ರಥಕ್ಕೆ ಬೆಂಕಿ ಇಟ್ಟ ಕಿಡಿಗೇಡಿ

52

Get real time updates directly on you device, subscribe now.


ಗುಬ್ಬಿ: ಗುಬ್ಬಿ ತಾಲೂಕಿನ ನಿಟ್ಟೂರು ಪುರ ಗ್ರಾಮದ ಐತಿಹಾಸಿಕ ಶ್ರೀ ಕಲ್ಲೇಶ್ವರ ಸ್ವಾಮಿ ಅವರ ರಥಕ್ಕೆ ಕಿಡಿಗೇಡಿ ಬೆಂಕಿ ಇಟ್ಟಿರುವಂತಹ ಘಟನೆ ನಡೆದಿದೆ.
ಸುಮಾರು 800 ವರ್ಷಗಳ ಇತಿಹಾಸ ಇರುವಂತಹ ಶ್ರೀಕಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತಾದಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಶೇಷವಾದ ರಥ ಸಿದ್ಧಪಡಿಸಿದ್ದರು, ಪ್ರತಿ ವರ್ಷವೂ ಜಾತ್ರಾ ಸಮಯದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಯ ಅನ್ನಪೂರ್ಣೇಶ್ವರಿ ರಥೋತ್ಸವ ಮಾಡಲಾಗುತ್ತಿತ್ತು, ಇನ್ನು ಕೇವಲ ಹತ್ತು ದಿನಗಳಲ್ಲಿ ರಥೋತ್ಸವವಿದ್ದು ಸೋಮವಾರ ಮಧ್ಯಾಹ್ನದ ವೇಳೆಯಲ್ಲಿ ಕಿಡಿಗೇಡಿ ಬೆಂಕಿ ಇಟ್ಟಿದ್ದು, ರಥ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಕನ್ನಡ ಮಾತನಾಡದ ಬಿಹಾರಿ ಮೂಲದ ವ್ಯಕ್ತಿ ತೇರಿಗೆ ಬೆಂಕಿ ಇಟ್ಟಿದ್ದಾನೆ ಎಂಬ ಮಾಹಿತಿ ಇದ್ದು ಸ್ಥಳದಲ್ಲಿಯೇ ಸಿಕ್ಕಿದ್ದಾನೆ, ಕೂಡಲೇ ಅವನನ್ನು ಗುಬ್ಬಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ಸ್ಥಳಕ್ಕೆ ನಾಡಕಚೇರಿಯ ಉಪ ತಹಶೀಲ್ದಾರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ, ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಇನ್ನು ಹತ್ತು ದಿನಗಳಲ್ಲಿ ಜಾತ್ರೆ ಇದ್ದು ಸಿದ್ದಲಿಂಗೇಶ್ವರ್ ತೇರಿನಲ್ಲಿಯೇ ಕಲ್ಲೇಶ್ವರ ಸ್ವಾಮಿಯ ತೇರು ಎಳೆಯುತ್ತೇವೆ, ಸರಕಾರ ಕೂಡಲೇ ಹೆಚ್ಚಿನ ಅನುದಾನ ನೀಡಿ ಮುಂದಿನ ವರ್ಷದ ಒಳಗೆ ತೇರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!