ಮಾಧ್ಯಮ ಸಂಶೋಧನೆ ಕುರಿತು ಕಾರ್ಯಾಗಾರ

14

Get real time updates directly on you device, subscribe now.


ತುಮಕೂರು: ನಗರದ ಶ್ರೀಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಮಾಧ್ಯಮ ಸಂಶೋಧನೆ, ಅಭಿವೃದ್ಧಿ ಸಂವಹನ, ಮತ್ತು ಛಾಯಾಗ್ರಹಣದ ಕುರಿತು ಎರಡು ದಿನಗಳ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರಕ್ಕೆ ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವೇಣುಗೋಪಾಲ್ ಗೌಡ.ಎಂ.ಕೆ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಎರಡು ದಿನಗಳ ಕಾರ್ಯಾಗಾರದಲ್ಲಿ ಮಾಧ್ಯಮ ಸಂಶೋಧನೆ ಹಾಗೂ ಅಭಿವೃದ್ಧಿ ಸಂವಹನ ಮತ್ತು ಛಾಯಾಗ್ರಹಣದ ಹುಟ್ಟು, ಬೆಳವಣಿಗೆ, ಉಪಯೋಗಗಳ ಕುರಿತು ಅವರು ಮಾಹಿತಿ ನೀಡಿದರು, ಇಂತಹ ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳಿಗೆ ಆಗುವ ಅನುಕೂಲಗಳ ಬಗ್ಗೆ ಹಾಗೂ ವಿದ್ಯಾಭ್ಯಾಸದ ನಂತರ ಕೆಲಸ ಪಡೆದುಕೊಳ್ಳುವಲ್ಲೂ ಆಗುವ ಅನುಕೂಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಶಿಕ್ಷಣವೆಂಬುದು ಬಿತ್ತಿದ ಬೀಜವಿದ್ದಂತೆ, ವಿದ್ಯಾರ್ಥಿಗಳು ಕಲಿಕೆಯ ಕೃಷಿ ಮಾಡಬೇಕು, ಶಿಕ್ಷಕರು ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದರ ಮೂಲಕ ತಮ್ಮಲ್ಲಿರುವ ಜ್ಞಾನ ವಿಸ್ತರಿಸಿಕೊಳ್ಳಬಹುದು ಎಂದರು.
ಕಾರ್ಯಾಗಾರದಲ್ಲಿ ಮಾಧ್ಯಮ ಸಂಶೋಧನೆಯಲ್ಲಿ ಸಂಖ್ಯಾ ಶಾಸ್ತ್ರದ ಬಳಕೆ, ಉಪಯೋಗ, ಮಹತ್ವ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು, ಸಂವಹನವು ಪ್ರತಿಯೊಬ್ಬರಿಗೂ ಅತಿ ಅವಶ್ಯಕ, ಪಾಠದ ಜೊತೆ ಪ್ರಾಯೋಗಿಕವಾಗಿ ತಿಳಿದುಕೊಳ್ಳುವುದು ವಿದ್ಯಾರ್ಥಿಗಳಿಗೆ ಮುಖ್ಯವಾಗಿದೆ ಎಂದು ತಿಳಿಸಿದರು.

ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಕರ ಸರಿ ಸಮಾನವಾಗಿ ಸಾಧನೆ ಮಾಡುವುದು ಗುರುವಿಗೆ ಕೊಡುವಂಥ ಗೌರವ, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ನಿರಂತರವಾಗಿ ಕಲಿಕೆಯಲ್ಲಿ ನಿರತನಾಗಿರಬೇಕು, ನಮ್ಮ ಮಾಧ್ಯಮ ಅಧ್ಯಯನ ಕೇಂದ್ರವು ಇಂತಹ ಕಾರ್ಯಗಾರಗಳನ್ನು ಹಲವಾರು ವರ್ಷಗಳಿಂದ ಹಮ್ಮಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗೇಂದ್ರ, ಜ್ಯೋತಿ.ಸಿ, ಶ್ವೇತಾ.ಎಂ.ಪಿ ಹಾಗೂ ವಿದ್ಯಾರ್ಥಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!