ಕುಣಿಗಲ್: ಮಠದಲ್ಲಿ ಮಹಾ ಶಿವರಾತ್ರಿ ಹಬ್ಬಾಚರಣೆ ಸಿದ್ಧತೆಯಲ್ಲಿ ತೊಡಿಗಿದ್ದ ಮಠದ ಸ್ವಾಮೀಜಿ ಹಾಗೂ ಸ್ವಾಮೀಜಿಯ ಆಪ್ತ ಸಹಾಯಕನನ್ನು ಪೊಲೀಸರು ಫೋಸ್ಕೊ ಪ್ರಕರಣದಲ್ಲಿ ಬಂಧಿಸಿರುವ ಘಟನೆ ತಾಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತರನ್ನು ಹುಲಿಯೂರು ದುರ್ಗ ಸಮೀಪದ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಬಾಲ ಮಂಜುನಾಥ ಸ್ವಾಮಿ ಹಾಗೂ ಇವರ ಅಪ್ತ ಸಹಾಯಕ ಅಭಿಲಾಶ್ ಎಂದು ಗುರುತಿಸಲಾಗಿದೆ, ಘಟನೆ ನಡೆದಾಗ ಅಪ್ರಾಪ್ತೆ ಈಗ ಪ್ರಾಪ್ತ ವಯಸ್ಕಳಾಗಿರುವ ಮಹಿಳೆಯೊಬ್ಬರು ಏಳು ವರ್ಷದ ಹಿಂದೆ ಮಠಕ್ಕೆ ಬಂದಾಗ ಸ್ವಾಮೀಜಿ, ಅವರ ಆಪ್ತ ಸಹಾಯಕನ ನಿರಂತರ ಲೈಂಗಿಕ ಕಿರುಕುಳ, ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಮಾ.7 ರಂದು ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಗುರುವಾರ ರಾತ್ರಿ ಮಠಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಶುಕ್ರವಾರ ಮಹಾ ಶಿವರಾತ್ರಿ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದ ಮಠದ ಸ್ವಾಮೀಜಿ, ಅಪ್ತಸಹಾಯಕನನ್ನು ತೀವೃ ವಿಚಾರಣೆ ನಡೆಸಿ ತಡರಾತ್ರಿ ಬಂಧಿಸಿ, ಶುಕ್ರವಾರ ಮಧ್ಯಾಹ್ನ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ನಂತರ ಮುಂದಿನ ಕ್ರಮ ಜರುಗಿಸಿದರು.
ಇತ್ತ ಶುಕ್ರವಾರ ಮಠದಲ್ಲಿ ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿ ವಿಧಾನ, ಪೂಜೆಗಳನ್ನು ಮಠಾಧೀಶರ ಗೈರು ಹಾಜರಿನಲ್ಲಿ ಅರ್ಚಕರು ನೆರವೇರಿಸಿದರು, ಮೂರು ದಿನಗಳ ರಜೆ ಹಾಗೂ ಶುಕ್ರವಾರ ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡರು, ಕೆಲ ಭಕ್ತರು ಮಠದ ಏಳಿಗೆ ಸಹಿಸದ ಕೆಲವರು ಈ ರೀತಿ ಸ್ವಾಾಮೀಜಿಯವರಿಗೆ ಕಿರುಕುಳ ನೀಡಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಫೆಬ್ರವರಿ ಮಾಹೆಯಲ್ಲಿ ಮಠಾಧೀಶ ಬಾಲಮಂಜುನಾಥ ಸ್ವಾಮೀಜಿ, ತುಮಕೂರು ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದು ದೂರಿನಲ್ಲಿ ತಮಗೆ ಗುಪ್ತಾಗದ ಬಳಿ ಚರ್ಮರೋಗ ಸಮಸ್ಯೆ ಇದ್ದು ಇದನ್ನು ವೈದ್ಯೆಯೊಬ್ಬರ ಬಳಿ ತೋರಿಸಿಕೊಳ್ಳುತ್ತಿದ್ದರ ವೀಡಿಯೋ ಬಳಸಿಕೊಂಡ ಕೆಲವರು ತಮ್ಮನ್ನು ಹಣಕ್ಕಾಗಿ ಶೋಷಣೆ ಮಾಡುತ್ತಿದ್ದು, ಮಾಜಿ ಅಪ್ ಸಹಾಯಕ ಅಭಿಶೇಕ್ ಇತತರ ಮೇಲೆ ಕ್ರಮ ಕೈಗೊಳ್ಳುವಂತೆ ತಮ್ಮ ಅಪ್ತ ಸಹಾಯಕ ಅಭಿಲಾಶ್ ಮೂಲಕ ದೂರು ದಾಖಲಿಸಿದ್ದರು.
Comments are closed.