ಗ್ಯಾರಂಟಿ ಜೊತೆ ಅಭಿವೃದ್ಧಿ ಕಾರ್ಯ ಆಗ್ತಿದೆ: ಪರಂ

13

Get real time updates directly on you device, subscribe now.


ಕೊರಟಗೆರೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಜಾರಿಯಾದ ಭಾರತ ಸರ್ಕಾರದ ನರೇಗಾ ಯೋಜನೆಯು ವಿಶ್ವಸಂಸ್ಥೆ ಮೆಚ್ಚಿಕೊಂಡಂತಹ ಯೋಜನೆಯಾಗಿದ್ದು ಈ ಯೋಜನೆಯಿಂದ ದೇಶದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಹುದೊಡ್ಡ ಅಭಿವೃದ್ಧಿಯಾಗುತ್ತಿದೆ, ಇಂತಹ ಯೋಜನೆಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮತ್ತಷ್ಟು ಬರಬೇಕಿದೆ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆರಣದಲ್ಲಿ 14.5 ಕೋಟಿ ರೂ. ವೆಚ್ಚದ ಶಾಲಾ ಅಭಿವೃದ್ಧಿಗಳ ಕಾಮಗಾರಿ, ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಹಾಗೂ ರೈತರಿಗೆ ವಿವಿಧ ಸವಲತ್ತು ವಿತರಿಸಿ ಮಾತನಾಡಿ, ಗ್ಯಾರಂಟಿಗಳ ನಡುವೆಯೂ ರಾಜ್ಯದ ಸಮಗ್ರ ಅಭಿವೃದ್ಧಿ ಸರ್ಕಾರ ಮಾಡುತ್ತಿದ್ದು ಕಳೆದ ತಿಂಗಳು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 700 ಕೋಟಿ ರೂ. ವಿವಿಧ ಸವಲತ್ತು ನೀಡಿರುವುದೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರತಿ ಬಡವರಿಗೂ ಸೂರು ಕಲ್ಪಿಸಲು 2 ಸಾವಿರ ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿ ಅಲ್ಲಿ ಬಡವರಿಗೆ ನಿವೇಶನ ಹಂಚಿ ಮನೆ ಕಟ್ಟಿ ಕೊಡುವ ಕೆಲಸ ಮಾಡಲಾಗುವುದು, ಅದೇ ರೀತಿಯಾಗಿ ಕೊರಟಗೆರೆ ತಾಲೂಕಿನಲ್ಲೂ 100 ಎಕರೆ ಜಮೀನನ್ನು ಗುರುತಿಸಲಾಗಿದೆ, ತುಮಕೂರು ಜಿಲ್ಲೆಯಲ್ಲಿ 6.16 ಲಕ್ಷ ಮಹಿಳೆಯರಿಗೆ 561 ಕೋಟಿ ರೂ. ಗೃಹಭಾಗ್ಯ ಯೋಜನೆ ನೀಡಲಾಗಿದೆ, 9 ತಿಂಗಳಲ್ಲಿ 276 ಕಾಮಗಾರಿ ನರೇಗಾ ಯೋಜನೆಗಳಲ್ಲಿ ಮಾಡಲಾಗುತ್ತಿದೆ.

5 ಗ್ಯಾರಂಟಿಗಳಿಂದ 1200 ಕೋಟಿ ರೂ. ಗಳಿಗೂ ಹೆಚ್ಚು ಅನುದಾನ ಮಹಿಳೆಯರಿಗೆ ನೀಡಲಾಗಿದೆ, ಸರ್ಕಾರವು 5 ವರ್ಷದ ವರೆಗೂ ಅಭಿವೃದ್ಧಿ ಪರ್ವ ಮುಂದುವರೆಸಲಿದ್ದು ಯಾವುದೇ ಕಾರಣಕ್ಕೂ 5 ಗ್ಯಾರಂಟಿ ನಿಲ್ಲಿಸಲ್ಲಾ ಎಂದರು.
ಕೊರಟಗೆರೆ ತಾಲೂಕಿನಲ್ಲಿ ಇಂದು 13.5 ಕೋಟಿ ರೂ. ವೆಚ್ಚದಲ್ಲಿ ಹಲವು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ, 20.80 ಲಕ್ಷ ರೂ. ವೆಚ್ಚದಲ್ಲಿ 16 ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ನೀಡಲಾಗಿದೆ, ರೈತರಿಗೆ ವಿವಿಧ ಇಲಾಖೆಗಳಿಂದ 22 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಸೌಲಭ್ಯ ನೀಡಲಾಗಿದೆ, ಈ ಅಭಿವೃದ್ಧಿ ಹಾಗೂ ಜನಪರ ಕೆಲಸ ಹೀಗೆ ಮುಂದುವರೆಯುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾಪಂಚಾಯಿತಿ ಸಿಇಒ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ತಹಶೀಲ್ದಾರ್ ಮಂಜುನಾಥ್, ತಾಪಂ ಇಓ ಅಪೂರ್ವ, ಅಧಿಕಾರಿ ಗುರುಮೂರ್ತಿ, ಮಧುಸೂದನ್, ಪೃಥ್ವಿಭಾ, ಸಿಬ್ಬಂದಿ ಬಸವರಾಜು, ಸೌಭಾಗ್ಯ, ಜಗದೀಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!