ತಂಜಾವೂರಿನ ನಿಫ್ ಟೀಮ್ಗೆ ಸುರೇಶ್ಗೌಡ ಭೇಟಿ

13

Get real time updates directly on you device, subscribe now.


ತುಮಕೂರು: ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಗೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ಗೌಡ ಭೇಟಿ ನೀಡಿದರು .
ಕೇಂದ್ರ ಸರ್ಕಾರದ ಆಹಾರ ಸಂಸ್ಕರಣೆ ಉದ್ಯಮಗಳ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವ ಈ ಸಂಸ್ಥೆಯು ಯುಜಿಸಿಯಿಂದ ಡೀಮ್ ಟು ಬಿ ಯುನಿವರ್ಸಿಟಿ ಸ್ಥಾನಮಾನ ಪಡೆದಿದೆ, ಸದ್ಯ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣೆ ಖಾತೆಯನ್ನು ನಮ್ಮವರೇ ಆದ ಶೋಭಾ ಕರಂದ್ಲಾಜೆ ನೋಡಿಕೊಳ್ಳುತ್ತಿದ್ದಾರೆ, 2015 ರ ಅನುಸಾರ ಜಾಗತಿಕ ಮಟ್ಟದ ಈ ಸಂಸ್ಥೆ ಸ್ಥಾಪಿಸಲಾಗಿದೆ, ಇಲ್ಲಿ ಬಿಟೆಕ್ ನಿಂದ ಹಿಡಿದು ಪಿ ಎಚ್ ಡಿ ವರೆಗೆ ವಿವಿಧ ಪದವಿ ಕೊಡಲಾಗುತ್ತಿದೆ.

ಈ ಸಂಸ್ಥೆಯು ಆಹಾರ ಸಂಸ್ಕರಣೆ ಉದ್ಯಮದಲ್ಲಿರುವವರಿಗೆ, ರಫ್ತುದಾರರಿಗೆ, ನೀತಿ ನಿರೂಪಕರಿಗೆ, ಸರ್ಕಾರ ಮತ್ತು ಈಗಾಗಲೇ ಅಸ್ತಿತ್ವದಲ್ಲಿ ಇರುವ ವಿವಿಧ ಸಂಸ್ಥೆಗಳಿಗೆ ಆಹಾರದ ಗುಣಮಟ್ಟದ ಪತ್ತೆ ಹಾಗೂ ನಿರ್ವಹಣೆಗೆ ನೆರವು ನೀಡಲಿದೆ, ಈ ಸಂಸ್ಥೆಯು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಕೂಡ ಆಹಾರ ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ಇತರ ಸಂಸ್ಥೆಗಳ ಜತೆಗೆ ನೆಟ್ವರ್ಕಿಂಗ್ ಹಾಗೂ ಸಮನ್ವಯಕ್ಕೆ ಒಂದು ಅಪೆಕ್ಸ್ ಸಂಸ್ಥೆಯಾಗಿ ನಿಫ್ ಟೀಮ್ ಕೆಲಸ ಮಾಡುತ್ತಿದೆ ಎಂದರು.

ಇಲ್ಲಿಗೆ ಭೇಟಿ ನೀಡಿ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆಗೆ ನಡೆಸಿದ ಸಂವಾದ ನನ್ನ ಜೀವನದಲ್ಲಿ ಒಂದು ಅಪೂರ್ವ ಅನುಭವ, ನಾವು ಸೇವಿಸುವ ಆಹಾರ ಪದಾರ್ಥಗಳು, ಹಾಲು ಇತ್ಯಾದಿಗಳಲ್ಲಿ ಬೆರೆತಿರ ಬಹುದಾದ ಕೀಟನಾಶಕಗಳು ಮತ್ತು ಅದರಿಂದ ಆಗುವ ಪರಿಣಾಮ ಕುರಿತು ತಿಳಿದಾಗ ಗಾಬರಿಯಾಯಿತು, ಅದರ ಜೊತೆಗೆ ಈ ಸಂಸ್ಥೆ ಮಾಡುತ್ತಿರುವ ಕೆಲಸದ ಮಹತ್ವದ ಅರಿವು ಕೂಡ ಆಯಿತು ಎಂದು ಸುರೇಶ್ಗೌಡ ತಿಳಿಸಿದ್ದಾರೆ.

ಇಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಬಂದಿದ್ದ ವಿದ್ಯಾರ್ಥಿನಿಯರೂ ಇದ್ದರು, ಅವರ ಜೊತೆಗೂ ಚರ್ಚೆ ಮಾಡಿದೆ, ಇಂಥ ಸಂಸ್ಥೆಗಳು ಇಡೀ ದೇಶದಲ್ಲಿ ಎರಡೋ ಮೂರೋ ಇವೆಯಂತೆ, ನಮ್ಮ ತುಮಕೂರಿನಲ್ಲಿ ಇಂಥ ಒಂದು ಸಂಸ್ಥೆ ಸ್ಥಾಪಿಸಿ ಇದರ ಪ್ರಯೋಜನವನ್ನು ಕರ್ನಾಟಕದ ಜನರೂ ಪಡೆಯುವಂತೆ ಆಗಬೇಕು ಎನ್ನುವುದು ನನ್ನ ಕನಸು, ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ದಿಗ್ವಿಜಯ ಸಾಧಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರದ ಮುಂದೆ ಮನವಿ ಸಲ್ಲಿಸಿ ಈ ಸಂಸ್ಥೆ ಅಥವಾ ಅದರ ಶಾಖೆಯನ್ನು ಕರ್ನಾಟಕಕ್ಕೆ, ಸಾಧ್ಯವಾದರೆ ತುಮಕೂರಿಗೆ ತರಲು ಪ್ರಯತ್ನ ಮಾಡುವೆ ಎಂದು ಸುರೇಶ್ ಗೌಡ ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!