ಮಧುಗಿರಿ: ಪಟ್ಟಣದ ಲಿಂಗೇನ ಹಳ್ಳಿಯಲ್ಲಿರುವ ಕೆ ಆರ್ ಐಡಿಎಲ್ ಇಲಾಖೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಕಚೇರಿಯಲ್ಲಿದ್ದ ಕೆಲ ಕಡತಗಳು ಸುಟ್ಟು ಭಸ್ಮವಾಗಿವೆ.
ಸೋಮವಾರ ಬೆಳಗ್ಗೆ ಸುಮಾರು 6 ಘಂಟೆಯ ಸಮಯದಲ್ಲಿ ಇಲಾಖೆಯ ಪಕ್ಕಾದಲ್ಲಿರುವ ಹೋಟೆಲ್ ಮಾಲೀಕ ಕಚೇರಿಯ ಒಳಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಅಧಿಕಾರಿಗಳು ಬರುವ ವೇಳೆಗೆ ಕಚೇರಿಯಲ್ಲಿದ್ದ ಸುಮಾರು ಕಡತಗಳಿಗೆ ಬೆಂಕಿ ತಗುಲಿ ಹಾಳಾಗಿವೆ, ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರನ್ನು ಇಲಾಖೆಯ ಇಇ ಸಿಂಧೂ ಅವರು ದಾಖಲಿಸಿದ್ದು ಪಟ್ಟಣದ ಸಾರ್ವಜನಿಕರು ವರ್ಷದ ಕೊನೆಯ ಅವಧಿಯಾದ ಮಾರ್ಚ್ ತಿಂಗಳಲ್ಲಿಯೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿರುವುದಕ್ಕೆ ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಕಡತ ಭಸ್ಮ
Get real time updates directly on you device, subscribe now.
Prev Post
Next Post
Comments are closed.