ರಾಷ್ಟ್ರೀಯ ಮಟ್ಟದ ನೆಟ್ ಬಾಲ್ ಚಾಂಪಿಯನ್ ಶಿಪ್

ಕೇಶನ್ ಆಯೋಜಿಸುತ್ತಿದೆ ಎಂದರು. ಮಾರ್ಚ್ 12 ರಿಂದ 15ರ ವರೆಗೆ ಸಾಹೇ ವಿವಿಯಲ್ಲಿ ಪಂದ್ಯಾವಳಿ

13

Get real time updates directly on you device, subscribe now.


ತುಮಕೂರು: ಇದೇ ಪ್ರಪಥಮ ಬಾರಿಗೆ ತುಮಕೂರಿನ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ಎಜುಕೇಷನ್ ವಿಶ್ವವಿದ್ಯಾಲಯ ಅಖಿಲ ಭಾರತ ಅಂತರ ವಿಶ್ವ ವಿದ್ಯಾಲಯ ನೆಟ್ ಬಾಲ್ ಚಾಂಪಿಯನ್ ಶಿಪ್ನ್ನು ತುಮಕೂರಿನಲ್ಲಿ ಆಯೋಜಿಸುತ್ತಿದೆ, ಇದೇ ತಿಂಗಳ 12 ರಿಂದ 15 ರ ತನಕ ನಡೆಯಲಿರುವ ಈ ಟೂರ್ನಿಯಲ್ಲಿ ದೇಶದ 72 ವಿಶ್ವ ವಿದ್ಯಾಲಯದ ತಂಡಗಳು ಭಾಗವಹಿಸುತ್ತಿವೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ತಿಳಿಸಿದರು.

ನಗರದ ಸಮೀಪದ ಅಗಳಕೋಟೆಯಲ್ಲಿರುವ ಸಾಹೇ ವಿಶ್ವ ವಿದ್ಯಾಲಯದ ಆಡಳಿತ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟೂರ್ನಿಯ ವಿವರ ನೀಡಿದ ಅವರು ಒಂದು ತಂಡದಲ್ಲಿ 12 ಮಂದಿಯಿದ್ದು 852 ನೆಟ್ಬಾಲ್ ಕ್ರೀಡಾಪಟುಗಳು, ತಂಡದ ಕೋಚ್ ಮತ್ತು ಮ್ಯಾನೇಜರ್, 60 ರೆಫ್ರಿಗಳು, 250 ಮಂದಿ ಸಂಘಟಕನಾ ಸಮಿತಿ ಸದಸ್ಯರು ದೇಶದ ವಿವಿಧ ರಾಜ್ಯಗಳಿದ್ದು ಆಗಮಿಸುತ್ತಿದ್ದಾರೆ, ಅಖಿಲ ಭಾರತ ನೆಟ್ ಬಾಲ್ ಫೆಡರೇಷನ್, ಕರ್ನಾಟಕ ಮತ್ತು ತುಮಕೂರು ವಿಭಾಗದ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ಈ ನೆಟ್ ಬಾಲ್ ಟೂರ್ನಿಯನ್ನು ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜು
ನಾಲ್ಕು ದಿನದ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಮತ್ತು ತಂಡದ ಇತರಿಗೆ ವಸತಿ, ಊಟ ಮತ್ತು ಸಾರಿಗೆ ವ್ಯವಸ್ಥೆ ಸಂಪೂರ್ಣ ಮೇಲುಸ್ತುವಾರಿಯನ್ನು ಸಾಹೇ ವಹಿಸಿದೆ, ಸಾಹೇ ವಿಶ್ವ ವಿದ್ಯಾಲಯದ ಕುಲಾಧಿಪತಿ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಸ್ವತಃ ರಾಜ್ಯಮಟ್ಟದ ಕ್ರೀಡಾಪಟುವಾಗಿದ್ದು, ತಮ್ಮ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಅಧ್ಯಯನದ ಜೊತೆಗ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುವುದಕ್ಕೆ ಈ ರಾಷ್ಟ್ರೀಯ ಟೂರ್ನಿ ತಾಜಾ ಉದಾಹರಣೆ ಎಂದು ಡಾ.ಕೆ.ಬಿ.ಲಿಂಗೇಗೌಡ ವಿವರಿಸಿದರು.

ಕ್ರಿಕೆಟ್, ಫುಟ್ ಬಾಲ್, ಹಾಕಿ, ಬಾಸ್ಕೆಟ್ ಬಾಲ್, ಥ್ರೋ ಬಾಲ್, ಶಟಲ್ ಬ್ಯಾಡ್ಮಿಂಟನ್, ಲಾನ್ಟೆನಿಸ್, ಟೇಬಲ್ ಟೆನಿಸ್, ಈಜು, ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್ ಮತ್ತು ಇತರ ಕ್ರೀಡೆಗಳಲ್ಲಿ ಸ್ಪರ್ಧಾತ್ಮಕ ತಂಡಗಳನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ, ಈ ನಿಟ್ಟಿನಲ್ಲಿ ಸಾಹೇ ವಿಶ್ವ ವಿದ್ಯಾಲಯವು ಕ್ರೀಡಾಪಟುಗಳಿಗೆ ತಮ್ಮ ಕ್ರೀಡಾ ಮಹತ್ವಾಕಾಂಕ್ಷೆ ಸಾಧಿಸಲು ಸಹಾಯ ಮಾಡಲು ಸಂಪೂರ್ಣ ಬೆಂಬಲವನ್ನು ಡಾ.ಜಿ.ಪರಮೇಶ್ವರ ಅವರು ನೀಡುತ್ತಿದ್ದಾರೆ ಎಂದು ನುಡಿದರು.

