ಅನಂತ್ ಕುಮಾರ್ ಹೆಗಡೆ ವಿರುದ್ಧ ಪತ್ರಕರ್ತರ ಆಕ್ರೋಶ

43

Get real time updates directly on you device, subscribe now.


ಮಧುಗಿರಿ: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿರುದ್ಧವಾಗಿ ಬೇಷರತ್ತಾಗಿ ಹಾಗೂ ಬಹಿರಂಗವಾಗಿ ರಾಜ್ಯದ ಎಲ್ಲಾ ಪತ್ರಕರ್ತರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ತಾಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತಕರ ಸಂಘದ ಪದಾಧಿಕಾರಿಗಳು ಗ್ರೇಡ್ 2 ತಹಸೀಲ್ದಾರ್ ಇನಾಯತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪತ್ರಕರ್ತರ ತಾಲ್ಲೂಕು ಸಂಘದ ಅಧ್ಯಕ್ಷ ಚಂದ್ರಕಾಂತ್.ವಿ.ಹೆಚ್. ಮಾತನಾಡಿ ಉತ್ತರ ಕನ್ನಡದ ಸಂಸತ್ ಸದಸ್ಯ ಅನಂತ್ ಕುಮಾರ್ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಆನೆ ಹೋಗಿದ್ದೆ ದಾರಿ ಎಂಬಂತೆ ನಾವು ಇರಬೇಕು, ಮಾಧ್ಯಮಗಳು ಏನು ಬೇಕಾದರೂ ಬರೆದುಕೊಳ್ಳಲಿ, ಆನೆಗಳು ಹೋಗುವಾಗ ನಾಯಿಗಳು ಬೊಗಳುವುದು ಸಹಜ ಎಂದು ಮಾಧ್ಯಮದವರನ್ನು ಹೀಯಾಳಿಸಿರುವುದು ಖಂಡನೀಯವಾಗಿದ್ದು ಅವರು ಕೂಡಲೇ ಬೇಷರತ್ತಾಗಿ ಬಹಿರಂಗವಾಗಿ ರಾಜ್ಯದ ಎಲ್ಲಾ ಪತ್ರಕರ್ತರನ್ನು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ನಿರ್ದೇಶಕ ಮಹರಾಜು ಮಾತನಾಡಿ ಅನಂತ್ ಕುಮಾರ್ ಹೆಗಡೆ ಒಮ್ಮೆ ಸಂವಿಧಾನ ಹಾಗೂ ಪತ್ರಕರ್ತರ ಬಗ್ಗೆ ಮನಸೋ ಇಚ್ಚೆ ಮಾತನಾಡುತ್ತಾ ತಮ್ಮ ನಾಲಿಗೆ ಹರಿ ಬಿಡುತ್ತಿದ್ದಾರೆ, ಇಂತಹವರಿಗೆ ಬಿಜೆಪಿಯಲ್ಲಿ ಟಿಕೆಟ್ ನೀಡಬಾರದು, ಈತನನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಉಪಾಧ್ಯಕ್ಷ ದೊಡ್ಡೇರಿ ಕಣಿಮಯ್ಯ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ.ಎಂ.ಎನ್, ಸಹ ಕಾರ್ಯದರ್ಶಿ ಗಂಗಾಧರ್, ಪದಾಧಿಕಾರಿಗಳಾದ ದೊಡ್ಡೇರಿ ಲಕ್ಷ್ಮೀ ನರಸಪ್ಪ, ಮಾರುತಿ ಪ್ರಸನ್ನ ಕುಮಾರ್, ಕಂಬಣ್ಣ, ಪ್ರಸನ್ನಕುಮಾರ್, ಸೋಮಶೇಖರ್, ಮಂಜುನಾಥ್, ಶಿವಕುಮಾರ್ ಇದ್ದರು.

Get real time updates directly on you device, subscribe now.

Comments are closed.

error: Content is protected !!