ದಾಖಲೆಗಳನ್ನು ಪಡೆಯಲು ನಾಡ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಡಿಜಿಟಲೀಕರಣ ಮೂಲಕ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟರು ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದೀರಿ ಎಂದು ರೈತರನ್ನು ಪ್ರಶ್ನಿಸಿದ ವೇಳೆ ರೈತರು ಎಲ್ಲವನ್ನೂ ಆನ್ಲೈನ್ ನಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಹಾಗಾಗಿ ಕಚೇರಿಗೆ ಅರ್ಜಿ ಸಲ್ಲಿಸಲು ಬಂದಿದ್ದೇನೆ, ಸಕಾಲದಲ್ಲಿ ಸಮಯ ಹಿಡಿಯುತ್ತದೆ, ಕೆಲವು ವೇಳೆ ಸರ್ವರ್ ಸಮಸ್ಯೆಯಾಗಿ ದಾಖಲೆಗಳು ಬೇಗ ಸಿಗುವುದಿಲ್ಲ ಎಂದು ತಂಡಕ್ಕೆ ಮನವರಿಕೆ ಮಾಡಿಕೊಡಲಾಯಿತು.
ಕರ್ನಾಟಕದಲ್ಲಿ ನಾಡ ಕಚೇರಿಯ ಡಿಜಿಟಲಿಕರಣದಲ್ಲಿ ಎರಡನೇ ಸ್ಥಾನ ಇರುವ ಕಾರಣ ಕೇಂದ್ರ ಸರ್ಕಾರವು ಕಪಿಲ್ ಕುಮಾರ್ ನೇತೃತ್ವದ ತಂಡವನ್ನು ರಾಜ್ಯಕ್ಕೆ ಕಳುಹಿಸಿ ನಾಡ ಕಚೇರಿಗಳಲ್ಲಿ ಯಾವ ರೀತಿಯಲ್ಲಿ ಡಿಜಿಟಲ್ ಮೂಲಕ ಕರ್ತವ್ಯ ನಿರ್ವಹಣೆ ಮಾಡುತ್ತಾ ಇದೆ ಎಂಬುದನ್ನು ಅಧ್ಯಯನ ನಡೆಸಲು ಬಂದಿದ್ದು, ಅದರಂತೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ನಾಡ ಕಚೇರಿಯು ನಾಮ ನಿರ್ದೇಶನ ಹೊಂದುವ ಜೊತೆಗೆ ರಾಜ್ಯದಲ್ಲೇ ಎರಡನೇ ಜಿಲ್ಲೆ ತುಮಕೂರು ಜಿಲ್ಲೆ ಎಂಬುದು ಹೆಮ್ಮೆಯ ಸಂಗತಿ, ಇತ್ತೀಚಿನ ದಿನಗಳಲ್ಲಿ ಎಲ್ಲವೂ ಮೊಬೈಲ್ ಮೂಲಕ ಆನ್ಲೈನ್ ಮೂಲಕ ಮನೆಯಲ್ಲಿಯೇ ಕುಳಿತು ಅರ್ಜಿ ಹಾಕುವುದಾಗಲಿ, ದಾಖಲೆಗಳನ್ನು ಪಡೆಯಲು ಸಾಧ್ಯವಾಗಿದ್ದು, ಕೆಲವು ಸಂದರ್ಭಗಳಲ್ಲಿ ಸರ್ವರ್ ದೋಷವಿದ್ದ ಸಂದರ್ಭದಲ್ಲಿ ಮ್ಯಾನ್ಯುಲ್ ಮೂಲಕವೇ ಅರ್ಜಿ ಸಲ್ಲಿಸಲು ಅನಿವಾರ್ಯವಾಗಿ ಹೋಗಬೇಕಾಗುತ್ತದೆ ಎಂಬುದನ್ನು ತಂಡಕ್ಕೆ ಮನವರಿಕೆ ಮಾಡಿಕೊಡಲಾಯಿತು.
