ಕುಣಿಗಲ್: ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ ಜೆಡಿಎಸ್- ಕಾಂಗ್ರೆಸ್ ಮೈತ್ರಿಯಾಗಿ ಬಿಜೆಪಿ ವಿರುದ್ಧ ಚುನಾವಣೆ ಎದುರಿಸಿದ್ದು ಈ ಬಾರಿ ಜೆಡಿಎಸ್- ಬಿಜೆಪಿ ಮೈತ್ರಿಯಾಗಿ ಕಾಂಗ್ರೆಸ್ ಎದುರಿಸುವ ಸಿದ್ಧತೆ ನಡೆದಿದೆ.
ಮೂರು ಪಕ್ಷಗಳು ಸಮಬಲದ ಕ್ಷೇತ್ರವಾಗಿರುವ ಕುಣಿಗಲ್ ಕ್ಷೇತ್ರದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಗ್ಯಾರಂಟಿ ಯೋಜನೆ ಹಾಗೂ ಗಿ¥sïÖ ಕಾರ್ಡ್ ರಾಜಕಾರಣ ಅದ್ದೂರಿ ಜಯತಂದು ಕೊಟ್ಟಿತ್ತು, ಜೆಡಿಎಸ್, ಬಿಜೆಪಿ ಒಂದೆ ಕುಟುಂಬಕ್ಕೆ ಸೇರಿದವರಾದರೂ ಪರಸ್ಪರ ಎದುರಾಳಿಗಳಂತೆ ಪ್ರಬಲವಾಗಿ ಹೋರಾಟ ನಡೆಸಿದರು, ಚುನಾವಣೆ ನಡೆದು ಕೇವಲ 9-10 ತಿಂಗಳ ಅವಧಿಯಲ್ಲೆ ಪರಸ್ಪರ ಎದುರಾಳಿಗಳಾಗಿದ್ದ ಬಿಜೆಪಿ- ಜೆಡಿಎಸ್ ನಾಯಕರು ಒಮ್ಮತದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೆಣೆಸಾಡುವಂತಾಗಿದೆ, 2024ರ ಲೋಕಸಭೆ ಚುನಾವಣೆಗೆ ಪರೋಕ್ಷವಾಗಿ ಕಾಂಗ್ರೆಸ್ ಸಿದ್ಧತೆ ನಡೆಸಿದ್ದು ಈಗಾಗಲೆ 1600 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಡಿಸಿಎಂ, ರಾಜ್ಯಸಚಿವರಿಂದ ಶಂಕು ಸ್ಥಾಪನೆ, ಉದ್ಘಾಟನೆ ನೆರವೇರಿಸಿದ್ದು, ಶಾಸಕ ಡಾ.ರಂಗನಾಥ್ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಮಹಿಳೆಯರ ಮತ ಸೆಳೆಯಲು ನಡೆಸಿದ್ದ ತಂತ್ರವನ್ನೆ ಲೋಕಸಭೆ ಚುನಾವಣೆ ಕಣದಲ್ಲೂ ಪ್ರಯೋಗಿಸಲು ಹೋಬಳಿವಾರು ಮಹಿಳಾ ಸಮಾವೇಶ ನಡೆಸುತ್ತಿದ್ದಾರೆ, ಈ ಮಧ್ಯೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕೈ ಕಾರ್ಯಕರ್ತರು ಗ್ರಾಮ ಗ್ರಾಮಗಳಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳುತ್ತಿದ್ದು ಕಳೆದಬಾರಿಗಿಂತ ಹೆಚ್ಚು ಮತಗಳನ್ನು ಹಾಲಿ ಸಂಸದ ಈಗಾಗಲೆ ಟಿಕೆಟ್ ಘೋಷಣೆಯಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕೈ ಅಭ್ಯರ್ಥಿ ಡಿ.ಕೆ.ಸುರೇಶ್ ಗೆಲುವಿಗೆ ಶ್ರಮಿಸುತ್ತಿದ್ದಾರೆ.
ಮೈತ್ರಿ ಪಕ್ಷದ ಅಭ್ಯರ್ಥಿ ಅಖೈರುಗೊಳ್ಳದ ಕಾರಣ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಮುಖಂಡರು ಕಾದು ನೋಡುವ ತಂತ್ರಕ್ಕೆ ಮೋರೆ ಹೋಗಿದ್ದಾರೆ, ಬಿಜೆಪಿ ಪಕ್ಷದಿಂದ ಗ್ರಾಮ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದರೂ ಕಾರ್ಯಕರ್ತರ ಹುಮ್ಮಸ್ಸಿನ ಕೊರತೆ ಕಾರಣ ಕುಂಟುತ್ತಾ ಸಾಗಿದೆ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆಯೂ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಯಾವುದೇ ರಾಜ್ಯ, ಜಿಲ್ಲಾ ನಾಯಕರು ಚುರುಕು ಮುಟ್ಟಿಸದ ಕಾರಣ ಜನರಲ್ಲಿ ಯೋಜನೆ ಬಗ್ಗೆ ಅರಿವಿಲ್ಲದಂತಾಗಿದೆ, ಅಭ್ಯರ್ಥಿ ಬಗ್ಗೆ ಚರ್ಚೆಗೆ ಇತ್ತೀಚೆಗೆ ತಾಲೂಕಿನ ಜೆಡಿಎಸ್, ಬಿಜೆಪಿ ಮುಖಂಡರು ಮಾಜಿ ಸಿಎಂ ಕುಮಾರಸ್ವಾಮಿ ಮನೆಯಲ್ಲಿ ನಡೆದ ಸಭೆಗೆ ತೆರಳಿದ್ದು ಮೇಲ್ಮಟ್ಟದಲ್ಲಿ ಜೆಡಿಎಸ್- ಬಿಜೆಪಿ ನಾಯಕರು ಒಂದಾಗಿದ್ದಾರೆಂದು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಕೆಳಮಟ್ಟದ ಕಾರ್ಯಕರ್ತರು ಎಷ್ಟರ ಮಟ್ಟಿಗೆ ಒಂದಾಗುತ್ತಾರೆ ಎಂದು ಚುನಾವಣೆ ಕಣದಲ್ಲಿ ನಿರ್ಧಾರವಾಗಲಿದೆ ಎನ್ನುತ್ತಾರೆ ಎರಡೂ ಪಕ್ಷದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಣೆಗೆ ಮುನ್ನವೆ ಕಾಂಗ್ರೆಸ್ ಪಾಳೆಯ ಅತ್ಯಂತ ಚುರುಕಿನಿಂದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಮೈತ್ರಿ ಪಕ್ಷ ಕಾರ್ಯಕರ್ತರು ಅಭ್ಯರ್ಥಿ ಘೋಷಣೆಗೆ ಕಾಯುತ್ತಾ ಕುಳಿತಿದ್ದಾರೆ.
Comments are closed.