ತುಕಾಲಿ ಕಾರಿಗೆ ಆಟೋ ಡಿಕ್ಕಿ- ಚಾಲಕ ಸಾವು

18

Get real time updates directly on you device, subscribe now.


ಕುಣಿಗಲ್: ಬಿಗ್ ಬಾಸ್ ಸ್ಪರ್ಧಿ ಹಾಗೂ ಕಿರುತೆರೆ ಕಲಾವಿದ ತುಕಾಲಿ ಸಂತೋಶ್ ದಂಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಆಟೋ ಡಿಕ್ಕಿ ಹೊಡೆದು ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವ ಘಟನೆ ನಡೆದಿದೆ.
ಬುಧವಾರ ರಾತ್ರಿ ಕಿರುತೆರೆ ನಟ ತುಕಾಲಿ ಸಂತೋಶ್ ಕಾರ್ಯಕ್ರಮ ಮುಗಿಸಿಕೊಂಡು ಕಾರಿನಲ್ಲಿ ಕುಣಿಗಲ್ ಮೂಲಕ ತಮ್ಮೂರಿಗೆ ಹೊಗುತ್ತಿರುವಾಗ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ಕೊಡಿಹಳ್ಳಿ ಗೇಟ್ ಬಳಿ ಆಟೋ ರಿಕ್ಷಾ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಆಟೋ ಚಾಲಕ ಗಾಯಗೊಂಡನು, ಪೊಲೀಸರು ಸ್ಥಳಕ್ಕೆ ತೆರಳಿ ರಿಕ್ಷ ಚಾಲಕ ಜಗದೀಶ್ (44) ನನ್ನು ಆಸ್ಪತ್ರೆಗೆ ಸೇರಿಸಿ ದೂರು ದಾಖಲಿಸಿ ಕಾರನ್ನು ವಶಕ್ಕೆ ಪಡೆದರು, ಬೇರೊಂದು ಕಾರಿನಲ್ಲಿ ಸಂತೋಶ್ ತಮ್ಮೂರಿಗೆ ಪ್ರಯಾಣ ಬೆಳೆಸಿದರು, ಗುರುವಾರ ಬೆಳಗ್ಗೆ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

Get real time updates directly on you device, subscribe now.

Comments are closed.

error: Content is protected !!