ಸಾವಿತ್ರಿ ಬಾಯಿ ಪುಲೆ ಮಾಡಿದ ಕಾರ್ಯ ಶ್ಲಾಘನೀಯ

215

Get real time updates directly on you device, subscribe now.

ನಿಟ್ಟೂರು: ಪ್ರತಿಯೊಂದು ಹೆಣ್ಣು ಮಕ್ಕಳ ಕಲಿಕೆಗೆ ಪೂರಕ ಅವಕಾಶ ನೀಡಿದ ಸಾವಿತ್ರಿ ಬಾಯಿ ಪುಲೆ ಅವರ ಹೆಸರಿನಲ್ಲಿ ಸಾಮಾಜಿಕ ಶೈಕ್ಷಣಿಕ ಕೆಲಸ ಮಾಡಲು ನಮ್ಮ ಸಂಘವು ಸಿದ್ಧವಾಗಿದೆ ಎಂದು ಜಿಲ್ಲಾ ಕರ್ನಾಟಕ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಅನುಸೂಯದೇವಿ ತಿಳಿಸಿದರು.
ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಮಾತನಾಡಿ, ಮಹಿಳಾ ಸ್ಥಾನಮಾನ, ಸಮಾನತೆ ಉದ್ಯೋಗದಲ್ಲಿ ಅವಕಾಶ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕವರ ಪಾಲಿಗೆ ಆಶಾಕಿರಣವಾಗಿ ನಮ್ಮ ಸಂಘ ಕೆಲಸ ಮಾಡಬೇಕಾಗಿದ್ದು, ಈಗಾಗಲೇ ರಾಜ್ಯಮಟ್ಟದಲ್ಲಿ ಹಲವು ರೀತಿಯಲ್ಲಿ ಯೋಜನೆ ಮಾಡಿರುವ ಸಂಘವು ಪ್ರತಿ ತಾಲೂಕಿನಲ್ಲಿ ಹೆಣ್ಣಿನ ಶೋಷಣೆಯ ವಿರುದ್ಧ ಕೆಲಸ ಮಾಡಲು ಬದ್ಧವಾಗಿದೆ ಎಂದು ತಿಳಿಸಿದರು.
ಗುಬ್ಬಿ ತಾಲೂಕು ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ ಹೆಣ್ಣಿಗೆ ಇಂದು ಶಿಕ್ಷಣ ಸಿಗದೆ ಹೋಗಿದ್ದರೆ ಬಹಳ ಪೂರ್ವದಲ್ಲಿದ್ದಂತಹ ಪಿಡುಗೆಂದರೆ ನಾಲ್ಕು ಮೂಲೆಯಲ್ಲಿಯೇ ಹೆಣ್ಣಿನ ಜೀವನ ನಾಶವಾಗುತ್ತಿತ್ತು, ಮಹಾ ತಾಯಿ ಅಕ್ಷರದವ್ವ ಪುಲೆಯವರು ಅಂದಿನ ಕಾಲದಲ್ಲಿ ಶಿಕ್ಷಣ ಹೆಣ್ಣು ಮಕ್ಕಳಿಗೆ ಬೇಕು ಎಂದು ಹಠ ಹಾಗೂ ಹೋರಾಟ ಮಾಡಿ ಕಲಿಕೆ ಮಾಡಿದ ಪರಿಣಾಮ ಇಂದು ಸಮಾಜದಲ್ಲಿ ಹೆಣ್ಣಿಗೆ ಸ್ಥಾನಮಾನ ದೊರೆತಿವೆ, ಇನ್ನೂಆರ್ಥಿಕವಾಗಿ ಹಿಂದೆ ಇರುವಂಥ ಸಾಕಷ್ಟು ಕುಟುಂಬಗಳು ಶಿಕ್ಷಣ ಕೊಡಿಸುವುದಕ್ಕೆ ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ ಮತ್ತು ಹೆಣ್ಣಿನ ಶೋಷಣೆ ವಿರುದ್ಧ ನಮ್ಮ ಸಂಘವು ಮುಂದಿನ ದಿನದಲ್ಲಿಅವರ ಪರವಾಗಿ ನಿಲ್ಲುತ್ತದೆ, ಅವರಿಗೆ ಶಕ್ತಿ ನೀಡುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿಯಾಗಿ ದೇವಿಕಾ, ಕೋಶಾಧ್ಯಕ್ಷರಾಗಿ ಅನಿತಾ, ಉಪಾಧ್ಯಕ್ಷರಾಗಿ ದ್ರಾಕ್ಷಾಯಣಮ್ಮ, ವಿಶಾಲಾಕ್ಷಿ, ಸುಗುಣ, ಸುನಿತಾ, ಸುಭಾಷಿಣಿ, ಶಶಿಕಲಾ, ಕಾರ್ಯದರ್ಶಿಯಾಗಿ ಪದ್ಮಾವತಿ, ಲತಾಮಣಿ, ಸುವರ್ಣ, ಪ್ರೇಮಮ್ಮ, ಚಂದ್ರಕಲಾ, ಸಿದ್ದಗಂಗಮ್ಮ, ಶಕುಂತಲಾ, ಆಶಾ, ಅರ್ಪಣ, ಮಂಜಮ್ಮ, ಪಂಕಜ, ವರಲಕ್ಷ್ಮಿ ಸೇರಿದಂತೆ ಕಾರ್ಯಕಾರಿ ಸಮಿತಿಯವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!