ಸ್ವಂತ ಕ್ರೀಡಾಂಗಣ ಸಜ್ಜು: ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಶಾಲ ಕ್ರೀಡಾಂಗಣದಲ್ಲಿ 6 ಕೋರ್ಟ್ಗಳನ್ನು ನಿರ್ಮಿಸಲಾಗಿದೆ, ಆಧುನಿಕ ವ್ಯವಸ್ಥೆ ಇಲ್ಲಿ ಕಲ್ಪಿಸಲಾಗಿದೆ, ನೆಟ್ ಬಾಲ್ ತರಬೇತಿದಾರರು ಮತ್ತು ವಿವಿಧ ವಿಶ್ವವಿದ್ಯಾಲಯ ಕ್ರೀಡಾ ತಜ್ಞರ ತಂಡ ಈಗಾಗಲೆ ಟೂರ್ನಿ ನಡೆಯುವ ಮೈದಾನದಲ್ಲಿ ಪರಿಶೀಲನೆ ನಡೆಸಿದ್ದಾರೆ, ಮಾರ್ಚ್ 12 ರಂದು ಕ್ರೀಡಾಕೂಟ ಉದ್ಘಾಟನೆಗೊಂಡ ನಂತರದ ನಾಕ್ ಔಟ್ ಹಂತದಿಂದ ಲೀಗ್ ಹಂತದ ತನಕ ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 6.30ರ ತನಕ ಮ್ಯಾಚ್ ಗಳನ್ನು ನಡೆಸಲಾಗುತ್ತದೆ, ಈಗಾಗಲೇ ಇದಕ್ಕೆ ಬೇಕಾದ ಮಾರ್ಗಸೂಚಿ ಸಿದ್ಧಪಡಿಸಿ ಸಂಬಂಧಪಟ್ಟ ತಂಡಗಳಿಗೆ ವಿತರಿಸಲಾಗಿದೆ ಎಂದು ಸಾಹೇ ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಶಿಶಿಕುಮಾರ್ ವಿವರಿಸಿದರು.

ವಸತಿ ಸೌಲಭ್ಯ: ಕ್ರೀಡಾ ಪಟುಗಳು ಮತ್ತು ಕೋಚ್ಗಳು ಉಳಿದುಕೊಳ್ಳಲು ನಗರದ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಮತ್ತು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸೂಕ್ತ ವಸತಿ ಸೌಲಭ್ಯ ಕಲ್ಪಿಸಲಾಗಿದೆ, ಅಲ್ಲದೆ ಖಾಸಗಿ ಹೋಟಲ್ಗಳಲ್ಲಿಯೂ ಕೊಠಡಿ ಕಾಯ್ದಿರಿಸಲಾಗಿದೆ, ನಿರ್ವಹಣೆಗಾಗಿ ಸಮಿತಿಯೊದನ್ನು ರಚಿಸಿ, ನಿಗಾ ವಹಿಸಲು ಕ್ರಮಕೈಗೊಳ್ಳಲಾಗಿದೆ.
ಸಾರಿಗೆ: ಆಟಗಾರರು ಉಳಿದುಕೊಂಡಿರುವ ಜಾಗದಿಂದ ಟೂರ್ನಿ ನಡೆಯುವ ಕ್ರೀಡಾಂಗಣಕ್ಕೆ ಕರೆದೊಯ್ಯಲು ಸಿದ್ದಾರ್ಥ ಸಂಸ್ಥೆಯ ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಊಟದ ವ್ಯವ್ಯಸ್ಥೆ: ದೇಶದ ವಿವಿಧ ಭಾಗಗಳಿಂದ ಬಂದಿರುವ ಕ್ರೀಡಾಪಟುಗಳ ಅನುಕೂಲವಾಗುವಂತೆ ಊಟದ ವ್ಯವಸ್ಥೆಯನ್ನು ಕ್ರೀಡಾಪಟುಗಳಿಗೆ ಮಾಡಲಾಗಿದೆ, ಆದರೆ ಬೇರೆ ಕಡೆಗಳಲ್ಲಿ ಕ್ರೀಡಾಪಟುಗಳು ಊಟಕ್ಕೆ ಶುಲ್ಕ ಕಟ್ಟುವ ವ್ಯವಸ್ಥೆ ಇದೆ, ಆದರೆ ಸಾಹೇ ವಿವಿ ಇದರಿಂದ ಹೊರಲಾಗಿದೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಕೆ.ಶಿಶಿಕುಮಾರ್ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಪ್ರಭಾಕರ್, ಎಸ್ಎಸ್ಐಟಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರುದ್ರೇಶ್, ಕ್ರೀಡಾ ತರಬೇತುದಾರ ದಿವಾಕರ್, ಶ್ರೀಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!