ತಾಲೂಕಿನಲ್ಲಿ ಬಹುತೇಕವಾಗಿ ನಾಡ ಕಚೇರಿಗಳಲ್ಲಿ ರೈತರು ಆಗಮಿಸುವುದು ವಿರಳ, ಎಲ್ಲವೂ ಡಿಜಿಟಲೀಕರಣ ಆಗಿರುವ ಕಾರಣ ವಿದ್ಯಾವಂತರು ತಮ್ಮ ಮನೆಯಲ್ಲಿಯೇ ಮೊಬೈಲ್ ಬಳಕೆ ಮಾಡಿ ಅರ್ಜಿಗಳನ್ನು ಹಾಕುವುದು, ದಾಖಲೆಗಳನ್ನು ಪಡೆಯುವುದರಿಂದ ಕಚೇರಿಗಳಿಗೆ ಬರುವ ಸಂಖ್ಯೆ ವಿರಳವಾಗಿದ್ದು, ಇದರ ಜೊತೆಗೆ ಜಿಲ್ಲಾ ಕೇಂದ್ರವು ಹತ್ತಿರದಲ್ಲೇ ಇರುವುದರಿಂದ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ, ಸಮಸ್ಯೆ ಏನಾದರೂ ಕಂಡುಬಂದರೆ ನಾಡ ಕಚೇರಿಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಕಂದಾಯ ನಿರೀಕ್ಷಕರು, ತಾಲೂಕು ಕಚೇರಿಯಲ್ಲಿ ನನ್ನ ಬಳಿ ಬಂದ ಸಂದರ್ಭದಲ್ಲಿ ಅಲ್ಲಿಯೇ ಸಮಸ್ಯೆ ನಿವಾರಣೆ ಮಾಡಿ ಕಳುಹಿಸಿ ಕೊಡಲಾಗುತ್ತಿದೆ ಎಂದು ಸೆಂಟರ್ ಫಾರ್ ಇ ಗವರ್ನೆನ್ಸ್ ತಂಡಕ್ಕೆ ತಹಶೀಲ್ದಾರ್ ಆರತಿ.ಬಿ. ವಿವರಣೆ ನೀಡಿದರು.
ನಿಟ್ಟೂರು ನಾಡ ಕಚೇರಿ ಬಳಿಕ ತಾಲೂಕು ಕಚೇರಿಗೆ ಆಗಮಿಸಿದ ತಂಡವು ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಕಚೇರಿ ಭೇಟಿ ನೀಡಿ ಸಿಬ್ಬಂದಿಯ ಮಾಹಿತಿ ಪಡೆದರು.
ಒಟ್ಟಾರೆ ದೆಹಲಿಯಿಂದ ಆಗಮಿಸಿದ್ದ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಕಚೇರಿಯು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಕಾರಣ ರಾಜ್ಯದಲ್ಲೇ ತುಮಕೂರು ಜಿಲ್ಲೆ ಎರಡನೇ ಸ್ಥಾನ ಪಡೆಯಲು ಸಾಧ್ಯವಾಗಿದೆ, ಇದೇ ರೀತಿ ಇನ್ನಷ್ಟು ಸರಳೀಕರಣ ಮಾಡಿ ರೈತಾಪಿ ವರ್ಗ, ಸಾರ್ವಜನಿಕರು ಡಿಜಿಟಲ್ ಮೂಲಕ ಬಳಕೆ ಮಾಡಲು ಅರಿವು ಮೂಡಿಸಿ ಪ್ರಥಮ ಸ್ಥಾನ ಪಡೆಯುವಂತೆ ಶುಭ ಕೋರಿತು ತಂಡ.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಪ್ರಶಾಂತ್, ಕಂದಾಯ ನಿರೀಕ್ಷಕ ಮೋಹನ್, ಕುಮಾರ್ ಹಾಗೂ ಆಡಳಿತಾಧಿಕಾರಿಗಳು ಇದ್ದರು.
Comments are closed.